ಪುರಂದರದಾಸರ ಆರಾಧನಾ ಮಹೋತ್ಸವ
ಮೈಸೂರು

ಪುರಂದರದಾಸರ ಆರಾಧನಾ ಮಹೋತ್ಸವ

February 4, 2022

ಮೈಸೂರು,ಫೆ.3(ಎಂಕೆ)-ನಗರದ ಬಸವನಗುಡಿಯ ಉತ್ತರಾದಿಮಠದ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ ಉತ್ಸವ ಬಳಗ ಹಾಗೂ ದಾಸ ಸಾಹಿತ್ಯ ಪ್ರಚಾರ ಮಾಧ್ಯಮದ ಸಹಯೋಗದೊಂದಿಗೆ ‘ಪುರಂದರದಾಸರ ಆರಾಧನಾ ಮಹೋತ್ಸವ’ ನಡೆಯಿತು. ಈ ವೇಳೆ ಹಿರಿಯ ಪತ್ರಕರ್ತ ನ.ಶ್ರೀ ಸುಧೀಂದ್ರ ರಾವ್ ಮಾತನಾಡಿ, ಪುರಂದರದಾಸರ ಸಮಗ್ರ ಸಾಹಿತ್ಯದ ಅಧ್ಯಯನ ಮಾಡುವ ಸಲುವಾಗಿ ರಾಜ್ಯದ ವಿಶ್ವ ವಿದ್ಯಾಲಯವೊಂದರಲ್ಲಿ ಪುರಂದರದಾಸ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ದಾಸ ಸಾಹಿತ್ಯ ಪ್ರಭೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮರ್ಥ ವಾಗಿ ಮಾಡುವಂತಾಗಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಗಾಯಕ ಶಶಿಧರ ಕೋಟೆ, ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ.ಟಿ.ವಾದಿರಾಜ್, ಗುರುರಾಜರಾವ್, ಬಿಆರ್‍ವಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »