ವಿದ್ಯಾರ್ಥಿನಿಲಯಗಳಿಗೆ ಸಚಿವರ ಭೇಟಿ, ಪರಿಶೀಲನೆ
ಚಾಮರಾಜನಗರ

ವಿದ್ಯಾರ್ಥಿನಿಲಯಗಳಿಗೆ ಸಚಿವರ ಭೇಟಿ, ಪರಿಶೀಲನೆ

July 22, 2018

ಚಾಮರಾಜನಗರ:  ನಗರದಲ್ಲಿ ರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹಾಗೂ ವೃತ್ತಿಪರ ಮೆಟ್ರಿಕ್ ನಂತ ರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಮಹದೇಶ್ವರ ಕಾಲೋನಿ ಬಳಿ ಯಿರುವ ವಿದ್ಯಾರ್ಥಿ ನಿಲಯಕ್ಕೆ ಬೆಳಿಗ್ಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು. ಬಳಿಕ, ಅಡುಗೆ ಮನೆ ದಾಸ್ತಾನು, ಕಂಪ್ಯೂಟರ್ ಕೊಠಡಿ, ಹಾಜರಾತಿ, ಶೌಚಾ ಲಯದ ಸ್ವಚ್ಛತೆ, ಮಲಗುವ ಕೊಠಡಿಗಳು, ವಾಚನಾಲಯ ಹಾಗೂ ಕಟ್ಟಡಗಳ ಸುತ್ತ್ತ ಲಿನ ಪ್ರದೇಶದ ಸ್ವಚ್ಛತೆಯ ಬಗ್ಗೆ ಪರಿ ಶೀಲಿಸಿ, ಸುತ್ತುಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಉತ್ತಮವಾದ ಆಹಾರ, ಮಲಗುವ ಕೊಠಡಿಗಳಿಗೆ ಉತ್ತಮವಾದ ಬೆಡ್ಡುಗಳು ಆಧುನಿಕ ಕಂಪ್ಯೂಟರ್ ಗಳನ್ನು ನೀಡುವುದು ಸೇರಿದಂತೆ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗ ದಂತೆ ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಯೊಂದು ಕೊಠಡಿಗಳನ್ನು ಸ್ವಚ್ಛತೆ ಯಿಂದ ಇರುವಂತೆ ವಿಶೇಷ ಕಾಳಜಿ ವಹಿಸ ಬೇಕು. ಮುಂದಿನ ಬಾರಿ ನಾನು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುವಾಗ ಯಾವುದೇ ಕುಂದುಕೊರತೆಗಳು ಇರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರ್ಕಾರದಿಂದ ಹಿಂದುಳಿದ ವರ್ಗ ಗಳ ಕಲ್ಯಾಣಕ್ಕಾಗಿ ವಿಶೇಷ ಅನುದಾನ ಗಳನ್ನು ನೀಡುತ್ತಿದ್ದು, ಇದನ್ನು ಸಮ ರ್ಪಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಪ್ರಸಾದ್ ಸೇರಿ ದಂತೆ ವಿದ್ಯಾರ್ಥಿನಿಲಯಗಳ ಮೇಲ್ವಿ ಚಾರಕರು ಹಾಜರಿದ್ದರು.

Translate »