`ಕೃಷಿ ರಥ’ಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ
ಮೈಸೂರು

`ಕೃಷಿ ರಥ’ಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ

July 13, 2021

ಮೈಸೂರು, ಜು.12(ಆರ್‍ಕೆಬಿ)- ರೈತರ ಮನೆ ಬಾಗಿಲಿಗೆ ತೆರಳಿ ಕೃಷಿಗೆ ಸಂಬಂಧಿಸಿದ ನಾನಾ ಮಾಹಿತಿ ನೀಡುವ `ಕೃಷಿ ರಥ’ಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಲನೆ ನೀಡಿದರು.

ಸಮಗ್ರ ಕೃಷಿ ಅಭಿಯಾನದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಘೋಷಣೆಯಡಿ ರೈತರ ಮನೆ ಬಾಗಿಲಿಗೆ ಹೋಗಿ ಅವರಿಗೆ ಬೀಜ, ಗೊಬ್ಬರ, ಮಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ಮಾಹಿತಿ, ಸಲಹೆಗಳನ್ನು ಈ ರಥ ನೀಡಲಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ರೈತರಲ್ಲಿ ಮನವಿ ಮಾಡಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿ ವೃದ್ಧಿ ಕಾಮಗಾರಿ ಗಳಿಗೆ ಶಾಸಕ ಜಿ.ಟಿ.ದೇವೇಗೌಡರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಬೋಗಾದಿ ಗ್ರಾಮದ ಎಸ್‍ಬಿಎಂ ಬಡಾವಣೆ, ರವಿಶಂಕರ ಬಡಾವಣೆ, ಬಾಪೂಜಿ ಬಡಾವಣೆಗಳಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮ ಗಾರಿ, ನಗರಪಾಲಿಕೆ ವ್ಯಾಪ್ತಿಯ 45ನೇ ವಾರ್ಡ್‍ನಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ, ಹಿನಕಲ್ ಗ್ರಾಮದಲ್ಲಿ 1 ಕೋಟಿ ವೆಚ್ಚದ ರಸ್ತೆ, ಚರಂಡಿ ಕಾಮಗಾರಿ, ಇಲವಾಲ ಗ್ರಾಮದಲ್ಲಿ 3.25 ಕೋಟಿ ವೆಚ್ಚದ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ 45ನೇ ವಾರ್ಡ್ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ಮುಖಂಡರಾದ ಬೋಗಾದಿ ಚಂದ್ರಶೇಖರ್, ಜಯಕುಮಾರ್, ಆನಂದ್, ಸ್ವಾಮಿ ಗೌಡ, ಹೊನ್ನೇಗೌಡ, ನಾಗರಾಜು, ಶೇಖರ್, ಹಿನಕಲ್ ರಾಜು, ಮಂಜು, ಪ್ರಕಾಶ್, ಉದಯ್, ವೆಂಕಟೇಶ್, ಗುರುಸ್ವಾಮಿ, ಸ್ವಾಮಿ, ಮಹೇಶ್, ನಾಗೇಂದ್ರ, ನಾರಾಯಣ್, ವಿಜಯನಗರ ಮಂಜು, ಇಲವಾಲ ಗಂಗಾಧರ್, ನಾಗ ರಾಜು, ಭೈರೇಗೌಡ, ರಮೇಶ್, ಸುಪ್ರೀತ್, ಸುರೇಶ್, ರವಿ, ಬಾಲಕೃಷ್ಣ, ತಹಶೀಲ್ದಾರ್ ರಕ್ಷಿತ್, ಎಇಇ ರಾಜು, ತಾಪಂ ಇಓ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »