ಸ್ವಾರ್ಥ ಬಿಟ್ಟು ಸೇವೆ ಸಲ್ಲಿಸುವುದೇ ಲಯನ್ಸ್ ಗುರಿ
ಚಾಮರಾಜನಗರ

ಸ್ವಾರ್ಥ ಬಿಟ್ಟು ಸೇವೆ ಸಲ್ಲಿಸುವುದೇ ಲಯನ್ಸ್ ಗುರಿ

July 22, 2018

ಚಾಮರಾಜನಗರ:  ‘ಸ್ವಾರ್ಥವನ್ನು ಬಿಟ್ಟು ಸಂಕಷ್ಟದಲ್ಲಿರುವವರಿಗೆ ಸೇವೆ ಮಾಡು ವುದೇ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ವಾಗಿದೆ’ ಎಂದು ಮೊದಲನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಹೇಳಿದರು.

ನಗರದ ರತ್ನೇಶ್ವರಿ ರೆಸಿಡೆನ್ಸಿ ಹಾಲ್‍ನಲ್ಲಿ ನಡೆದ ಚಾಮರಾಜನಗರ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಮಾಣ ವಿತರಿಸಿ ಅವರು ಮಾತನಾಡಿದರು. ಲಯನ್ಸ್ ಸಂಸ್ಥೆಯು ಅಂತಾ ರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಶಾಖೆ ಯನ್ನು ಹೊಂದಿದ್ದು, ಸೇವೆ ಮಾಡುತ್ತಿದೆ. ಆರೋಗ್ಯ, ಪರಿಸರ ಸರಂಕ್ಷಣೆ, ಸ್ವಚ್ಛತೆ, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜ ಮುಖಿ ಕೆಲಸ ಮಾಡುತ್ತಿದೆ. ಬಡ ವರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಲಯನ್ ವೈ.ಪಿ. ರಾಜೇಂದ್ರ ಮಾತನಾಡಿ, ಒಂದು ವರ್ಷದಲ್ಲಿ 13 ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಿ 2,210ಮಂದಿಗೆ ತಪಾಸಣೆ ನಡೆಸಲಾಗಿದೆ. 660 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಕೊಡ ಲಾಗಿದೆ. ಇದರ ಜೊತೆಗೆ, ಆರೋಗ್ಯ ತಪಾಸಣಾ ಶಿಬಿರ, ಡೆಂಗ್ಯೂ ಜಾಗೃತಿ ಶಿಬಿರ, ಪರಿಸರ ಕಾರ್ಯಕ್ರಮ ಸೇರಿದಂತೆ ಹಲವು ಸೇವಾ ಕಾರ್ಯಕ್ರಮ ನಡೆಸಲಾಗಿದೆ. ಇದರ ಜೊತೆಗೆ ಸಂಸ್ಥೆಗೆ ಎಲ್ಲಾ ಸದಸ್ಯರು, ಪದಾಧಿ ಕಾರಿಗಳ ಸಹಕಾರದಿಂದ ನಿವೇಶನ ಖರೀದಿ ಮಾಡಿ ಸಂಸ್ಥೆಯ ಏಳಿಗೆಗೆ ಶ್ರಮಿಸಲಾಗಿದೆ ಎಂದರು.

ಲಯನ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಬಿ.ಎಮ್.ಪ್ರಭುಸ್ವಾಮಿ, ನೂತನ ಅಧ್ಯಕ್ಷ ಲಯನ್ ಟಿ.ಎಮ್. ರಂಗಸ್ವಾಮಿ ಮಾತನಾಡಿದರು.

ಈ ವೇಳೆ ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರ, ಶಾಲಾ ಮಕ್ಕಳಿಗೆ ತಟ್ಟೆ ಲೋಟ, ಕ್ರೀಡಾಸಾಮಗ್ರಿ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿ ಸಲಾಯಿತು. 2018-19ನೇ ಸಾಲಿಗೆ ನೂತನ ಲಯನ್ಸ್ ಸದಸ್ಯರಾಗಿ ಮುರಳಿ ದರ್ ಮತ್ತು ನವೀನ್ ಅವರನ್ನು ಸೇರ್ಪ ಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹೊಸೂರು ಜಗದೀಶ್, ಖಜಾಂಚಿ ಚೇತನ್, ಜಿಲ್ಲಾಧ್ಯಕ್ಷ ನಂದಕುಮಾರ್, ಕನ್ನಯ್ಯಲಾಲ್ ಜೈನ್, ವಲಯ ಅಧ್ಯಕ್ಷ ಬಿ.ಎನ್.ವಿಜಯ ಕುಮಾರ್, ಉಪಾಧ್ಯಕ್ಷ ಡಾ.ಮಹೇಶ್, ವೃಷಬೇಂದ್ರಪ್ಪ, ಸಹ ಕಾರ್ಯದರ್ಶಿ ಪ್ರಕಾಶ್‍ಜೈನ್, ನಿರ್ದೇಶಕರಾದ ಡಾ.ಎ.ಬಿ. ನಂಜಪ್ಪ, ಕೆ.ಬಾಲ ಸುಬ್ರಮಣ್ಯಂ, ಬಿ.ಎಂ. ಸ್ವಾಮಿ, ಡಾ.ವಿನಯ್, ಸಿ.ಪಿ.ಜಗದೀಶ್, ಗಣಿಪತಲಾಲ್ ಜೈನ್ ಹಾಜರಿದ್ದರು.

Translate »