ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಜನಗಣತಿ ವರದಿ ಅನುಷ್ಠಾನ ಅನಿವಾರ್ಯ
ಮೈಸೂರು

ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಜನಗಣತಿ ವರದಿ ಅನುಷ್ಠಾನ ಅನಿವಾರ್ಯ

February 21, 2021

ಮೈಸೂರು,ಫೆ.20(ಪಿಎಂ)- ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಪೂರಕವಾಗಿರುವ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವುದರ ಜೊತೆಗೆ ಅದನ್ನು ಅನುಷ್ಠಾನಗೊಳಿಸ ಬೇಕು ಎಂದು ಹೈಕೋರ್ಟ್ ಹಿರಿಯ ವಕೀ ಲರೂ ಆದ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿ ವರ್ಮ ಕುಮಾರ್ ಒತ್ತಾಯಿಸಿದರು.

ಮೈಸೂರು ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರ ಹಾಗೂ ಅಭಿವೃದ್ಧಿ ಅಧ್ಯಯನ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾ ರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾ ಚರಣೆಯಲ್ಲಿ `ಸಮಕಾಲೀನ ಸಂದರ್ಭ ದಲ್ಲಿ ಸಾಮಾಜಿಕ ನ್ಯಾಯದ ಚರ್ಚೆಗಳು’ ಕುರಿತು ಮಾತನಾಡಿದರು.

2016ರಲ್ಲಿ ಸಮೀಕ್ಷೆ ಕೈಗೆತ್ತಿಕೊಂಡು ರಾಜ್ಯದ ಪ್ರತಿ ಮನೆಗೆ ಭೇಟಿ ನೀಡಿ ಜಾತಿ ಜನಗಣತಿ ನಡೆಸಲಾಗಿದೆ. ವರದಿ ಸಿದ್ಧಪಡಿ ಸಿದ್ದರೂ ಸರ್ಕಾರ ಸ್ವೀಕರಿಸಲು ಮುಂದಾ ಗಿಲ್ಲ. 160 ಕೋಟಿ ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಇದೀಗ ನಡೆಯುತ್ತಿರುವ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟಕ್ಕೂ ಈ ವರದಿಯಿಂದ ಪರಿ ಹಾರ ದೊರೆಯಲಿದೆ. ಎಲ್ಲಾ ಜಾತಿಗಳ ಅಂಕಿ-ಅಂಶ ಹಾಗೂ ಸ್ಥಿತಿಗತಿ ವರದಿ ಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವರದಿ ಸ್ವೀಕರಿಸಲು ಮುಂದಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಜಾತಿ ವ್ಯವಸ್ಥೆ ಪೋಷಿಸುವ ಸರ್ಕಾರಗಳು ಅಧಿಕಾರ ನಡೆಸುತ್ತಿವೆ. ಇದರಿಂದ ಸಾಮಾಜಿಕ ನ್ಯಾಯ ಮರೆಯಾಗುತ್ತಿದೆ. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಬಹಳ ಚೆನ್ನಾಗಿ ಜಾತಿ ವ್ಯವಸ್ಥೆ ಪೋಷಿಸುತ್ತಿದ್ದಾರೆ. 16 ಜಾತಿಗಳ ಅಭಿವೃದ್ಧಿ ನಿಗಮಗಳನ್ನು ರಚಿಸಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣವನ್ನು ಹೇರಳ ವಾಗಿ ಕೊಟ್ಟಿದ್ದಾರೆ. ಅದರಲ್ಲೂ ಅವರ ಸ್ವಂತ ಜಾತಿಗೆ ನಿಗಮ ರಚನೆ ಮಾಡಿ ಮಾರನೇ ದಿನಕ್ಕೆ ಅನುದಾನ ಕಲ್ಪಿಸಿದ್ದಾರೆ. ಅತ್ಯಂತ ಸಂವಿಧಾನ ವಿರೋಧಿ ಚಟು ವಟಿಕೆ ಇದು ಎಂದು ಟೀಕಿಸಿದರು.

ಜಾತ್ಯಾತೀತ ಸರ್ಕಾರ ಇದ್ದಿದ್ದರೆ ಇಂದು ನಡೆಯುತ್ತಿರುವ ವಿವಿಧ ಜಾತಿಗಳ ಮೀಸ ಲಾತಿ ಹೋರಾಟವೇ ಇರುತ್ತಿರಲ್ಲಿಲ್ಲ. ಸನ್ಯಾಸಿ ಗಳಿಗೆ ರಾಜಕೀಯ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಖಾವಿ ಬಟ್ಟೆ ಹಾಕಿ ರಾಜ ಕೀಯ ಮಾಡಿದರೆ ಸನ್ಯಾಸತ್ವಕ್ಕೆ ಕಳಂಕ ತಂದಂತೆ. ಆದರೆ ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸ್ವಾಮೀಜಿ ಗಳಿಂದ ಸಂವಿಧಾನೇತರ ಅಧಿಕಾರ ಸೃಷ್ಟಿ ಯಾಗುತ್ತಿದೆ ಎಂದರು.

ಸರ್ಕಾರ ಕೃಪಾಪೋಷಿತ ಹೋರಾಟ ಗಳು: ಕುರುಬ ಸಮುದಾಯ ಎಸ್‍ಟಿಗೆ ಸೇರ್ಪಡೆ ಹೋರಾಟ ಹಾಗೂ ಪಂಚಮ ಸಾಲಿ ಸಮುದಾಯ 2ಎ ಮೀಸಲಾತಿ ಹೋರಾಟ ಸರ್ಕಾರದ ಕೃಪಾಪೋಷಿತದಲ್ಲಿ ನಡೆಯುತ್ತಿವೆ ಎಂದು ಪ್ರೊ.ರವಿವರ್ಮ ಕುಮಾರ್ ಆರೋಪಿಸಿದರು.

ಕುರುಬ ಸಮುದಾಯ ಎಸ್‍ಟಿ ಹೋರಾಟ ದಲ್ಲಿ ಸಚಿವ ಸಂಪುಟದ ಸದಸ್ಯರೇ ಮುಂಚೂಣಿಯಲ್ಲಿದ್ದು, ಅವರು ತಮ್ಮದೇ ಸರ್ಕಾರದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಸಚಿವರೇ ನಾಯಕತ್ವ ವಹಿಸಿರುವುದರಿಂದ ಇದು ಸರ್ಕಾರದ ಕೃಪಾಪೋಷಿತ ಹೋರಾಟ. ಪಂಚಮಸಾಲಿ ಸಮು ದಾಯದ 2ಎ ಹೋರಾಟವೂ ಅದೇ ರೀತಿಯಾಗಿದೆ ಎಂದು ದೂರಿದರು.

ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ಉಪಜಾತಿಗಳಿದ್ದು, ಅಂತಹ 23 ಉಪಜಾತಿಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಆದರೆ ಈ ಉಪ ಜಾತಿಯ ಯಾರೂ `2ಎ’ಗಾಗಿ ಹೋರಾಟ ಮಾಡುತ್ತಿಲ್ಲ. ಆದರೆ ಹೋರಾಟ ಮಾಡು ತ್ತಿರುವವರು ತಮ್ಮ ಜನಸಂಖ್ಯೆ ಹೇಳು ವಾಗ ಈ ಉಪಜಾತಿಗಳನ್ನು ಸೇರಿಸಿಯೇ ಹೇಳುತ್ತಿದ್ದಾರೆ ಎಂದರು.

ಖಾಸಗಿ ವ್ಯವಸ್ಥೆಯಲ್ಲೂ ಮೀಸಲಾತಿ ಕಲ್ಪಿಸಬೇಕು. ಅದರಲ್ಲೂ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡು ವಾಗ ಕಡ್ಡಾಯವಾಗಿ ಅಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಇಂದು ಇಡೀ ಸುಪ್ರಿಂ ಕೋರ್ಟ್‍ನಲ್ಲಿ ಒಬ್ಬರೂ ದಲಿತ ಸಮು ದಾಯದ ನ್ಯಾಯಮೂರ್ತಿಗಳಿಲ್ಲ. ಹೀಗಾಗಿ ರಾಜ್ಯಾಂಗದ ಹುದ್ದೆಗಳು ಹಾಗೂ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಉದ್ಘಾಟನೆ ನೆರವೇರಿಸಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಡಿ. ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಎಸ್.ಲಿಂಗಪ್ಪ, ಡಾ.ಅಂಬೇ ಡ್ಕರ್ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಅಭಿವೃದ್ಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಬಿ.ಶಂಕರ್ ಮತ್ತಿತರರು ಹಾಜರಿದ್ದರು.

 

Translate »