ಮುಡಾ ಅಧಿಕಾರಿಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ
ಮೈಸೂರು

ಮುಡಾ ಅಧಿಕಾರಿಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ

March 10, 2022

ವಿಜಯನಗರ ೩ನೇ ಹಂತದಲ್ಲಿ ೧೨೦ ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ
ಮೈಸೂರು, ಮಾ.೯(ಆರ್‌ಕೆ)-ಅನಧಿ ಕೃತ ಒತ್ತುವರಿ ತೆರವುಗೊಳಿಸುವ ಕಾರ್ಯಾ ಚರಣೆ ಮುಂದುವರಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು, ಮೈಸೂರಿನ ವಿಜಯ ನಗರ ೩ನೇ ಹಂತದಲ್ಲಿ ಸುಮಾರು ೧೨೦ ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.
ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಲಹೆಯಂತೆ ಆಯುಕ್ತ ಡಾ.ಡಿ.ಬಿ.ನಟೇಶ್ ನಿರ್ದೇಶನದ ಮೇರೆಗೆ ಬುಧವಾರ ಬೆಳಗ್ಗೆ ೭ರಿಂದ ೧೦ ಗಂಟೆವರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ವಿಜಯನಗರ ೩ನೇ ಹಂತದ ಪಾರ್ಕ್ಗೆ ಹೊಂದಿಕೊAಡA ತಿದ್ದ ಹಿನಕಲ್ ಸರ್ವೆ ನಂಬರ್ ೨೬೪ರ ೬ ಎಕರೆ ೧೩ ಗುಂಟೆ ಭೂಮಿಯಲ್ಲಿ ಅನಧಿ ಕೃತವಾಗಿ ನೆಲೆಸಿದ್ದವರನ್ನು ತೆರವುಗೊಳಿಸಿದರು.

೧೯೮೪ರಲ್ಲಿ ವಿಜಯನಗರ ಬಡಾವಣೆ ನಿರ್ಮಾಣಕ್ಕಾಗಿ ಸರ್ಕಾರ ಹಿನಕಲ್ ಸ.ನಂ. ೨೬೪ರಲ್ಲಿ ೬-೧೩ ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ನಂತರ ೧೯೮೬ರಲ್ಲಿ ಸದರಿ ಜಮೀನಿಗೆ ನಿರ್ಣಯಿಸಲಾದ ಅವಾರ್ಡ್ ಮೊತ್ತ ೯೮,೬೭೦ ರೂ.ಗಳನ್ನು ಪಾವತಿಸಲಾಗಿತ್ತು. ಆದರೆ ಆ ಜಮೀನಿನಲ್ಲಿ ಜವರನಾಯಕ ಎಂಬುವರು ಅನಧಿಕೃತವಾಗಿ ಬೇಸಾಯ ಮಾಡುತ್ತಿದ್ದರಿಂದ ವಿಜಯನಗರ ೩ನೇ ಹಂತದ ನಿವಾಸಿಗಳು ಸದರಿ ಜಾಗ ಯಾವ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆಯೋ, ಅ ಯೋಜನೆ ಜಾರಿಗೊಳಿಸಿ ಎಂದು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.

ಜವರನಾಯಕ ಎಂಬುವರಿಗೆ ಜಮೀನು ಮಂಜೂರಾಗಿರುವ ಬಗ್ಗೆ ಯಾವುದೇ ಕಡತದ ದಾಖಲೆಗಳಿಲ್ಲ ಹಾಗೂ ಈಗಾ ಗಲೇ ಭೂ ಸ್ವಾಧೀನ ಪ್ರಕ್ರಿಯೆಗಳು ಪೂರ್ಣ ಗೊಂಡಿರುವ ಕಾರಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅನಧಿಕೃತವಾಗಿ ನೆಲೆಸಿದ್ದವರನ್ನು ತೆರವುಗೊಳಿಸಿ ಸುಮಾರು ೧೨೦ ಕೋಟಿ ರೂ. ಮೌಲ್ಯದ ೬ ಎಕರೆ ೨೩ ಗುಂಟೆ ಜಾಗವನ್ನು ಮುಡಾ ಅಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ. ಮುಡಾ ಸೂಪರಿಂಟೆAಡಿAಗ್ ಇಂಜಿನಿಯರ್ ಶಂಕರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಸುನಿಲ್‌ಕುಮಾರ್, ಮೋಹನ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಸಿ.ಕಿರಣ್, ಕೆ.ಆರ್.ಮಹೇಶ, ಭಾಸ್ಕರ್, ರವಿಶಂಕರ್, ನಾಗೇಶ, ಹೆಚ್.ಪಿ.ಶಿವಣ್ಣ, ರಾಘವೇಂದ್ರ, ವಿಶೇಷ ಭೂಸ್ವಾಧೀನಾಧಿ ಕಾರಿ ಹರ್ಷವರ್ಧನ ತೆರವು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

 

Translate »