ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ

July 13, 2021

ಚಾಮರಾಜನಗರ, ಜು.12(ಎಸ್‍ಎಸ್)- ಜಿಲ್ಲೆಯಲ್ಲಿ ಸೋಮವಾರ ವಿವಿಧ ಸಂಘ ಟನೆಗಳಿಂದ ಪ್ರತ್ಯೇಕ ಪ್ರತಿಭಟನೆ ನಡೆಯಿತು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾ ಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಸರ್ಕಾರ ನೀಡಿದ 3 ಸಾವಿರ ರೂ. ಪರಿಹಾರ ಎಲ್ಲಾ ಕಾರ್ಮಿಕರಿಗೂ ದೊರ ಕಿಲ್ಲ ಎಂದು ಆರೋಪಿಸಿ ಕಾರ್ಮಿಕರು ಜಿಲ್ಲಾ ಡಳಿತ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರಸಭೆ ಆಡಳಿತ ಅಸಮರ್ಥವಾಗಿದೆ ಎಂದು ಆರೋಪಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಕಾರ್ಯಾ ಲಯದ ಮುಂಭಾಗ ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನ ವಾಡಿ ನೌಕರರ ಸಂಘದ ತಾಲೂಕು ಸಮಿತಿ ಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾಧ್ಯಕ್ಷೆ ಸುಜಾತಾ, ತಾಲೂಕು ಸಮಿತಿ ಅಧ್ಯಕ್ಷೆ ಆರ್.ಜಿ.ರೇವಮ್ಮ ಅವರ ನೇತೃತ್ವ ದಲ್ಲಿ ಸಮಾವೇಶಗೊಂಡ ಪ್ರತಿಭಟನಾ ಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾ ಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಫೆಡ ರೇಷನ್ ಸೂಚನೆ ಮೇರೆಗೆ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಅಂಗನ ವಾಡಿ ಕಾರ್ಯಕರ್ತರು, ಸಹಾಯಕಿಯ ರಿಗೆ ಸುರಕ್ಷತಾ ಕೇರ್, ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆ, ಪೆÇೀಶನ್ ಟ್ರ್ಯಾಕರ್ ಮೊಬೈಲ್ ಅಪ್ಲಿಕೇಶನ್, ನ್ಯೂಟ್ರಿ ಗಾರ್ಡನ್, ಐಸಿಡಿಎಸ್‍ನಲ್ಲಿ ಸಾಕಷ್ಟು ಪೌಷ್ಟಿಕಾಂಶ ಪೂರೈಕೆ, ಹೆಚ್ಚುವರಿ ಕೆಲಸ, ಶಾಲಾ ಪೂರ್ವ ಶಿಕ್ಷಣ ಅಂಗನವಾಡಿಗಳನ್ನು ಪರಿ ಗಣಿಸಿ ಮಿನಿ ಅಂಗನವಾಡಿ ಕಾರ್ಯಕರ್ತೆ ಯರಿಗೆ ಪೂರ್ಣ ಪ್ರಮಾಣದ ಗೌರವ ನೀಡಿ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ಏಕರೂಪದ ಕೆಲಸಕ್ಕೆ ಅಂಗನವಾಡಿ ನೌಕರರನ್ನು ತೊಡಗಿಸಿ ಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಕಾರ್ಯ ದರ್ಶಿ ಷಹಿದಾಬಾನು, ಸರೋಜಾ, ಶಶಿ ರೇಖಾ, ನೀಲಮ್ಮ, ಮಂಜುಳ, ಪಾರ್ವತಿ, ಸಲೀಮಾಜಾನು, ಅಸೀನಬಾನು, ಯಶೋಧ, ತಾಯಮ್ಮ, ಬಸಮ್ಮ, ಸಂಪತ್‍ಕುಮಾರಿ, ಜಯಲಕ್ಷ್ಮಿ ಇತರರು ಇದ್ದರು.

ಕಾರ್ಮಿಕರ ಪ್ರತಿಭಟನೆ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್‍ಡೌನ್ ಘೋಷಿ ಸಿತ್ತು. ಈ ವೇಳೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಕಾರ್ಮಿಕ ರಿಗೆ 3 ಸಾವಿರ ರೂ. ಪರಿಹಾರ ಘೋಷಿ ಸಿತ್ತು. ಆದರೆ, ಈ ಹಣ ಬಹುತೇಕ ಕಾರ್ಮಿ ಕರ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಆರೋಪಿಸಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕಾರ್ಮಿಕರ ಆಧಾರ್ ಕಾರ್ಡ್ ನಂಬರ್ ಆಧರಿಸಿ ಹಣ ಜಮಾ ಮಾಡುತ್ತಿರುವುದ ರಿಂದ ಅನೇಕ ತಾಂತ್ರಿಕ ತೊಂದರೆ ಉಂಟಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಆದ್ದರಿಂದ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಸಂಘದ ಜಿಲ್ಲಾ ಸಂಚಾಲಕ ಗಂಗವಾಡಿ ಪುಟ್ಟರಾಜು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

ಸುವರ್ಣ ಕನ್ನಡ ರಕ್ಷಣಾ ವೇದಿಕೆ ಪ್ರತಿಭಟನೆ: ಚಾಮರಾಜನಗರ ನಗರ ಸಭೆಯಲ್ಲಿ ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

ನಗರಸಭೆ ಕಚೇರಿ ಮುಂಭಾಗ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್‍ವಾಜಪೇಯಿ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾ ಕಾರರು ನಗರಸಭೆ ಅಧ್ಯಕ್ಷರು, ಪೌರಾಯು ಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ, ಸುರೇಶ್‍ವಾಜಪೇಯಿ ಮಾತ ನಾಡಿ, ನಗರಸಭೆಯಲ್ಲಿ ಸಾರ್ವಜನಿಕ ಆಡಳಿತ ಸಂಪೂರ್ಣವಾಗಿ ಅವ್ಯವಸ್ಥೆಯಾ ಗಿದ್ದು, ನಗರಸಭೆ ಕಚೇರಿಯು ಸರ್ಕಾರಿ ಕಚೇರಿ ಎಂಬ ಭಾವ ನೆಯೇ ಸಾರ್ವಜನಿಕರಲ್ಲಿ ಇಲ್ಲದಂತಾ ಗಿದೆ. ನಗರಸಭೆ ಹಾಗೂ ಆಡಳಿತ ಸಿಬ್ಬಂದಿ ವರ್ಗ ಸರಿಯಾದ ರೀತಿಯಲ್ಲಿ ಸಾರ್ವ ಜನಿಕರಿಗೆ ಆಡಳಿತ ನೀಡುತ್ತಿಲ್ಲ. ಪ್ರತಿನಿತ್ಯ ಸಾರ್ವಜನಿಕರು ಕಚೇರಿಗೆ ಬಂದು ಕಂದಾಯ ಪಾವತಿ, ನೀರಿನ ಕರ, ಇ-ಸ್ವತ್ತುಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಿಸಿದರೆ ಇಲ್ಲಿನ ಸಿಬ್ಬಂದಿ ವರ್ಗ ಇಲ್ಲಸಲ್ಲದ ಸಬೂಬು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
2 ವರ್ಷಗಳಿಗೂ ಹೆಚ್ಚು ಕಾಲದಿಂ ದಲೂ ಕಚೇರಿಯಲ್ಲಿ ಖಾತೆಗಾಗಿ ಅರ್ಜಿ ಸಲ್ಲಿಸಿರುವವರ ಖಾತೆಗಳು ಆಗಿರುವು ದಿಲ್ಲ. ಇ-ಸ್ವತ್ತುಗಳನ್ನು ಸಮರ್ಪಕವಾಗಿ ನೀಡಿರುವುದಿಲ್ಲ. ನಗರಸಭೆಯಲ್ಲಿ ಮಧ್ಯ ವರ್ತಿಗಳ ಹಾವಳಿ ಹೆಚ್ಚಾಗಿದೆ. ಬೇಜವಾ ಬ್ದಾರಿ ಆಡಳಿತದ ಬಗ್ಗೆ ಪೌರಾಯುಕ್ತರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಚಾ.ಗು. ನಾಗರಾಜ್, ನಮ್ಮನೆ ಪ್ರಶಾಂತ್, ಗಿರೀಶ್, ಪ್ರೇಮ್, ಮಸಣಶೆಟ್ಟಿ, ಮನು, ದ್ವಾರಕೀಶ್, ಬಸವಣ್ಣ, ನಾಗಶೆಟ್ಟಿ ಇತರರು ಇದ್ದರು.

Translate »