ಲಸಿಕೆ ಪಡೆಯಲು 2ನೇ ದಿನ ಹಿರಿಯ ನಾಗರಿಕರ ಉತ್ಸಾಹ
ಮೈಸೂರು

ಲಸಿಕೆ ಪಡೆಯಲು 2ನೇ ದಿನ ಹಿರಿಯ ನಾಗರಿಕರ ಉತ್ಸಾಹ

March 3, 2021

ಮೈಸೂರು,ಮಾ.2(ಆರ್‍ಕೆ)-ಕೊರೊನಾ ವಿರುದ್ಧ ಲಸಿಕೆ ಪಡೆಯಲು 2ನೇ ದಿನವೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ತೊಂದರೆ ಇರುವ 45ರಿಂದ 60 ವರ್ಷದೊಳಗಿನ ನಾಗ ರಿಕರಿಗೆ 3ನೇ ಹಂತದ ಲಸಿಕೆ ಅಭಿಯಾನ ಮಾರ್ಚ್1ರಿಂದ ಆರಂಭವಾಗಿದ್ದು, ಮೊದಲ ದಿನ ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ 290 ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಎರಡನೇ ದಿನವಾದ ಇಂದು ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಅಭಿ ಯಾನದಲ್ಲಿ ಮಧ್ಯಾಹ್ನ 3 ಗಂಟೆವರೆಗೆ 300 ಮಂದಿ ಲಸಿಕೆ ಪಡೆದಿದ್ದರು ಎಂದು ನೋಡಲ್ ಅಧಿಕಾರಿ ಡಾ.ಎಲ್.ರವಿ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇಂದು ಬೆಳಗ್ಗೆ 10 ಗಂಟೆಯಿಂದಲೇ ಅಭಿಯಾನ ಆರಂಭವಾದ ಕಾರಣ ಹೆಚ್ಚು ಮಂದಿ ಹಿರಿಯ ನಾಗರಿಕರು ನಿಗದಿತ ಆಸ್ಪತ್ರೆಗಳಿಗೆ ತೋರಿಸಿ ಆರೋಗ್ಯ ಸೇತು ಆ್ಯಪ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿ ಕೋವಿಡ್ ಲಸಿಕೆ ಪಡೆದ ಕಾರಣ ನಿನ್ನೆ (ಮಾ. 1)ಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮೈಸೂರಿನ ಜೆಎಸ್‍ಎಸ್, ಅಪೋಲೊ ಬಿಜಿಎಸ್, ಟ್ರಾಮಾ ಕೇರ್ ಸೆಂಟರ್, ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ 10 ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಈವರೆಗೆ ಯಾವುದೇ ಅಡ್ಡ ಪರಿಣಾಮ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ನುಡಿದರು. ಸೋಮವಾರ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರು 3ನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದರೇ ಹೊರತು, ಅವರು ಲಸಿಕೆಯನ್ನು ಪಡೆಯಲಿಲ್ಲ. ಅದೇ ವೇಳೆ ಪ್ರಮೋದಾದೇವಿ ಒಡೆಯರ್ 1000 ಕೋವಿಡ್-19 ಲಸಿಕೆಯನ್ನು ಪ್ರಾಯೋಜನೆ ಮಾಡುವುದಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಕಸಾಪದಿಂದ ಮರೆಯಲಾಗದ ಹಿರಿಯ ಮುತ್ಸದ್ದಿ ಮಾಲಿಕೆಯಡಿ

Translate »