ಕೃಷ್ಣ ಜಂಬೂರರ `ಇಪ್ಪತ್ತೊಂದು ನಮಸ್ಕಾರ’ಗಳು  ಪುಸ್ತಕ ಬಿಡುಗಡೆ
ಮೈಸೂರು

ಕೃಷ್ಣ ಜಂಬೂರರ `ಇಪ್ಪತ್ತೊಂದು ನಮಸ್ಕಾರ’ಗಳು ಪುಸ್ತಕ ಬಿಡುಗಡೆ

November 3, 2021

ಮೈಸೂರು, ನ.2(ಎಸ್‍ಪಿಎನ್)- ಲೇಖಕ ಕೃಷ್ಣ ಜಂಬೂರ್ ಅವರ ಸಣ್ಣಕಥೆಗಳ ಸಂಕಲನ `ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕವನ್ನು ಹಿರಿಯ ಬರಹಗಾರ ಶಶಿಧರ್ ಡೋಂಗ್ರೆ ಬಿಡುಗಡೆ ಮಾಡಿದರು. ಮೈಸೂರು ಕುವೆಂಪುನಗರದಲ್ಲಿರುವ ಕಲಾಸುರುಚಿ ಸಭಾಂಗಣದಲ್ಲಿ `ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕವನ್ನು ಬಿಡು ಗಡೆಗೊಳಿಸಿ ಮಾತನಾಡಿದ ಅವರು, ಈ ಪುಸ್ತಕದಲ್ಲಿ ಮೂಡಿ ಬಂದಿರುವ ಕಥೆ ಗಳು ಪ್ರತಿಯೊಂದು ವಿಭಿನ್ನ ರೂಪಗಳಾಗಿವೆ. ಕೃಷ್ಣ ಜಂಬೂರ್ ಅವರ ಬರಹದಲ್ಲಿ ಸಂಶೋಧನೆ ಸಾಮಥ್ರ್ಯ ಕಂಡು ಬರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಸಣ್ಣಕಥೆಗಳ ಪುಸ್ತಕಗಳು ಸಾಕಷ್ಟು ಹೊರಬರುತ್ತಿವೆ. ಅದರಲ್ಲಿ ಜನರನ್ನು ತಲುಪುವುದು ಎಷ್ಟು ಪುಸ್ತಕಗಳು ಎಂಬುದನ್ನು ಓದುಗರು ನಿಶ್ಚಯಿಸುತ್ತಾರೆ. ಆದರೆ, ಕೃಷ್ಣ ಜಂಬೂರ್ ರಚಿಸಿರುವ `ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕದಲ್ಲಿ ಒಂದೊಂದು ಕಥೆಗಳು ಸಮಾಜದ ವಿಭಿನ್ನ ಮುಖಗಳನ್ನು ಓದುಗರಿಗೆ ಪರಿಚಯಿಸುತ್ತದೆ ಎಂದರು.

`ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕಕ್ಕೆÀ ಮುನ್ನುಡಿ ಬರೆದಿರುವ ರಂಗಕರ್ಮಿ ಭದ್ರಪ್ಪ ಹೆನ್ಲಿ ಮಾತನಾಡಿ, ಬರಹಗಾರರ ಕಥೆಗಳನ್ನು ರಚಿಸುವುದರಲ್ಲಿ ಕಲಾವಂತಿಕೆ ಇರುತ್ತದೆ. ಕಥೆ ರಚಿಸುವಾಗ ಬುದ್ದಿವಂತಿಕೆಗಿಂತ ಹೃದಯವಂತಿಕೆಯಿಂದ ಕಥೆಗಳನ್ನು ರಚಿಸಬೇಕು. ಆಗ ಮಾತ್ರ ಓದುಗರನ್ನು ಸೆಳೆಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಎನ್.ಧನಂಜಯ್ ಮಾತನಾಡಿ, ಸಣ್ಣ ಕಥೆಗಳನ್ನು ಕಾದಂಬರಿಯಷ್ಟೇ ಮಹತ್ವ ಪಡೆದಿದೆ. ಅನೇಕ ಲೇಖಕರ ದೊಡ್ಡ ಕಥೆ-ಕವಿತೆಗಳನ್ನು ಓದುಗರನ್ನು ತಲುಪುವುದಿಲ್ಲ. ಆದರೆ, ಕೆಲವು ಲೇಖಕರು, ಸಣ್ಣ ಕಥೆಗಳ ಮೂಲಕವೇ ಜನರನ್ನು ತಲುಪಿ, ಮುಖ್ಯವಾಹಿನಿಗೆ ಬಂದಿದ್ದಾರೆ. ಆ ಸಾಲಿನಲ್ಲಿ ಲೇಖಕ ಕೃಷ್ಣ ಜಂಬೂರ್ ಅವರು, ಈ ಪುಸ್ತಕದ ಮೂಲಕ ಜನರನ್ನು ತಲುಪಿದ್ದಾರೆ ಎಂದರು. ಈ ವೇಳೆ ಚಿತ್ರ ಕಲಾವಿದ ಘನಶ್ಯಾಮ್ ಮೂರ್ತಿ ಉಪಸ್ಥಿತರಿದ್ದರು.

Translate »