ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ
ಮೈಸೂರು

ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

February 22, 2021

ಮೈಸೂರು,ಫೆ.21(ಎಂಟಿವೈ)-ಮೈಸೂರಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮು ದಾಯ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದಿಂದ ಫೆ.23ರ ಬೆಳಗ್ಗೆ 10.45ಕ್ಕೆ ಲಯನ್ಸ್ ಜಿಲ್ಲೆ 317ಎ ಪ್ರಾಂತ್ಯ ಐದರ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಜೆ.ಲೋಕೇಶ್ ಮೈಸೂರಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಾಂತೀಯ ಸಮ್ಮೇಳನವನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾ ಟಿಸಲಿದ್ದಾರೆ. ಮೈಸೂರು ಶಾಖಾ ಮಠದ ಶ್ರೀ ಸೋಮೇ ಶ್ವರ ಸ್ವಾಮೀಜಿ ಉಪಸ್ಥಿತರಿರುವರು. ಶಾಸಕ ಎಲ್. ನಾಗೇಂದ್ರ, ಮಾಜಿ ಲಯನ್ಸ್ ಗವ ರ್ನರ್ ಲ.ಕೆ.ದೇವೇಗೌಡ, ಅಂಕಣ ಕಾರ ಗುಬ್ಬಿಗೂಡು ರಮೇಶ್ ಪಾಲ್ಗೊ ಳ್ಳುವರು ಎಂದರು. ದಟ್ಟಗಳ್ಳಿಯ ಜಯಲಕ್ಷ್ಮಿದೇವಿ ಪಿಯು ಕಾಲೇಜಿಗೆ ಲಯನ್ ಎನ್. ಕೃಷ್ಣೇಗೌಡ, ಹೆಚ್.ಡಿ.ಕೋಟೆ ಲಯನ್ಸ್ ಶಾಲೆಗೆ ಕೆ.ದೇವೇ ಗೌಡ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಕಾರ್ಯಕ್ರಮದಲ್ಲಿ ನೆರವು ನೀಡಲಿದ್ದಾರೆ. ಇತರರು, ಬನ್ನೂರು ಲಯನ್ಸ್ ಕ್ಲಬ್‍ನಿಂದ ಎಸ್‍ಎಸ್‍ಎಲ್‍ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡ ಲಾಗುವುದು ಎಂದರು. ಲಯನ್ಸ್ ಮಿಡ್‍ಟೌನ್ ನಿಂದ ಇಬ್ಬರು ತರಕಾರಿ ವ್ಯಾಪಾರಿಗಳಿಗೆ ತಳ್ಳುಗಾಡಿ, ಕುವೆಂಪುನಗರ ಲಯನ್ಸ್‍ನಿಂದ ಇಬ್ಬರು ಮಹಿಳೆ ಯರಿಗೆ ಹೊಲಿಗೆ ಯಂತ್ರ ನೀಡಲಾಗುವುದು. 3.75 ಲಕ್ಷ ರೂ.ಗಳ ಸಮಾಜಸೇವಾ ಕಾರ್ಯ ಸಹ ನಡೆಯ ಲಿದೆ. ಈ ಸಮ್ಮೇಳನದಲ್ಲಿ ಜಿಲ್ಲಾ ಗವರ್ನರ್ ಜಿ.ಎ. ರಮೇಶ್, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳ 800 ಸದಸ್ಯರು ಪಾಲ್ಗೊಳ್ಳಲಿ ದ್ದಾರೆ ಎಂದರು. ಲಯನ್ಸ್ ಪ್ರತಿನಿಧಿಗಳಾದ ಎನ್.ಕೃಷ್ಣೇ ಗೌಡ, ಗೋಪಾಲಸ್ವಾಮಿ, ಜಯರಾಂ, ವೆಂಕಟೇಶ್, ಎಂ.ಎಸ್.ಮೋಹನ್ ಗೋಷ್ಠಿಯಲ್ಲಿದ್ದರು.

Translate »