ಹೆಚ್.ಡಿ.ಕೋಟೆ: ಕೊಳವೆ ಬಾವಿಯ ಕಬ್ಬಿಣ ಪೈಪ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಎಲೆಕ್ಟ್ರೀಷಿಯನ್ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ತಾಲೂಕಿನ ಜಿಯಾರ ಗ್ರಾಮದ ಸೋಮಶೆಟ್ಟಿ ಪುತ್ರ ಸತೀಶ್(37) ಮೃತಪಟ್ಟವರು. ಗ್ರಾಮದಲ್ಲಿ ಶುಂಠಿ ಜಮೀನೊದರಲ್ಲಿ ಕೊಳವೆ ಬಾವಿ ಮೋಟಾರು ಕೆಟ್ಟು ಹೋಗಿತ್ತು. ಇದನ್ನು ಸರಿಪಡಿಸಲು ಪೈಪ್ಗಳನ್ನು ಹೊರ ತೆಗೆಯುವಾಗ ಸಮೀಪದಲ್ಲಿಯೇ ಇದ್ದ 11 ಕೆವಿ ವಿದ್ಯುತ್ಗೆ ಆಕಸ್ಮಿಕವಾಗಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.
ಮೃತನಿಗೆ ಪತ್ನಿ ಗಾಯತ್ರಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.