ಮೈಸೂರು, ಆ.17(ಆರ್‍ಕೆಬಿ)- ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿ ಸಿದ ಮುಖ್ಯಮಂತ್ರಿಗಳ ಪುತ್ರರೂ ಆದ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಸೋಮವಾರ ಮೈಸೂರಿನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಮೈಸೂರಿನ ಬೆಂಗಳೂರು ರಸ್ತೆ ರಿಂಗ್ ರಸ್ತೆ ಬಳಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ವಿಜಯೇಂದ್ರ ಅವರನ್ನು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಇನ್ನಿತರರು ಪುಷ್ಪಗುಚ್ಛ ನೀಡಿ ಬರಮಾಡಿ ಕೊಂಡರು. ಕಾರ್ಯಕರ್ತರು ವಿಜಯೇಂದ್ರ ಮತ್ತು ಯಡಿಯೂರಪ್ಪ ಹಾಗೂ ಪಕ್ಷದ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ರಾದ ಮಲ್ಲಪ್ಪಗೌಡ, ಮಹದೇವಸ್ವಾಮಿ, ರವಿತೇಜ, ಪಂಚಾಕ್ಷರಿ, ಮಾಧ್ಯಮ ಸಹ ಸಂಚಾಲಕ ಎನ್.ಪ್ರದೀಪ್‍ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಕಿರಣ್‍ಗೌಡ, ಮಹಿಳಾ ಮೋರ್ಚಾದ ಇನ್ನಿತರರು ಉಪಸ್ಥಿತರಿದ್ದರು. ಬಿ.ವೈ.ವಿಜಯೇಂದ್ರ ಅವರು ಮೊದಲಿಗೆ ಮೈಸೂರಿನ ಜಯ ಲಕ್ಷ್ಮಿಪುರಂನಲ್ಲಿರುವ ಚಾಮರಾಜನಗರ ಸಂಸದರೂ ಆಗಿರುವ ಬಿಜೆಪಿಯ ಹಿರಿಯ ನಾಯಕ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಪ್ರಸಾದ್ ಅವರ ಆರೋಗ್ಯ ವಿಚಾರಿಸಿದ ಅವರು, ಅವರೊಂದಿಗೆ ಕೆಲ ಕಾಲ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್, ಹಾಸನ ಶಾಸಕ ಪ್ರೀತಮ್ ಜೆ.ಗೌಡ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖಂಡ ರಾದ ಹೆಚ್.ವಿ.ರಾಜೀವ್, ಕೌಟಿಲ್ಯ ರಘು, ಅಪ್ಪಣ್ಣ, ಕಾ.ಪು.ಸಿದ್ದಲಿಂಗಸ್ವಾಮಿ, ಪ್ರಭಾಕರ್ ಶಿಂದೆ, ಕೆ.ಎಸ್.ಮಹ ದೇವಯ್ಯ, ಕೇಬಲ್ ಮಹೇಶ್, ಮಾಂಬಳ್ಳಿ ನಂಜುಂಡ ಸ್ವಾಮಿ ಇನ್ನಿತರರು ಇದ್ದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಮಾರ್ಗದರ್ಶನ ಪಡೆಯಲಷ್ಟೇ ಶ್ರೀನಿವಾಸಪ್ರಸಾದ್ ಭೇಟಿ, ಬೇರೇನೂ ಇಲ್ಲ
ಮೈಸೂರು, ಆ.17(ಆರ್‍ಕೆಬಿ)- ಸಂಸದ ವಿ.ಶ್ರೀನಿ ವಾಸಪ್ರಸಾದ್ ಪಕ್ಷದ ಹಿರಿಯ ನಾಯಕರು. ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ನೇಮಕಗೊಂಡ ಬಳಿಕ ಅವರ ಮಾರ್ಗದರ್ಶನ ಪಡೆಯಲಷ್ಟೇ ಭೇಟಿ ಮಾಡಿದ್ದೇನೆ. ಇದರಲ್ಲಿ ಬೇರೇನೂ ಇಲ್ಲ ಎಂದು ಬಿ.ವೈ.ವಿಜ ಯೇಂದ್ರ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಭೇಟಿ ಬಳಿಕ ಮಾಧ್ಯಮ ದೊಂದಿಗೆ ಮಾತನಾಢಿದ ಅವರು, ಪಕ್ಷದ ಉಪಾಧ್ಯಕ್ಷ ರಾದ ಬಳಿಕ ಮೈಸೂರಿಗೆ ಇದು ನನ್ನ ಮೊದಲ ಭೇಟಿ. ಹಾಗಾಗಿ ಹಿರಿಯ ನಾಯಕರ ಆಶೀರ್ವಾದ ಪಡೆದಿ ದ್ದೇನೆ. ಬೇರೆ ಏನೂ ವಿಶೇಷವಿಲ್ಲ ಎಂದು ಹೇಳಿದರು.
ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನದ ಬಗ್ಗೆ ರಾಜ್ಯಾ ಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರ್ಚಿಸಿ ನಿರ್ಧಾರ ಕೈಗೊಳ್ಳು ತ್ತಾರೆ. ಮುಖ್ಯಮಂತ್ರಿಯಾಗಿ ವರ್ಷ ಪೂರೈಸಿದ ನಂತರ ಮುಖ್ಯಮಂತ್ರಿಗಳು ಶಾಸಕರಿಗೆ ಸ್ಥಾನಮಾನ ಘೋಷಣೆ ಮಾಡಿದ್ದಾರೆ. ಅದೇ ರೀತಿ ಮುಖಂಡರು, ಕಾರ್ಯಕರ್ತರ ಬೇಡಿಕೆ ಬಗ್ಗೆ ರಾಜ್ಯಾಧ್ಯಕ್ಷರು, ಮುಖ್ಯ ಮಂತ್ರಿಗಳು ಪರಸ್ಪರ ಚರ್ಚಿಸಿ, ಅತೀ ಶೀಘ್ರದಲ್ಲೇ ಮುಖ್ಯಮಂತ್ರಿಗಳು ಒಂದು ತೀರ್ಮಾನ ತೆಗೆದು ಕೊಳ್ಳಲಿದ್ದಾರೆ ಎಂದರು. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗಾಗಿ ನನ್ನನ್ನೂ ಸೇರಿದಂತೆ ಪ್ರತಾಪ ಸಿಂಹ, ರಾಜೇಂದ್ರ ಅವರನ್ನು ಉಪಾಧ್ಯಕ್ಷರನ್ನಾಗಿ ಹಾಗೂ ಸಿದ್ದರಾಜು ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಸಂಘ ಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.