ಮೈಸೂರು ಪಾರಂಪರಿಕ ಕಟ್ಟಡಗಳ ಬಗ್ಗೆ15 ದಿನದೊಳಗೆ ನಿರ್ಧಾರ ಕೈಗೊಳ್ಳಿ
ಮೈಸೂರು

ಮೈಸೂರು ಪಾರಂಪರಿಕ ಕಟ್ಟಡಗಳ ಬಗ್ಗೆ15 ದಿನದೊಳಗೆ ನಿರ್ಧಾರ ಕೈಗೊಳ್ಳಿ

August 11, 2019

ಮೈಸೂರು, ಆ.10(ಎಂಟಿವೈ)- ಮೈಸೂ ರಿನಲ್ಲಿ 132 ಪಾರಂಪರಿಕ ಕಟ್ಟಡಗಳ ಸ್ಥಿತಿ ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾರಂಪರಿಕ ಸಮಿತಿ ತುರ್ತು ಸಭೆ ನಡೆಸಿ 15 ದಿನದೊಳಗೆ ಸ್ಪಷ್ಟ ನಿರ್ಧಾರ ತಳೆಯು ವಂತೆ ಶಾಸಕ ಎಲ್.ನಾಗೇಂದ್ರ ಸೂಚಿಸಿದ್ದಾರೆ.

ಎಡಬಿಡದೆ ಸುರಿದ ಮಳೆಯಿಂದ ಸರ ಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣಾ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ  ಶನಿವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎಲ್.ನಾಗೇಂದ್ರ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವುದಕ್ಕೆ ಬದ್ಧರಾಗಿದ್ದೇವೆ. ಆದರೆ ಕೆಲವು ಕಟ್ಟಡಗಳು ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆ ತಲುಪಿವೆ. ಇಂತಹ ಕಟ್ಟಡಗಳು ದುರಸ್ತಿ ಮಾಡುವು ದಕ್ಕೂ ಅಸಾಧ್ಯದ ಸ್ಥಿತಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಎಂದು ಗುರುತಿಸಲ್ಪಟ್ಟಿರುವ 132 ಕಟ್ಟಡಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಾರಂಪರಿಕ ಸಮಿತಿಯ ತುರ್ತು ಸಭೆ ಕರೆದು ಒಂದು ಅಜೆಂಡಾ ಇಟ್ಟುಕೊಂಡು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಎಷ್ಟು ಪಾರಂಪರಿಕ ಕಟ್ಟಡಗಳು ನೆಲಸಮ ಮಾಡುವ ಸ್ಥಿತಿ ತಲುಪಿವೆ. ತುರ್ತಾಗಿ ದುರಸ್ತಿ ಕಾರ್ಯ ಆರಂಭಿಸಬೇಕಾದ ಕಟ್ಟಡಗಳೆ ಷ್ಟಿವೆ ಎನ್ನುವುದನ್ನು 15 ದಿನದೊಳಗೆ ನಿರ್ಧ ರಿಸಬೇಕು. ನೆಲಸಮ ಮಾಡಬೇಕಾದ ಕಟ್ಟಡ ವನ್ನು ಕೆಡವಿ, ಪಾರಂಪರಿಕ ಶೈಲಿಯಲ್ಲಿಯೇ ಪುನರ್ ನಿರ್ಮಾಣ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಬೇಕಾದ ಅನು ದಾನ ಲಭ್ಯವಿದೆ. ಅಧಿಕಾರಿಗಳು ಹಾಗೂ ಪಾರಂಪರಿಕ ಸಮಿತಿ ಸದಸ್ಯರು ಕಟ್ಟಡಗಳ ಸ್ಥಿತಿಗತಿ ಕುರಿತಂತೆ ವಿಳಂಬ ಧೋರಣೆ ಅನು ಸರಿಸಬಾರದು. ವಿಳಂಬ ಧೋರಣೆಯಿಂದಾ ಗಿಯೆ ಈಗಾಗಲೇ ಲ್ಯಾನ್ಸ್‍ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಎರಡು ಕಟ್ಟಡಗಳ ಸ್ಥಿತಿಗತಿಯನ್ನು ಇಬ್ಬರು ಮುಖ್ಯಮಂತ್ರಿಗಳು ಬಂದು ವೀಕ್ಷಿ ಸಿದ್ದರೂ ಯಾವುದೇ ಪ್ರಯೋಜನವಾ ಗಿಲ್ಲ.

ವಿಧಾನಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದರೂ ಈ ಹಿಂದಿನ ಮುಖ್ಯಮಂತ್ರಿ ಗಳು ಉತ್ತರ ನೀಡುವುದಕ್ಕೂ ಪ್ರಯತ್ನಿಸ ಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಪಾರಂಪರಿಕ ಕಟ್ಟಡಗಳ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಸಮಿತಿ ಸಲ್ಲಿಸುವ ವರದಿಯನ್ನು ಆಧರಿಸಿ ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳ ಲಾಗುತ್ತದೆ. ಅಲ್ಲದೆ ಮೈಸೂರಿನಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಸೇರಿ ರುವ ಎಲ್ಲಾ ಪಾರಂಪರಿಕ ಕಟ್ಟಡಗಳ ಮುಖ್ಯ ಸ್ಥರು ಹಾಗೂ ಮಾಲೀಕರಿಗೆ ನೋಟಿಸ್ ಜಾರಿ ಗೊಳಿಸಿ ಕಟ್ಟಡಗಳ ನಿರ್ವಹಣೆ ಮಾಡುವಂತೆ ಹಾಗೂ ದುರಸ್ತಿ ಮಾಡಬೇಕಾದರೆ ತುರ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ ಕಟ್ಟಡಗಳು ಕುಸಿದು ಏನಾದರೂ ಅನಾಹುತವಾದರೆ ಆ ಕಟ್ಟಡಗಳ ಮುಖ್ಯಸ್ಥರು ಹಾಗೂ ಮಾಲೀ ಕರೇ ಕಾರಣ ಎಂದು ನೋಟಿಸ್‍ನಲ್ಲಿ ಎಚ್ಚರಿ ಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ಇತರರು ಇದ್ದರು.

 

Translate »