ಪತ್ನಿ, ಆಕೆಯ ಮನೆಯವರ ಕಿರುಕುಳ ಸಂಬಂಧ ಸೆಲ್ಫಿ ವೀಡಿಯೋ ಮಾಡಿ ಕಾರ್ಮಿಕ ಆತ್ಮಹತ್ಯೆ
ಮೈಸೂರು

ಪತ್ನಿ, ಆಕೆಯ ಮನೆಯವರ ಕಿರುಕುಳ ಸಂಬಂಧ ಸೆಲ್ಫಿ ವೀಡಿಯೋ ಮಾಡಿ ಕಾರ್ಮಿಕ ಆತ್ಮಹತ್ಯೆ

November 5, 2020

ಮೈಸೂರು, ನ.4-ಪತ್ನಿ ಹಾಗೂ ಆಕೆಯ ಮನೆ ಯವರ ಕಿರುಕುಳದಿಂದಾಗಿ ಖಿನ್ನತೆಗೊಳ ಗಾಗಿದ್ದ ಕಟ್ಟಡ ಕಾರ್ಮಿಕನೋರ್ವ ತನಗಾಗಿರುವ ಕಿರು ಕುಳದ ಬಗ್ಗೆ ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ನಾಗರಾಜು (42) ಎಂಬಾತ ಸೆಲ್ಫಿ ವೀಡಿಯೋವನ್ನು ಸೋಮವಾರ (ನ.2) ಬೆಳಿಗ್ಗೆ 11.19ಕ್ಕೆ ತನ್ನ ತಾಯಿಯ ವಾಟ್ಸಪ್‍ಗೆ ರವಾನೆ ಮಾಡಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಈ ಸಂಬಂಧ ಆತನ ಪತ್ನಿ ಮಂಜುಳಾ ರನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: ಆತ್ಮಹತ್ಯೆ ಮಾಡಿಕೊಂಡ ನಾಗರಾಜು, ನಂಜನಗೂಡಿನ ಮಂಜುಳಾರನ್ನು ಕಳೆದ 8 ವರ್ಷ ಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಕಲಹವುಂಟಾಗಿತ್ತು ಎಂದು ಹೇಳಲಾಗಿದೆ. ನ.2ರಂದು ನಾಗರಾಜು `ನನ್ನ ಹೆಂಡತಿ ಮಂಜುಳಾ, ಆಕೆಯ ತಾಯಿ ನಾಗಮ್ಮ, ಭಾವಮೈದುನರಾದ ಮಣಿಕಂಠ, ಸುಂದರ ಮತ್ತು ಪತ್ನಿಯ ಸ್ನೇಹಿತೆ ನಾಗಮಣಿ ನನಗೆ ಹಿಂಸೆ ಕೊಡುತ್ತಿದ್ದಾರೆ’ ಎಂದು ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿದ್ದಾನೆ. ಪತ್ನಿಯು `ನೀನು ಚೆನ್ನಾಗಿಲ್ಲ, ಸತ್ತು ಹೋಗು, ನಿನ್ನ ಅಣ್ಣನನ್ನು ಮದುವೆ ಯಾಗುತ್ತೇನೆ’ ಎಂದು ಹೇಳುತ್ತಾಳೆ. ಊರಿನಲ್ಲಿರುವ ಮನೆಯಲ್ಲಿ ಭಾಗ ಕೊಡಿಸುವಂತೆ ಪೀಡಿಸುತ್ತಿ ದ್ದಾಳೆ ಎಂದು ಆತ ವೀಡಿಯೋದಲ್ಲಿ ಹೇಳಿ, ನಂತರ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ನಾಗರಾಜುವಿನ ತಾಯಿ ಕಾಂತಮ್ಮ ಸರಸ್ವತಿಪುರಂ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀ ಸರು ಆತನ ಪತ್ನಿ ಮಂಜುಳಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Translate »