ಮಲಬಾರ್ ಗೋಲ್ಡ್‍ನಿಂದ `ನ್ಯಾಯಯುತ ಬೆಲೆ ಭರವಸೆ’
ಮೈಸೂರು

ಮಲಬಾರ್ ಗೋಲ್ಡ್‍ನಿಂದ `ನ್ಯಾಯಯುತ ಬೆಲೆ ಭರವಸೆ’

December 16, 2020

ಮೈಸೂರು, ಡಿ.15-ದೇಶದ ಮುಂಚೂಣಿ ಆಭರಣ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳಲ್ಲೊಂದಾದ `ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ಹೊಸ ವರ್ಷಾರಂಭ ಸಮೀಪಿ ಸುತ್ತಿರುವಂತೆಯೇ `ಮಲಬಾರ್ ಫೇರ್ ಪ್ರೈಸ್ ಪ್ರಾಮಿಸ್’ (ಮಲಬಾರ್ ನ್ಯಾಯಯುತ ಬೆಲೆಯ ಭರವಸೆ) ಮಾರಾಟ ಯೋಜನೆ ಆರಂಭಿಸಿದೆ. ಇದು `ಒಂದು ಭಾರತ-ಒಂದೇ ಚಿನ್ನದ ಬೆಲೆ’ ಅಭಿಯಾನದ ಭಾಗವಾಗಿದೆ. ಸಾಮಾನ್ಯ ವಾಗಿ ದೇಶದ ವಿವಿಧ ರಾಜ್ಯಗಳು, ನಗರಗಳಲ್ಲಿ ಚಿನಿವಾರ ಪೇಟೆಧಾರಣೆ ಆಧರಿಸಿ ಆಯಾ ದಿನದ ಚಿನ್ನ, ಚಿನ್ನಾಭರಣದ ದರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಗ್ರಾಹಕರು ಅನಿವಾರ್ಯವಾಗಿ ಅನುಭವಿಸಬೇಕಾದ ಈ ತಾರತಮ್ಯವನ್ನು ಹೋಗಲಾಡಿಸಲು, ಇಡೀ ದೇಶದ ಗ್ರಾಹಕರನ್ನು ಒಂದೇ ಎಂದು ಪರಿಗಣಿಸಲೆಂದೇ ಮಲಬಾರ್ `ಒಂದು ಭಾರತ- ಒಂದೇ ಚಿನ್ನದ ಬೆಲೆ’ ಅಭಿಯಾನ ಆರಂಭಿಸಿದೆ. ವಾಡಿಕೆಯಲ್ಲಿ ಚಿನ್ನದ ಆಭರಣಗಳ ಮಾರಾಟದ ವೇಳೆ ಆಭರಣ ತಯಾರಿಕಾ ವೆಚ್ಚವೂ ದರಪಟ್ಟಿಗೆ ಸೇರುತ್ತದೆ. ಆಭರಣದ ವೈವಿಧ್ಯತೆ, ಸ್ಥಳ ಆಧರಿಸಿ ತಯಾರಿಕಾ ವೆಚ್ಚದಲ್ಲಿಯೂ ಸಾಕಷ್ಟು ಏರಿಳಿತವಿರುತ್ತದೆ. ಈ ವಿಚಾರವು ನಮ್ಮ ಗ್ರಾಹಕರನ್ನು ಬಹಳಷ್ಟು ಬಾರಿ ಗೊಂದಲಕ್ಕೆ ಕೆಡವುತ್ತಿತ್ತು. ಈ ಸಮಸ್ಯೆ ಹೋಗಲಾಡಿ ಸಲು, ಗ್ರಾಹಕರ ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸುವ ಸಲುವಾಗಿಯೇ `ಮಲಬಾರ್ ನ್ಯಾಯಯುತ ಬೆಲೆಯ ಭರವಸೆ’ ಮಾರಾಟ ಯೋಜನೆಯನ್ನು ಪರಿ ಚಯಿಸಲಾಗಿದೆ. ಮಲಬಾರ್‍ನಲ್ಲಿ ಈ ಯೋಜನೆಯಡಿ ಶೇ.4.90ರಿಂದ ನ್ಯಾಯ ಯುತ ಬೆಲೆಯ ತಯಾರಿಕಾ ವೆಚ್ಚ ಶುರುವಾಗುತ್ತದೆ. ಈ ದರ ಪಟ್ಟಿಯು ದೇಶದೆಲ್ಲೆಡೆ ಒಂದೇ ಆಗಿರುತ್ತದೆ. ಗ್ರಾಹಕರು ನಿಶ್ಚಿಂತೆಯಿಂದ ತಮ್ಮಿಷ್ಟದ ಚಿನ್ನಾಭರಣಗಳನ್ನು ಖರೀದಿಸ ಬಹುದು. ಇದರಿಂದ ಅವರ ಅಮೂಲ್ಯ ಸಮಯವೂ ಉಳಿಯಲಿದೆ ಎಂದು ಮಲಬಾರ್ ಕಂಪನಿಗಳ ಸಮೂಹದ ಅಧ್ಯಕ್ಷ ಎಂ.ಪಿ.ಅಹ್ಮದ್ ಹೇಳಿದ್ದಾರೆ. ಈ ಹೊಸ ಪ್ರಯತ್ನವು ನಮ್ಮ ಮತ್ತೊಂದು ಗ್ರಾಹಕ ಕೇಂದ್ರಿತ ಕ್ರಮ. ಇದರ ಜತೆಗೆ ಖಚಿತವಾದ ಬೈಬ್ಯಾಕ್ (ವಾಪಸ್ ಖರೀದಿ) ಭರವಸೆಯನ್ನೂ ನೀಡಲಾಗುತ್ತದೆ. ಅಲ್ಲದೇ, ಉಚಿತ ವಿಮೆ ಸೌಲಭ್ಯ ವಿರುತ್ತದೆ. ಶೇ.100 ಖಚಿತತೆಯ ಹಾಲ್‍ಮಾರ್ಕ್ ಚಿನ್ನಾಭರಣ ಗ್ರಾಹಕರಿಗೆ ಲಭಿಸುತ್ತದೆ ಎಂದು ಮಲಬಾರ್ ಸಮೂಹದ ಕಾರ್ಯಾಚರಣೆ ಎಂಡಿ ಒ.ಆಶರ್ ತಿಳಿಸಿದ್ದಾರೆ.

Translate »