ಮಾ.31ರವರೆಗೆ ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ
ಮೈಸೂರು

ಮಾ.31ರವರೆಗೆ ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ

March 24, 2020

ಮೈಸೂರು, ಮಾ.23(ವೈಡಿಎಸ್)-ವಿಶ್ವದಾದ್ಯಂತ ತೀವ್ರ ಹಾವಳಿ ಉಂಟು ಮಾಡುತ್ತಿರುವ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಮಾ.31ರ ವರೆಗೆ ಲಾಕ್ ಡೌನ್‍ಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದಿನ ನಿತ್ಯದ ಅಗತ್ಯ ಪದಾರ್ಥಗಳನ್ನು ಖರೀದಿ ಸಲು ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಮುಂದೆ ಕ್ಯೂನಲ್ಲಿ ನಿಂತು ಖರೀದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಕರೆ ನೀಡಿದ್ದ ಜನತಾ ಕರ್ಫ್ಯೂ ಹಿನ್ನೆಲೆ ಎಲ್ಲಾ ವಾಣಿಜ್ಯ ವಹಿ ವಾಟೂ ಬಂದ್ ಆಗಿದ್ದವು. ಅಲ್ಲದೆ, ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿ ಲಾಕ್ ಡೌನ್‍ಗೆ ಸರ್ಕಾರ ಆದೇಶಿಸಿ, ಯಾರೂ ಮನೆಯಿಂದ ಹೊರಬಾರದಂತೆ ಸೂಚಿಸ ಲಾಗಿತ್ತು. ಹಾಗಾಗಿ ಸಾರ್ವಜನಿಕರು ಸೋಮವಾರ ಮಧ್ಯಾಹ್ನ ದಿನಬಳಕೆಯ ಅಗತ್ಯ ಸಾಮಗ್ರಿಗಳಾದÀ ತರಕಾರಿ, ಹಣ್ಣು, ಬೇಳೆಕಾಳು, ಅಕ್ಕಿ, ಹಾಲು-ಮೊಸರನ್ನು ಕ್ಯೂನಲ್ಲಿ ನಿಂತು ಖರೀದಿಸಿದರು.

ತರಕಾರಿ ಖರೀದಿ: ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ದೇವರಾಜ ಮಾರುಕಟ್ಟೆಗೆ ಆಗಮಿಸಿದ್ದರಿಂದ ಜನದಟ್ಟಣೆ ಉಂಟಾ ಗಿತ್ತು. ಜನರು ಮುಗಿಬಿದ್ದು ತರಕಾರಿ, ಹಣ್ಣು, ಹೂವು, ತೆಂಗಿನಕಾಯಿ, ಬಾಳೆಹಣ್ಣು ಮತ್ತಿ ತರೆ ಪದಾರ್ಥಗಳನ್ನು ಖರೀದಿಸಿದರು.

ಹಾಲಿಗೆ ಬೇಡಿಕೆ: ಸಾರ್ವಜನಿಕರು ಅಗ್ರಹಾರ, ಸಿದ್ದಾರ್ಥನಗರ, ಶಾರದಾದೇವಿ ನಗರ, ತೊಣಚಿಕೊಪ್ಪಲು ಮತ್ತಿತರೆಡೆ ನಂದಿನಿ ಪಾರ್ಲರ್‍ಗಳ ಬಳಿ ಕ್ಯೂನಲ್ಲಿ ನಿಂತು ಖರೀದಿಸಿದರು.

ನೀರಿಗೂ ಕ್ಯೂ: ದಿನಸಿ, ತರಕಾರಿಗಳ ನ್ನಷ್ಟೇ ಅಲ್ಲದೆ, ಕುಡಿಯುವ ನೀರನ್ನೂ ಸಂಗ್ರಹಿಸಿಟ್ಟುಕೊಳ್ಳಲು ಜನತೆ ಮುಗಿ ಬಿದ್ದಿದ್ದರು. ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಸಾರ್ವಜನಿಕರು ಉದ್ದದ ಸರತಿ ಸಾಲಿನಲ್ಲಿ ನಿಂತು ಕ್ಯಾನ್‍ಗಳಿಗೆ ನೀರು ತುಂಬಿಸಿಕೊಂಡರು.

ದಿನಸಿ ಪದಾರ್ಥಗಳ ಖರೀದಿ: ದಿನ ನಿತ್ಯದ ಅಗತ್ಯ ಆಹಾರ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವ ಜನಿಕರು ಶಿವರಾಂಪೇಟೆಯ ಮೋರ್ ಮೆಗಾಸ್ಟೋರ್‍ಗೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾ ಗಿತ್ತು. ನಂತರ ಸಾರ್ವಜನಿಕರೇ ಒತ್ತೊ ತ್ತಾಗಿ ನಿಲ್ಲುವ ಬದಲು ಅಂತರ ಕಾಯ್ದು ಕೊಂಡು ಬಿಸಿಲೆನ್ನದೆ ರಸ್ತೆಯವರೆಗೂ ಸರತಿ ಸಾಲಿನಲ್ಲಿ ನಿಂತು ದಿನಸಿ ಪದಾರ್ಥ ಗಳನ್ನು ಖರೀದಿಸಿದರು. ಈ ವೇಳೆ ಬಹು ಪಾಲು ಸಾರ್ವಜನಿಕರು ಮಾಸ್ಕ್ ಧರಿಸಿದ್ದರು. ಹಾಗೆಯೇ ಅಗ್ರಹಾರದಲ್ಲಿ ರುವ ಕಾಮ ಧೇನು ಟ್ರೇಡರ್ಸ್ ಅಂಗಡಿಯ ಮುಂದೆ ಸಾರ್ವಜನಿಕರು ಕ್ಯೂನಲ್ಲಿ ನಿಂತು ದಿನ ನಿತ್ಯದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.

Translate »