ಮೈಸೂರಲ್ಲಿ ಶೀಘ್ರವೇ `ಡೆಲ್ಟಾ ಪ್ಲಸ್’ ಪರೀಕ್ಷಾ ಪ್ರಯೋಗಾಲಯ ಆರಂಭ
ಮೈಸೂರು

ಮೈಸೂರಲ್ಲಿ ಶೀಘ್ರವೇ `ಡೆಲ್ಟಾ ಪ್ಲಸ್’ ಪರೀಕ್ಷಾ ಪ್ರಯೋಗಾಲಯ ಆರಂಭ

June 28, 2021

ಮೈಸೂರು, ಜೂ.27 – ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿರುವ ರೂಪಾಂತರಿ ಡೆಲ್ಟಾ ಪ್ಲಸ್ ಹಾಗೂ ಡೆಲ್ಟಾ ವೈರಸ್ ಪತ್ತೆಗಾಗಿ ಮೈಸೂರು ಸೇರಿ ದಂತೆ ರಾಜ್ಯದಲ್ಲಿ 6 ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಶೀಘ್ರವೇ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ `ಡೆಲ್ಟಾ ಪ್ಲಸ್’ ವೈರಾಣು ಪತ್ತೆಯಾಗಿ ಜಿನೋಂ ಸೀಕ್ವೆನ್ಸಿಂಗ್ ಲ್ಯಾಬ್ ತಲೆ ಎತ್ತಲಿದೆ.

ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ಅಪಾಯಕಾರಿಯಾಗಿದ್ದು, ತ್ವರಿತಗತಿಯಲ್ಲಿ ಹರಡುವುದರೊಂದಿಗೆ ಸೋಂಕಿಗೆ ತುತ್ತಾದವರ ಸಾವಿಗೂ ಕಾರಣವಾಗುತ್ತಿದೆ. ಕೊರೊನಾ ರೂಪಾಂತರಿ ಯಲ್ಲಿಯೇ ಅತ್ಯಂತ ಅಪಾಯಕಾರಿ ವೈರಸ್ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಡೆಲ್ಟಾ ಪ್ಲಸ್(ಬಿ1.617.21) ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲೂ ಕಾಣಿಸಿಕೊಂಡಿದೆ. ಇದರೊಂ ದಿಗೆ ಮತ್ತೊಂದು ರೂಪಾಂತರಿ ಡೆಲ್ಟಾ(ಬಿ1.617.2) ವೈರಸ್ ಕೂಡ ಜನರ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಮೈಸೂರು, ಬೆಂಗ ಳೂರಲ್ಲಿ ಅಪಾಯಕಾರಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದು, ಇನ್ನಷ್ಟು ಜಿಲ್ಲೆಯಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸ್ಯಾಂಪಲ್ ಅನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋ ಗಾಲಯವನ್ನೇ ಅವಲಂಬಿಸಬೇಕಾಗಿತ್ತು. ಇದರಿಂದ ಪರೀಕ್ಷಾ ಫಲಿತಾಂಶ ತಡವಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ವಿವಿಧೆಡೆ 6 ಡೆಲ್ಟಾ ಪ್ಲಸ್ ವೈರಸ್ ಪತ್ತೆಗೆ ಪ್ರಯೋಗಾಲಯ ತಲೆ ಎತ್ತಲಿವೆ.

ಮೈಸೂರಿನ ಮೆಡಿಕಲ್ ಕಾಲೇಜಲ್ಲಿ: ಡೆಲ್ಟಾ ಪ್ಲಸ್ ಹಾಗೂ ಡೆಲ್ಟಾ ವೈರಸ್ ಆಗಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಪತ್ತೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿಯೇ ಸರ್ಕಾರದ ಸೂಚನೆ ಮೇರೆಗೆ ಡೆಲ್ಟಾ ವೈರಸ್ ಪತ್ತೆಗೆ ಪ್ರಯೋಗಾಲಯ ಆರಂಭಿಸಲು ಉದ್ದೇ ಶಿಸಲಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿ ಪ್ರಯೋಗಾ ಲಯದ ಮೇಲಿನ ಒತ್ತಡ ನಿವಾರಣೆಗಾಗಿ ಸರ್ಕಾರ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ವಿಜಯಪುರದಲ್ಲಿ 6 ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾ ಕರ್ ಈಗಾಗಲೇ ತಿಳಿಸಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದಲ್ಲಿ ಅತ್ಯಾಧುನಿಕ ವೈರಲ್ ರೀಸರ್ಚ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ (ವಿಆರ್ ಡಿಎಲ್) ಪಕ್ಕದಲ್ಲಿ ಡೆಲ್ಟಾ ವೈರಸ್ ಪತ್ತೆಗಾಗಿ ಹೊಸ ಪ್ರಯೋ ಗಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಲ್ಯಾಬ್ ಅನ್ನು ನಂತರ ಭಾರತೀಯ ಸಾರ್ಸ್(SಂಖS- ಅoಗಿ-2) ಕೋವಿ-2 ಜೀನೋಮಿಕ್ ಕನ್ಸೋರ್ಟಿಯಾ(IಓSಂಅಔಉ) ನೆಟ್‍ವರ್ಕ್‍ಗೆ ಸೇರಿಸಲಾಗುತ್ತದೆ. ಈ ಪ್ರಯೋಗಾಲಯ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಸೇರಿದಂತೆ ನೆರೆ ಜಿಲ್ಲೆ ಗಳ ಸೋಂಕಿತರ ಸ್ಯಾಂಪಲ್ ಪರೀಕ್ಷೆ ಮಾಡಲು ಸಹಕಾರಿಯಾಗಲಿದೆ.

ಪರೀಕ್ಷೆಗೆ 15 ದಿನ ಬೇಕು: ರೂಪಾಂತರಗೊಂಡಿರುವ ಕೊರೊನಾ ಡೆಲ್ಟಾ ಪ್ಲಸ್ ಆಗಿ ಮಾರ್ಪಾಡಿರುವುದನ್ನು ಪತ್ತೆ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಓರ್ವರ ಸ್ಯಾಂಪಲ್ ಅನ್ನು ಪರೀಕ್ಷೆಗೊಳಪಡಿಸಿದ 15 ದಿನದ ನಂತರ ಫಲಿತಾಂಶ ಹೊರಬೀಳ ಲಿದೆ. ಡೆಲ್ಟಾ ವೈರಸ್ ಶಂಕೆ ಮೇರೆಗೆ ಕೊರೊನಾ ಸೋಂಕಿತರ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ, ಜೀನೋಮ್ ಸೀಕ್ವೆನ್ಸಿ ಪತ್ತೆ ಮಾಡಲು ಸಮಯಬೇಕಾಗುತ್ತದೆ ಎಂದರು.

ವಿಜ್ಞಾನಿಗಳೇ ಬೇಕು: ಡೆಲ್ಟಾ ಪ್ಲಸ್ ಹಾಗೂ ಡೆಲ್ಟಾ ವೈರಸ್ ಪತ್ತೆ ಮಾಡಲು ಕೇವಲ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಬಳಸಿಕೊಂಡು ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಪ್ರಯೋಗ ಕ್ವಾಲಿಫಿಕೇಷನ್ ಮೇಲೆ ಅವಲಂಬಿಸದೆ ವಿಜ್ಞಾನಿಗಳು ಹಾಗೂ ಸಂಶೋಧಕ ರಿಂದ ಮಾತ್ರ ಸಾಧ್ಯ. ಕೊರೊನಾ ವೈರಸ್ ರೂಪಾಂತರಗೊಂಡಿರುವುದನ್ನು ಪತ್ತೆ ಹಚ್ಚಲು ಎಂ.ಎಸ್ಸಿ, ಪಿಹೆಚ್.ಡಿ ಪಡೆದ ವಿಜ್ಞಾನಿ, ಸಂಶೋಧಕರಿಂದ ಸಾಧ್ಯ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗಾಲಯಕ್ಕೆ ವಿಜ್ಞಾನಿ ಮತ್ತು ಸಂಶೋಧಕರನ್ನು ಆಹ್ವಾನಿಸಬೇಕಾಗುತ್ತದೆ ಎಂದು ತಿಳಿಸಿದರು. ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಹೆಚ್ಚಾಗಿ ಕ್ಯಾಂಕ್ರಿಯಾಸ್‍ನ ಬೀಟಾ ಸೆಲ್ಸ್ ಮೇಲೆ ಆಟ್ಯಾಕ್ ಮಾಡಿ, ಇನ್ಸುಲಿನ್‍ನ ಸೆಕ್ರಿಷನ್‍ನ ಕಡಿಮೆ ಮಾಡುವುದರೊಂದಿಗೆ ಹೃದಯ ಹಾಗೂ ಲಂಗ್ಸ್ ಮೇಲೆ ದಾಳಿ ಮಾಡುವುದರಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಡೆಲ್ಟಾ ಪ್ಲಸ್ ವೈರಸ್ ಎಂಆರ್‍ಎನ್‍ಎ ವೈರಸ್ ಆಗಿದೆ. ಜೀನಂ ಸ್ಟ್ರಾಂಡ್ ವ್ಯವಸ್ಥೆಯಲ್ಲಾಗುವ ವೇರಿ ಯೇಷನ್ ಆಧಾರದ ಮೇಲೆ ವೈರಸ್‍ನ ವರ್ತನೆ ಬದಲಾವಣೆಯಾಗುತ್ತದೆ. ರೂಪಾಂತರ ಗೊಂಡಿರುವ ವೈರಸ್ ಅನ್ನು ಡೆಲ್ಪಾ ಪ್ಲಸ್ ಎನ್ನಲಾಗುತ್ತಿದೆ ಎಂದು ತಿಳಿಸಿದರು.

ಪರೀಕ್ಷಾ ಉಪಕರಣ ಬಂದಿಲ್ಲ: ಹೊಸ ಪ್ರಯೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡುತ್ತದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ, ಪ್ರಯೋಗಾಲಯಕ್ಕೆ ನೀಡಿದ ಯಂತ್ರೋಪಕರಣದ ಆಧಾರದ ಮೇಲೆ ಒಂದು ಬಾರಿ ಎಷ್ಟು ಸ್ಯಾಂಪಲ್ ಪರೀಕ್ಷಿಸಬಹುದು ಎಂದು ತಿಳಿಯಲಿದೆ. ಇನ್ನೆರಡು ದಿನದಲ್ಲಿ ಪ್ರಯೋಗಾಲಯಕ್ಕೆ ಬೇಕಾದ ಕೊಠಡಿಯಲ್ಲಿ ಮಾರ್ಪಾಡು ಮಾಡುವ ಕೆಲಸ ಆರಂಭಿಸುವ ನಿರೀಕ್ಷೆಯಿದೆ. ಪ್ರಯೋಗಾಲಯಕ್ಕೆ ಸಂಬಂಧ ಸರ್ಕಾರದ ನಿರ್ದೇಶನ ಎದುರು ನೋಡುತ್ತಿದ್ದೇವೆ ಎಂದು ವಿವರಿಸಿದರು.

Translate »