ಮೈಸೂರು: ಸಮಾನತೆಯ ಸಮಾಜ ಅಸ್ತಿತ್ವಕ್ಕೆ ಬಂದಾಗ ಮಾತ್ರ ಪ್ರಜಾ ಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಸಂಭ ವನೀಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಸವ ಜಯಂತಿಯ ಅಂಗವಾಗಿ ತಮ್ಮ ಗೃಹ ಕಚೇರಿಯಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತ ನಾಡಿದ ಅವರು, ಸಮಾನತೆಯ ಸಮಾಜ ಅಸ್ತಿತ್ವಕ್ಕೆ ಬರಬೇಕು ಎಂದು ಬಸವಣ್ಣನವರು ಕನಸು ಕಂಡಿದ್ದರು. ಅದಕ್ಕಾಗಿ ಹೋರಾಟ ಮಾಡಿ ದರು. ಆದರೆ ಅವರು ಆರಂಭಿಸಿದ ಹೋರಾಟ ದಡ ಮುಟ್ಟಲು ಇವತ್ತು ಒಟ್ಟಾರೆ ಸಮಾಜ ಯತ್ನಿಸ ಬೇಕಾಗಿದೆ ಎಂದರು.
ಬಸವಣ್ಣನವರ ತತ್ವಗಳನ್ನು ಜಾರಿಗೆ ತರಲು ಸಾಧ್ಯವಿದ್ದರೆ ಅದು ಯಡಿಯೂರಪ್ಪ ಅವರ ನೇತೃತ್ವದ ಭಾರ ತೀಯ ಜನತಾ ಪಕ್ಷದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಇವನಾರವ, ಇವನಾ ರವ ಎಂದೆನಿಸದಿರಯ್ಯ, ನಮ್ಮ ಮನೆಯ ಮಗನೆಂದಿನಿಸಯ್ಯ ಎಂದು ಬಸವಣ್ಣನವರು ಹೇಳಿದರೆ, ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಆ ಪಕ್ಷದ ನಾಯ ಕರಿಗೆ ದೇಶದ ಜನರೆಲ್ಲ ತಮ್ಮವರು ಎಂಬ ಭಾವನೆ ಯಿಲ್ಲ. ಬದಲಿಗೆ ಅವರನ್ನು ಒಡೆದು ಆಳು ವುದೇ ನೀತಿ ಎಂದು ವಿಷಾದಿಸಿದರು.
ಇವತ್ತು ನಾವು ಆ ಪರಿಸ್ಥಿತಿಯನ್ನು ತೊಡೆದು ಹಾಕಬೇಕಿದೆ. ಎಲ್ಲರೂ ನಮ್ಮ ವರು ಎಂದು ಬಾವಿಸಿ ವ್ಯವಸ್ಥೆಯನ್ನು ಕಟ್ಟಬೇಕಿದೆ. ಹೀಗೆ ವ್ಯವಸ್ಥೆಯನ್ನು ಕಟ್ಟು ವುದೇ ಬಸವಣ್ಣನವರ ಗುರಿ, ಆದರ್ಶ ವಾಗಿತ್ತು. ಬಿಜೆಪಿಯದೂ ಅದೇ ಗುರಿ, ಅದೇ ಆದರ್ಶ ಎಂದರು.
ಈ ಆದರ್ಶ ವಾಸ್ತವವಾದಾಗ ಮಾತ್ರ ಸಮಾನತೆ ಸಮಾಜ ಅಸ್ತಿತ್ವಕ್ಕೆ ಬರಲು ಸಾಧ್ಯ. ಸಮಾನತೆ ಸ್ಥಾಪನೆಯಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರಲು ಸಾಧ್ಯ ಎಂದು ನುಡಿದರು. ಸಮಾರಂಭ ದಲ್ಲಿ ಬಿಜೆಪಿ ಮುಖಂಡರಾದ ಶಿವಯ್ಯ, ಕಾಪು ಸಿದ್ದಲಿಂಗಸ್ವಾಮಿ, ರಂಗೂನಾಯ್ಕ, ವೆಂಕಟರಮಣ ಶೆಟ್ಟಿ, ಗುರುಸ್ವಾಮಿ, ಜಿಪಂ ಸದಸ್ಯ ಸದಾನಂದ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.