ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಬಂಧನ
ಮೈಸೂರು

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಬಂಧನ

November 5, 2020

ಮುಂಬೈ, ನ.4-ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇರೆಗೆ ಮುಂಬೈ ಪೊಲೀಸರು ಬುಧವಾರ ಬೆಳಿಗ್ಗೆ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿ ಸಿರುವುದರ ಹಿನ್ನೆಲೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ನ್ಯಾಯಾಧೀಶರ ಮುಂದೆ ಗೋಸ್ವಾಮಿ ಅವ ರನ್ನು ಹಾಜರುಪಡಿಸಲಾಗಿ ನ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಹಿನ್ನೆಲೆ: ಅರ್ನಾಬ್ ಗೋಸ್ವಾಮಿ ತಮಗೆ ಬಾಕಿ ಹಣ ನೀಡಲಿಲ್ಲ. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವು ದಾಗಿ ಡೆತ್‍ನೋಟ್ ಬರೆದಿಟ್ಟು, ಇಂಟೀ ರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ 2018ರ ಮೇ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ನಾಯಕ್ ಅವರ ಪತ್ನಿ ಅಕ್ಷತಾ ನಾಯಕ್, ಅರ್ನಾಬ್ ಗೋಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು.

ಈ ಮಧ್ಯೆ ಕಳೆದ ಸೆಪ್ಟೆಂಬರ್‍ನಲ್ಲಿ ನಾಯಕ್ ಅವರ ಪುತ್ರಿ ಆದ್ನಯ ನಾಯಕ್ ಮತ್ತೆ ಹೊಸದಾಗಿ ದೂರೊಂದನ್ನು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಮುಂಬೈನಲ್ಲಿರುವ ಅರ್ನಾಬ್ ಗೋಸ್ವಾಮಿ ಅವರ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, ಅವರನ್ನು ಬಂಧಿಸಿ ರಾಯಗಢ ಜಿಲ್ಲೆಯ ಅಲೀಬೌಗ್ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸ್ ಠಾಣೆಗೆ ವಾಹನದಲ್ಲಿ ಕರೆದೊಯ್ಯುವ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಗೋಸ್ವಾಮಿ, ಪೊಲೀಸರು ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಆದರೆ ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಹೇಳಿದ್ದಾರೆ.

ಖಂಡನೆ: ಅರ್ನಾಬ್ ಬಂಧನವನ್ನು ಭಾರತೀಯ ಸಂಪಾದಕರ ಗಿಲ್ಡ್ ಖಂಡಿ ಸಿದ್ದು, ಈ ಪ್ರಕರಣದಲ್ಲಿ ಮುಕ್ತ ವಾಗಿ ತನಿಖೆ ನಡೆಸಬೇಕೆಂದು ಮಹಾರಾಷ್ಟ್ರ ಸಿಎಂ ಉದ್ಭವ್ ಠಾಖ್ರೆ ಕೋರಿದೆ. ಮಾಧ್ಯಮಗಳು ಮಾಡುವ ಸೂಕ್ಷ್ಮ ವರದಿಗಳ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಅಧಿಕಾರ ವನ್ನು ಬಳಸಬಾರದು ಎಂದು ಗಿಲ್ಡ್ ಹೇಳಿದೆ.

ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷ ಪ್ರಜಾ ಪ್ರಭುತ್ವವನ್ನು ನಾಚಿಕೆಪಡುವಂತೆ ಮಾಡಿದೆ. ಗೋಸ್ವಾಮಿ ವಿರುದ್ಧ ತನ್ನ ಅಧಿಕಾರ ಬಳಸಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ 4ನೇ ಅಂಗದ ಮೇಲೆ ದಾಳಿ ನಡೆಸ ಲಾಗಿದೆ ಎಂದು ದೂರಿದೆ.

Translate »