ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ
ಮೈಸೂರು

ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ

June 2, 2018

ಮೈಸೂರು: ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವತಿಯಿಂದ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆ ಯೋಜನೆಯಡಿಯಲ್ಲಿ ಜೂ. 4 ರಿಂದ 8 ರವರೆಗೆ ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ.

ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯೊಂದಿಗೆ ಮಹಿಳಾ ಶಿಕ್ಷಣ ತಜ್ಞರಿಗಾಗಿ ಈ ಕಾರ್ಯಾಗಾರವನ್ನು `ಮಹಿಳೆಯರು ತಮ್ಮ ಸ್ಥಾನಗಳಿಗೆ ತಕ್ಕ ಹಾಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಿಸ್ತರಣೆ, ವ್ಯವಸ್ಥೆಯೊಳಗೆ ಮಹಿಳೆಯರ ಪರಿಸ್ಥಿತಿಯ ಸೂಕ್ಷ್ಮಗ್ರಾಹಿಕೆ ಮತ್ತು ನಾಯಕತ್ವ ಪಾತ್ರಗಳಲ್ಲಿ ಅವರ ಉಪಸ್ಥಿತಿಯನ್ನು ಸೀಮಿತಗೊಳಿಸುವ ಅಂಶಗಳು ಎನ್ನುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಆಯುಕ್ತೆ ಶ್ರೀಮತಿ ಪಿ. ಹೇಮಲತಾ ಉದ್ಘಾಟಿಸುವರು.

Translate »