ಶಿಥಿಲ ಪಾರಂಪರಿಕ ಕಟ್ಟಡಗಳ ಬಗ್ಗೆಸಿಎಂ ಜತೆ ಚರ್ಚೆ: ವಿಜಯೇಂದ್ರ
ಮೈಸೂರು

ಶಿಥಿಲ ಪಾರಂಪರಿಕ ಕಟ್ಟಡಗಳ ಬಗ್ಗೆಸಿಎಂ ಜತೆ ಚರ್ಚೆ: ವಿಜಯೇಂದ್ರ

August 11, 2019

ಮೈಸೂರು, ಆ. 10(ಆರ್‍ಕೆ)- ಅಪಾಯದಲ್ಲಿರುವ ಮೈಸೂರಿನ ಪಾರಂಪರಿಕ ಕಟ್ಟಡಗಳ ಸ್ಥಿತಿ-ಗತಿ ಕುರಿತು ತಜ್ಞರು, ಅಧಿಕಾರಿಗಳಿಂದ ವರದಿ ತರಿಸಿಕೊಂಡು ಶೀಘ್ರ ಪರಿಹಾರ ಕಂಡುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಹೇಳಿದರು. ಧಾರಾಕಾರ ಮಳೆಯಿಂದಾಗಿ ಮೈಸೂರು, ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದು ಭಾರೀ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿರುವ, ಜತೆಗೆ ಜನರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಸ್ಥಳೀಯ ಶಾಸಕರೊಂದಿಗೆ ಸ್ಥಳ ಪರಿ ಶೀಲಿಸಿ ಹಾನಿಯ ಸಮೀಕ್ಷೆ ನಡೆಸ ಲೆಂದು ಪ್ರವಾಸ ಕೈಗೊಂಡಿರುವು ದಾಗಿ ಅವರು ತಿಳಿಸಿದರು.

ನಾಲ್ಕು ದಿನಗಳಿಂದ ಸುರಿದ ಧಾರಾ ಕಾರ ಮಳೆಯಿಂದ ಕುಸಿದಿರುವ ಮೈಸೂ ರಿನ ಸರಸ್ವತಿಪುರಂನ ಅಗ್ನಿಶಾಮಕ ಠಾಣೆ ಕಟ್ಟಡದ ಸ್ಥಿತಿ ಗತಿಯನ್ನು ಇಂದು ಬೆಳಿಗ್ಗೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಶಿಥಿಲಾವಸ್ಥೆಯಲ್ಲಿದ್ದ ಅತೀ ಹಳೆಯದಾದ ಅಗ್ನಿಶಾಮಕ ದಳದ ಪಾರಂಪರಿಕ ಕಟ್ಟಡದ ಮುಂದಿನ ಪೋರ್ಟಿಕೋ ಶುಕ್ರವಾರ ಮಧ್ಯಾಹ್ನ ಕುಸಿದಿರುವ ಬಗ್ಗೆ ಶಾಸಕರಾದ ಎಸ್.ಎ.ರಾಮದಾಸ್ ಮತ್ತು ಎಲ್.ನಾಗೇಂದ್ರ ವಿವರಿಸಿದರು.

ಪಾರಂಪರಿಕತೆ ಎಂಬ ಒಂದೇ ಕಾರಣದಿಂದಾಗಿ ಅಗ್ನಿಶಾಮಕ ಠಾಣೆ, ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಸೇರಿದಂತೆ ಮೈಸೂರಿನ ಹಲವು ಹಳೆಯ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲು ಅಡೆತಡೆ ಎದುರಾಗಿದೆ. ಅವು ಸಂಪೂರ್ಣ ಶಿಥಿಲಗೊಂಡಿರುವುದರಿಂದ ಯಾವ ಸಂದರ್ಭದಲ್ಲಾದರೂ ಉರುಳಿ ಸಾವು-ನೋವು ಸಂಭವಿಸುವ ಅಪಾಯವಿದೆ ಎಂದು ಶಾಸಕ ನಾಗೇಂದ್ರ ತಿಳಿಸಿದರು. ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗಳ ಕೆಲ ಭಾಗ ಕುಸಿದಿದ್ದರೂ ಈವರೆಗೂÀ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ. ಹಾಗೆಯೇ ಬಿಟ್ಟರೆ ಕಟ್ಟಡದ ಉಳಿದ ಭಾಗವೂ ಬೀಳಲಿದೆ ಎಂದ ಅವರು, ಸರ್ಕಾರ ಈ ಬಗ್ಗೆ ಅತೀ ಜರೂರಾಗಿ ನಿರ್ಧಾರ ಕೈಗೊಂಡು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ, ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ, ಮುಖಂಡರಾದ ಆರ್.ರಘು, ಸಿದ್ದರಾಜು, ಅಪ್ಪಣ್ಣ, ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

 

Translate »