ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ FIR
ಮೈಸೂರು

ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ FIR

June 28, 2020

ಬೆಂಗಳೂರು, ಜೂ. 27(ಕೆಎಂಶಿ)- ಕೊರೊನಾ ನಗರ ಪ್ರದೇಶವಲ್ಲದೆ, ಗ್ರಾಮೀಣ ಪ್ರದೇಶಕ್ಕೂ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ ವರ ವಿರುದ್ಧ ಎಫ್‍ಐಆರ್ ದಾಖಲಿ ಸಲು ಸರ್ಕಾರ ಸ್ಥಳೀಯ ಪ್ರಾಧಿಕಾರ ಗಳಿಗೆ ಅಧಿಕಾರ ನೀಡಿದೆ. ಪೊಲೀಸ್ ಇಲಾಖೆ ಮೂಲಕವೇ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ. ಅಂಗಡಿ-ಮುಂಗಟ್ಟು, ವಾಣಿಜ್ಯ ಚಟುವಟಿಕಾ ಕೇಂದ್ರಗಳಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಸಾರ್ವಜನಿಕ ಹಿತದೃಷ್ಟಿ ಯಿಂದ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಬೇಕು. ಮಳಿಗೆಗಳ ಮುಂದೆ ಜನಸಂದಣಿ, ಧೂಮಪಾನ ಸೇರಿದಂತೆ ಸುಮ್ಮನೆ ನಿಂತಿರುವುದನ್ನು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿ, ಬ್ಯಾಂಕ್, ಮಾಲ್‍ಗಳು ಸೇರಿದಂತೆ ಇತರೆಡೆ ಕಾರ್ಯನಿರ್ವ ಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಂತರವನ್ನು ಕಾಯ್ದುಕೊಳ್ಳಬೇಕು. ಗ್ರಾಹಕರು ಮಾಸ್ಕ್ ಇಲ್ಲದೆ ಒಳಪ್ರವೇಶಿಸಿದರೆ ಅಂತಹವರನ್ನು ಹೊರ ಹಾಕಿ, ಅವರು ಯಾವುದೇ ಕೆಲಸಗಳನ್ನು ಮಾಡದಿರಲು ಸೂಚಿಸಲಾ ಗಿದೆ. ಹೊಟೇಲ್‍ಗಳಲ್ಲೂ ಶುಚಿತ್ವಕ್ಕೆ ಒತ್ತು ನೀಡಬೇಕು. ಗುಂಪುಗೂಡಲು ಅವಕಾಶ ನೀಡಬಾರದು. ಹೊಟೇಲ್‍ಗಳ ಮುಂದೆ ಅನವಶ್ಯಕವಾಗಿ ನಿಂತರೆ ಅವರ ಮೇಲೆ ಕ್ರಮ ಕೈಗೊಳ್ಳಿ. ಕೆಲವು ಸಂಸ್ಥೆಗಳಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಶುಚಿತ್ವಕ್ಕೆ ಒತ್ತು ನೀಡುತ್ತಿಲ್ಲ. ಅಂತಹವರ ವಿರುದ್ಧ ಪೊಲೀಸರು ದಾಳಿ ನಡೆಸಿ, ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ಸ್ಥಳ ಗಳಲ್ಲೂ ಶುಚಿತ್ವಕ್ಕೆ ಸ್ಥಳೀಯ ಸಂಸ್ಥೆಗಳು ಒತ್ತು ನೀಡಬೇಕು.

Translate »