ನ.18, ಕೆ.ಬಸವಯ್ಯ ಅವರಿಗೆ ಅಭಿನಂದನೆ
ಮೈಸೂರು

ನ.18, ಕೆ.ಬಸವಯ್ಯ ಅವರಿಗೆ ಅಭಿನಂದನೆ

November 15, 2020

ಮೈಸೂರು, ನ.14- ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ರಸಾಯಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪೆÇ್ರ.ಕೆ.ಬಸವಯ್ಯ ಅವರಿಗೆ ಸ್ಟ್ಯಾನ್‍ಪೆÇೀರ್ಡ್ ವಿಶ್ವವಿದ್ಯಾನಿಲಯ, ಯುಎಸ್‍ಎ ಅವರು ಪ್ರಕಟಿಸಿರುವ ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇವರಿಗೆ ಅಭಿನಂದನಾ ಸಮಾರಂಭವನ್ನು ಕುಲಪತಿಗಳಾದ ಪೆÇ್ರ. ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನ.18ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಎಂ.ಮಹದೇವನ್, ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪೆÇ್ರ. ನಾಗರಾಜ ನಾಯಕ್, ಸಿಬ್ಬಂದಿ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.