ಹಳ್ಳದಕೇರಿಯಲ್ಲಿ ವಿದ್ಯಾರ್ಥಿಗಳಿಗೆ ದಿನಸಿ ವಿತರಣೆ
ಮೈಸೂರು

ಹಳ್ಳದಕೇರಿಯಲ್ಲಿ ವಿದ್ಯಾರ್ಥಿಗಳಿಗೆ ದಿನಸಿ ವಿತರಣೆ

July 13, 2021

ನಂಜನಗೂಡು, ಜು.12- ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವುದರಿಂದ ನಗರದ ಹಳ್ಳದಕೇರಿ ಮಕ್ಕಳಿಗೆ ಬಿಸಿಯೂಟದ ಅಕ್ಕಿ, ಬೇಳೆ, ಎಣ್ಣೆಯನ್ನು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಸದೃಢವಾಗಿರಲು ಸರ್ಕಾರ ಪೌಷ್ಟಿಕ ಆಹಾರ ನೀಡುತ್ತಿದೆ. ಮಕ್ಕಳು ಮನೆಯಲ್ಲಿ ಉಳಿದು ಆರೋಗ್ಯ ಕಾಪಾಡಿ ಕೊಂಡು ಬಿಡುವಿನ ವೇಳೆಯಲ್ಲಿ ಶಿಕ್ಷಕರು ನೀಡಿರುವ ಅಭ್ಯಾಸ ಹಾಳೆಯಲ್ಲಿ ಅಭ್ಯಾಸ ಮಾಡುವಂತೆ ತಿಳಿಸಿದ ಅವರು, ಪೆÇೀಷಕರು ಹಾಗೂ ಮಕ್ಕಳಿಗೆ ದೂರದರ್ಶನದಲ್ಲಿ ಪ್ರಸಾರವಾಗುವ ಸಂವೇದ ಕಾರ್ಯಕ್ರಮವನ್ನು ತಪ್ಪದೇ ನೋಡುವಂತೆ ತಿಳಿಸಿದರು. ಈ ವೇಳೆ ಎಸ್‍ಡಿಎಂಸಿ ಸದಸ್ಯ ಜಗದೀಶ್, ತ್ರಿಮೂರ್ತಿ, ಮುಖ್ಯ ಶಿಕ್ಷಕ ಸತೀಶ್, ಎಸ್.ದಳವಾಯಿ, ಸಹಶಿಕ್ಷಕರಾದ ತಾರಾ, ನಾಗೇಂದ್ರ ಹಾಗೂ ನೀಲಕಂಠ ಆರಾಧ್ಯ, ಐಇಆರ್‍ಟಿ ರಮೇಶ್ ಇನ್ನಿತರರಿದ್ದರು.

Translate »