ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಾಮರಾಜನಗರ

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

July 13, 2021

ಗುಂಡ್ಲುಪೇಟೆ, ಜು.12(ಸೋಮ್.ಜಿ)- ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಸೋಮ ವಾರ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂ ಡರು ಸೈಕಲ್ ಜಾಥಾ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗದಿಂದ ಹೊರಟ ಸೈಕಲ್ ಜಾಥಾ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡಿತು.

ಟೌನ್ ಹಾಗೂ ಬೇಗೂರು ಕಾಂಗ್ರೆಸ್ ಕಮಿಟಿಯು ಜಂಟಿಯಾಗಿ ಆಯೋಜಿ ಸಿದ್ದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಮುಖಂಡ ಹೆಚ್.ಎಂ.ಗಣೇಶ್‍ಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರ ಅಡುಗೆ ಅನಿಲ ಸೇರಿದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವು ದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಗುತ್ತಿದ್ದು, ಜನರು ಬದುಕು ದುಸ್ತರ ವಾಗಿದೆ. ದೇಶದ ಜನರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಸರ್ಕಾರ ಮೌನವಹಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ತೆರಿಗೆಯನ್ನು ಕಡಿತ ಗೊಳಿಸಿ ಪೆಟ್ರೋಲ್ ಬೆಲೆ ಏರಿಕೆಯಾಗ ದಂತೆ ಕ್ರಮ ಕೈಗೊಂಡಿತ್ತು. ದಿನೇ ದಿನೆ ಏರುತ್ತಿರುವ ಬೆಲೆಯಿಂದ ಕಾರ್ಮಿಕರು, ಮಧ್ಯಮ ವರ್ಗದ ಜನರ ಜೀವನ ನಡೆಸಲು ಸಾಧ್ಯವಾಗದಂತಾಗಿದೆ. ದುರಾಡಳಿತ ದಿಂದ ಬೇಸತ್ತಿರುವ ಜನತೆಂiÀi ಸಹನೆ ಮೀರುವ ಮೊದಲೇ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಲೆ ಏರಿಕೆಯನ್ನು ನಿಯಂತ್ರಿಸಲು ರಾಜ್ಯ ಪಾಲರನ್ನು ಒತ್ತಾಯಿಸಿ ತಹಸೀಲ್ದಾರ್ ರವಿಶಂಕರ್ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪಿ.ಮರಿ ಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್. ನಂಜಪ್ಪ, ಚಾಮುಲ್ ಅಧ್ಯಕ್ಷ ಹೆಚ್.ಎಸ್. ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಮುನಿರಾಜು, ತಾಪಂ ಅಧ್ಯಕ್ಷ ಮಧುಶಂಕರ್, ಎಪಿಎಂಸಿ ಅಧ್ಯಕ್ಷ ಶಿವನಾಗಪ್ಪ, ಜಿಪಂ ಮಾಜಿ ಸದಸ್ಯರಾದ ಪಿ.ಚನ್ನಪ್ಪ, ಕೆ.ಎಸ್.ಮಹೇಶ, ನವೀನ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ಬೇಗೂರು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಬೇಗೂರು, ಹಳ್ಳದಮಾದಳ್ಳಿ ಪ್ರಭು, ಆಲತ್ತೂರು ಜಯರಾಮು, ಮಂಚಳ್ಳಿ ಲೋಕೇಶ್, ಮುಖಂಡ ರಾದ ಆರ್.ಎನ್.ನಾಗರಾಜು, ಹೆಚ್.ಎನ್. ಬಸವರಾಜು, ವಿ.ಜೆ.ಚಂದ್ರಶೇಖರ್ ಸೇರಿ ದಂತೆ ವಿವಿಧ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Translate »