ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿ
ಕೊಡಗು

ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿ

April 2, 2020

ಸೋಮವಾರಪೇಟೆ, ಏ.1- ಅಪರೂಪದ ಪ್ರಾಣಿ ಪಕ್ಷಿಗಳಿರುವ ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿಯಾಗಿದೆ.
ಕಾರೇಕೊಪ್ಪ ಗ್ರಾಮದ ಸಮೀಪದಲ್ಲಿ ನೂರಾರು ಎಕರೆ ಅರಣ್ಯ ಹೊತ್ತಿ ಉರಿದಿದೆ. ಕಾರೇಕೊಪ್ಪದಿಂದ ಯಡವನಾಡು ಗ್ರಾಮದವರೆಗೂ ಪ್ರಾಣಿ, ಪಕ್ಷಿಗಳು, ಬೆಲೆಬಾಳುವ ಮರಗಳು ಸುಟ್ಟು ಕರಕಲಾಗಿವೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿ.ಎಫ್ ನೆಹರು, ಆರ್‍ಎಫ್‍ಓ ಶಮಾ ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಬೆಂಕಿ ಆರಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಬೆಂಕಿ ಬೀಳದಂತೆ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳಲಾಗಿತ್ತು. ಯಾರೋ ಕೀಡಿಗೇಡಿ ಗಳು ಬೆಂಕಿ ಹಾಕಿದ್ದಾರೆ ಎನ್ನಲಾಗುತ್ತಿದ್ದು, ಒಂದು ಕಡೆಯಿಂದ ಬೆಂಕಿ ಆರಿಸಿದರೆ, ಇನ್ನೊಂದು ಕಡೆ ಯಿಂದ ಬೆಂಕಿ ಹಾಕುತ್ತಿರುವ ಸಂಶಯ ವ್ಯಕ್ತವಾಗು ತ್ತಿದೆ. ಬೆಂಕಿ ಆರಿಸುವ ಪ್ರಯತ್ನ ಮುಂದುವರಿದಿದೆ ಎಂದು ಆರ್‍ಎಫ್‍ಒ ಶಮಾ ಮಾಹಿತಿ ನೀಡಿದ್ದಾರೆ.

ಕುಶಾಲನಗರ ವರದಿ: ಪಟ್ಟಣದ ಕಾವೇರಿ ನದಿ ದಂಡೆ ಹಾಗೂ ಸಮುದಾಯದ ಆರೋಗ್ಯ ಕೇಂದ್ರದ ವಸತಿ ಗೃಹದ ಬಳಿ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡು ಹತ್ತಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿಯಾಗಿದೆ.

ಲಯನ್ಸ್ ಕ್ಲಬ್‍ನ ಕಣ್ಣಿನ ಆಸ್ಪತ್ರೆಗೆ ಮೀಸಲಿರಿಸಿರುವ ಜಾಗದಲ್ಲಿ ಬೆಳೆದು ನಿಂತಿದ್ದ ಕುರುಚಲು ಗಿಡಗಳಿಗೂ ಬೆಂಕಿ ಅವರಿಸಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ಗಳಿಗೂ ವ್ಯಾಪಿಸಿತು. ಇದರಿಂದ ಇಡೀ ಪ್ರದೇಶವೇ ಹೊಗೆಯಿಂದ ಅವರಿಸಿತು. ಈ ಪ್ರದೇಶದ ಸುತ್ತಲೂ ಇರುವ ಮನೆಗಳಿಗೂ ಹೊಗೆಯಿಂದ ತೊಂದರೆ ಉಂಟಾ ಯಿತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಕೊಪ್ಪ ಸ್ಮಶಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಕುಶಾಲನಗರ ಅಗ್ನಿಶಾಮಕ ಸಿಬ್ಬಂದಿಗಳು ಅಲ್ಲಿಗೂ ತರಳಿ ಬೆಂಕಿ ನಂದಿಸಿದ್ದಾರೆ.

Translate »