ಮೈಸೂರು, ನ.4(ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕನಾಯಕ ನಗರದ ಸಂಜೀವಿನಿ ವೃತ್ತದ ಬಳಿ 1.99 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಅಪೂರ್ವ ಬಾರ್‍ನಿಂದ ಬಸವನಗುಡಿ ವೃತ್ತದ ಮೂಲಕ ಮೇಟಗಳ್ಳಿಯ ಕೆಆರ್‍ಎಸ್ ಮುಖ್ಯ ರಸ್ತೆಗೆ ಸೇರುವ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಉತ್ತಮ ಗುಣಮಟ್ಟದಲ್ಲಿ ಕಾಮ ಗಾರಿ ನಡೆಯುವಂತೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭ ಪಾಲಿಕೆ ಸದಸ್ಯರಾದ ಲಕ್ಷ್ಮಿ ಶಿವಣ್ಣ, ಪ್ರೇಮಾ ಶಂಕರೇಗೌಡ, ಶ್ರೀಧರ್, ಪೈಲ್ವಾನ್ ಶ್ರೀನಿವಾಸ್, ಸುಬ್ಬಯ್ಯ, ಲೋಕೋಪಯೋಗಿ ಇಲಾಖೆ ಇಇ ಹರ್ಷ, ಎಇಇ ರಾಜು, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರರಾಜು, ಉಪಾಧ್ಯಕ್ಷ ಕುಮಾರ್‍ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್‍ಗೌಡ, ಯುವಮೋರ್ಚಾ ಅಧ್ಯಕ್ಷ ಕಿರಣ್‍ಗೌಡ, ಪಾಲಿಕೆ ಮಾಜಿ ಸದಸ್ಯರಾದ ದೇವರಾಜು, ಚಿಕ್ಕ ವೆಂಕಟು, ಮುಖಂಡರಾದ ರಾಮೇಗೌಡ, ಮಂಜು, ಅರುಣ್, ಸಂಜೀವಿನಿ ಕುಮಾರ್, ಶುಭ, ಮಮತಾ ಇನ್ನಿತರರು ಇದ್ದರು.