The orators were opponents of traditions
ಮೈಸೂರು

The orators were opponents of traditions

March 3, 2021

ಮೈಸೂರು, ಮಾ.2(ಎಸ್‍ಪಿಎನ್)- 12ನೇ ಶತಮಾನದ ವಚನಕಾರರು ಸಂಸ್ಕøತಿ ಹರಿಕಾರರು. ಮೌಢ್ಯ ಸಂಪ್ರದಾಯದ ವಿರೋಧಿಗಳಾಗಿದ್ದರು ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ಹೇಳಿದರು.

ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಆವರಣ ದಲ್ಲಿರುವ ಶ್ರೀ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಹಿರಿಯ ಸಾಹಿತಿ ಈಶ್ವರ ಮಂಟೂರ, ಹಾವೇರಿಯ ನಿವೃತ್ತ ಶಿಕ್ಷಕಿ ಬಸಮ್ಮ ಹಳ ಕೊಪ್ಪ ಅವರಿಗೆ 2021ನೇ ಸಾಲಿನ `ಶಕುಂ ತಲ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು. ವಚನಕಾರರು ದೇವರ ಅಸ್ಥಿತ್ವವನ್ನು ಪ್ರಶ್ನಿಸಿಲ್ಲ. ಬದಲಾಗಿ ದೇವಸ್ಥಾನಗಳನ್ನು ಆರ್ಥಿಕ ಸ್ವರೂಪವಾಗಿ ಪರಿವರ್ತಿಸುವು ದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ವಚನ ಸಾಹಿತ್ಯ ಚಳವಳಿಯ ಕುರುಹು. ಶರಣರ ಬದುಕು ಜಂಗಮ ಸ್ವರೂಪದ್ದಾಗಿದೆ. ಹಾಗಾಗಿ ಸಂಸ್ಕøತಿ ಮತ್ತು ಸಂಪ್ರದಾಯದ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದರು.

ಭಾರತೀಯ ಮೂಲ ಪರಂಪರೆ ಬಗ್ಗೆ ವಚನಕಾರರು, ಚಳವಳಿಯ ಮೂಲಕ ಶೋಧಿಸಲು ಮುಂದಾಗಿದ್ದರು. ಈ ಸಂದರ್ಭ ದಲ್ಲಿ ಅನೇಕ ಪ್ರಶ್ನೆಗಳು ಉದ್ಭವವಾಗು ತ್ತವೆ. ಅಲ್ಲದೆ ಸಂಗೀತಗಾರರು ಇಂದಿಗೂ ಕೆಲ ವಚನಗಳಿಗೆ ಶೃತಿ ಹಿಡಿಯಲು ಸಾಧ್ಯ ವಿಲ್ಲ ಎನ್ನುತ್ತಾರೆ. ಇಂಥ ವಚನಗಳನ್ನು ಸಮಾ ಜದ ಸತ್ಯ ಘಟನೆಯ ಆಧಾರದ ಸಾಹಿತ್ಯ ಎಂದು ಪರಿಗಣಿಸಬಹುದು ಎಂದರು.

ಒಮ್ಮೆ ಕುವೆಂಪು ಅವರು, ವಚನ ಸಾಹಿತ್ಯ ವನ್ನು ಓದಲು ತೇಜಸ್ವಿಯವರಿಗೆ ಸೂಚಿಸು ತ್ತಾರೆ. ಆದರೆ, ತೇಜಸ್ವಿ ಹಲವು ಬಾರಿ ವಚನಗಳನ್ನು ಓದಿದರೂ ಅರ್ಥವಾಗುವು ದಿಲ್ಲ. ಅದನ್ನು ಕುವೆಂಪು ಅವರಿಗೆ ತಿಳಿಸಿ ದಾಗ, `ವಚನಗಳನ್ನು ಅರ್ಥ ಮಾಡಿಕೊಳ್ಳಲು ಸಂಯಮ, ತಾಳ್ಮೆ ಹಾಗೂ ಕಾಲಜ್ಞಾನದ ಪರಿಚಯವಿರಬೇಕು. ಆಗ ಮಾತ್ರ ವಚನ ಸಾಹಿತ್ಯ, ಚಳವಳಿ ಬಗ್ಗೆ ನಮಗೆ ಅರ್ಥ ವಾಗುತ್ತದೆ’ ಎಂದÀರು. ಸಂಘಟಕರು ಪ್ರಶಸ್ತಿ ನೀಡುವಾಗ, ವ್ಯಕ್ತಿಯ ಸಾಧನೆಯು ಉತ್ತಮವಾಗಿರಬೇಕು. ಏಕೆಂ ದರೆ ಅವರು ಪ್ರಶಸ್ತಿ ಸ್ವೀಕರಿಸಿದ ಮೇಲೆ ಅವರು ಸಾಧಕ ರಾಗಬಾರದು. ಬದಲಾಗಿ, ಪ್ರಶಸ್ತಿ ಸ್ವೀಕರಿ ಸಿದ ನಂತರ ಆ ವ್ಯಕ್ತಿ ಸಾಧನೆ ಎಲ್ಲರೂ ಮೆಚ್ಚುವಂತಿರಬೇಕು. ಇಂದು ಪ್ರಶಸ್ತಿ ಪಡೆ ಯುತ್ತಿರುವ ಬಾಗಲಕೋಟೆಯ ಹಿರಿಯ ಸಾಹಿತಿ ಈಶ್ವರ ಮಂಟೂರ, ಹಾವೇರಿಯ ಬಸಮ್ಮ ಹಳಕೊಪ್ಪ ಅವರಿ ಬ್ಬರು ಶರಣ ಸಾಹಿತ್ಯದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಕೊಂಡಾಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪರಾವ ಆಕ್ಕೋಣಿ, ಹಿರಿಯ ಸಾಹಿತಿ ಗೊ.ರು.ಚನ್ನ ಬಸಪ್ಪ, ಶಕುಂತಲ ಜಯದೇವ, ಜಿಲ್ಲಾ ಧ್ಯಕ್ಷ ಎಂ.ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎನ್.ಜಿ. ಗಿರೀಶ್, ಶಾರದಾ, ಮ.ಗು.ಸದಾ ನಂದಯ್ಯ, ಎಸ್.ಬಿ.ಅಂಗಡಿ ಉಪಸ್ಥಿತರಿದ್ದರು.

 

 

Translate »