ಬಾರ್, ವೈನ್‍ಸ್ಟೋರ್‍ಗಳಿಗೆ ಬೀಗಮುದ್ರೆ ಹಾಕಿದ ಅಬಕಾರಿ ಸಿಬ್ಬಂದಿ
ಮೈಸೂರು

ಬಾರ್, ವೈನ್‍ಸ್ಟೋರ್‍ಗಳಿಗೆ ಬೀಗಮುದ್ರೆ ಹಾಕಿದ ಅಬಕಾರಿ ಸಿಬ್ಬಂದಿ

March 24, 2020

ಮೈಸೂರು ನಗರದಲ್ಲಿ 280, ಜಿಲ್ಲೆಯ ತಾಲೂಕುಗಳಲ್ಲಿ 200 ಬಾರ್‍ಗಳಿಗೆ ಬೀಗ

ದಿನಕ್ಕೆ 2.5 ಕೋಟಿ ವಹಿವಾಟು ಖೋತಾ

ಮೈಸೂರು,ಮಾ.23(ಎಂಟಿವೈ)- ನೊವೆಲ್ ಕೊರೊನಾ ವೈರಸ್ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಸೋಮವಾರ ಅಬಕಾರಿ ಇಲಾಖೆ ಸಿಬ್ಬಂದಿ ಎಲ್ಲಾ ಬಾರ್ ಹಾಗೂ ವೈನ್ ಸ್ಟೋರ್‍ಗಳಿಗೆ ಬೀಗ ಮುದ್ರೆ ಜಡಿದರು.

ನಿಯಮ ಉಲ್ಲಂಘಿಸಿ, ಕದ್ದುಮುಚ್ಚಿ ವ್ಯಾಪಾರ ಮಾಡಬಹುದೆಂಬ ಅನು ಮಾನದಿಂದ ಸೋಮವಾರ ಬೆಳಿಗ್ಗೆಯೇ ಹಲವು ತಂಡಗಳಲ್ಲಿ ವಿಂಗಡಣೆಗೊಂಡ ಸಿಬ್ಬಂದಿಗಳು ತಮ್ಮ ವ್ಯಾಪ್ತಿಯಲ್ಲಿರುವ ಬಾರ್, ವೈನ್‍ಸ್ಟೋರ್, ಎಂಎಸ್‍ಐಎಲ್, ಸ್ಟಾರ್ ಹೋಟೆಲ್‍ಗಳಲ್ಲಿರುವ ಬಾರ್‍ಗಳನ್ನು ತೆರೆಯದಂತೆ ಸೀಲ್ ಮಾಡಿದರು.

ಮೈಸೂರು ನಗರದಲ್ಲಿ ನಾಲ್ಕು ವಲಯ ಗಳಾಗಿ ವಿಂಗಡಿಸಲಾಗಿದ್ದು, ಒಟ್ಟು 280 ವಿವಿಧ ಬಗೆಯ ಬಾರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ 200ಕ್ಕೂ ಹೆಚ್ಚು ವಿವಿಧ ಬಗೆಯ ಬಾರ್‍ಗಳಿವೆ. ಈ ಹಿನ್ನೆಲೆಯಲ್ಲಿ ಇಂದಿ ನಿಂದ(ಮಾ.23) ಮಾ.31ರವರೆಗೆ ಈ ಎಲ್ಲಾ ಬಾರ್‍ಗಳನ್ನು ಬಂದ್ ಮಾಡು ವಂತೆ ಸರ್ಕಾರ ಸೂಚನೆ ನೀಡಿತ್ತು. ಇದನ್ನು ಮನಗಂಡು ನಿಯಮ ಉಲ್ಲಂ ಘಿಸಿ, ತೆರೆಮರೆಯಲ್ಲಿ ಮದ್ಯ ಮಾರಾಟ ಮಾಡಬಹುದೆಂಬ ಶಂಕೆಯಿಂದ ಇಂದು ಎಲ್ಲಾ ಬಾರ್, ವೈನ್‍ಶಾಪ್‍ಗಳಿಗೆ ಬೀಗ ಹಾಕಿ ಸೀಲ್ ಮಾಡಲಾಯಿತು. ಅಲ್ಲದೆ ನಿಯಮ ಉಲ್ಲಂಘಿಸಿ ಮಳಿಗೆ ತೆರೆದರೆ ಭಾರೀ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.

ಲಾಕ್‍ಡೌನ್ ಪರಿಣಾಮದಿಂದ ಎಲ್ಲಾ ಬಾರ್‍ಗಳೂ ಮುಚ್ಚಲ್ಪಟ್ಟಿರುವುದರಿಂದ ಮದ್ಯ ಪ್ರಿಯರಿಗೆ ಭಾರೀ ನಿರಾಸೆಯಾಗಿದೆ. ಜಿಲ್ಲೆಯ ಲ್ಲಿರುವ 480 ಬಾರ್, ವೈನ್ ಶಾಪ್, ಎಂಎಸ್ ಐಎಲ್ ಸ್ಟಾರ್ ಹೋಟೆಲ್‍ಗಳಲ್ಲಿರುವ ಬಾರ್ ಸೇರಿದಂತೆ ಎಲ್ಲಾ ಮದ್ಯದಂಗಡಿ ಯಿಂದ ದಿನಕ್ಕೆ 2.5ಕೋಟಿ ರೂ. ವಹಿ ವಾಟಾಗುತ್ತಿತ್ತು. ಇಂದಿನಿಂದ ಎಲ್ಲಾ ವಹಿ ವಾಟು ಸ್ಥಗಿತಗೊಂಡಂತಾಗಿದೆ. ಮೈಸೂರು ನಗರದಲ್ಲಿ ನಾಲ್ಕು ವಲಯ ಹಾಗೂ ಜಿಲ್ಲೆ ಯಲ್ಲಿ ಆರು ವಲಯವನ್ನಾಗಿ ಅಬಕಾರಿ ಇಲಾಖೆ ಸುಗಮ ಆಡಳಿತಕ್ಕೆ ವಿಂಗಡಣೆ ಮಾಡಿಕೊಂಡು, ಎಲ್ಲಾ ಬಾರ್‍ಗಳ ಮೇಲೂ ಕಣ್ಗಾವಲಿಟ್ಟಿದೆ. ಅಲ್ಲದೆ ಗಸ್ತು ತಿರುಗುವ ಮೂಲಕ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೂ ಹದ್ದಿನಕಣ್ಣಿಟ್ಟಿದೆ. ಲಾಕ್‍ಡೌನ್ ಮಾಡುವ ಮುನ್ಸೂಚನೆ ಅರಿತು ಶುಕ್ರವಾರ ಹಾಗೂ ಶನಿವಾರವೇ ಕೆಲವರು ಹೆಚ್ಚಿನ ಪ್ರಮಾಣದ ಮದ್ಯ ಖರೀ ದಿಸಿರುವ ಮಾಹಿತಿಯೂ ಅಧಿಕಾರಿಗಳು ಸಂಗ್ರಹಿಸಿದ್ದು, ಕಾಳಸಂತೆ ಅಥವಾ ಅಕ್ರಮ ವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಬಂದ ಕೂಡಲೇ ದಾಳಿ ನಡೆಸಿ ತಕ್ಕಶಾಸ್ತಿ ಮಾಡಲು ಯೋಜನೆ ರೂಪಿಸಿದ್ದಾರೆ.

Translate »