ಪೋಷಣ್ ಅಭಿಯಾನ ಪ್ರಬಂಧ ಸ್ಪರ್ಧೆ ವಿಜೇತರು
ಮೈಸೂರು

ಪೋಷಣ್ ಅಭಿಯಾನ ಪ್ರಬಂಧ ಸ್ಪರ್ಧೆ ವಿಜೇತರು

November 5, 2020

ಮೈಸೂರು, ನ. 4- ಪೌಷ್ಟಿಕÀ ಕೈತೋಟ ಗಳನ್ನು ನಿರ್ಮಾಣ ಮಾಡುವುದರ ಮೂಲಕ ಸಮತೋಲನ ಆಹಾರ ಉತ್ಪಾದಿಸಿಕೊಳ್ಳಿ ಎಂದು ಮೈಸೂರು ಉತ್ತರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ. ಸಿ.ಎಸ್. ಕುಮಾರಸ್ವಾಮಿ ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಮೈಸೂರು ಉತ್ತರ ವಲ ಯದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಪೋಷಣಾ ಅಭಿಯಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಹೆಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಹು ಮಾನ ವಿತರಿಸಿ ಮಾತನಾಡಿದ ಅವರು, ನುಗ್ಗೆ, ಪಪ್ಪಾಯಿ, ಕೊತ್ತಂಬರಿ, ಪೇರಲ, ಬಾಳೆ, ಸೊಪ್ಪು ಮತ್ತು ಕರಿಬೇವುಗಳನ್ನು ಕೈತೋಟದಲ್ಲಿ ಬೆಳೆದು ಅವುಗಳನ್ನು ಉಪ ಯೋಗಿಸುವುದರ ಮೂಲಕ ಅಪೌಷ್ಟಿಕತೆ ಯನ್ನು ಹೋಗಲಾಡಿಸಬಹುದು. ತನು ಶುಚಿಯಾಗಿ ಇಟ್ಟುಕೊಂಡರೆ, ನಡೆ, ನುಡಿ, ಮನ ಮತ್ತು ಭಾವ ಎಲ್ಲವೂ ಶುಚಿಯಾಗಲು ಸಾಧ್ಯ. ಇದರಿಂದ ದೇಹ ಮತ್ತು ಮನಸ್ಸನ್ನು ಸಂಪೂರ್ಣ ಸಮತೋಲನದಲ್ಲಿ ಇಟ್ಟು ಕೊಂಡು ದೈಹಿಕ, ಸಾಮಾಜಿಕ ಮತ್ತು ಮಾನ ಸಿಕ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಬರುತ್ತದೆ ಎಂದರು.

ಬಿ.ಆರ್.ಪಿ ಆರ್. ನರೇಂದ್ರ ಮಾತನಾಡಿ, ಭಾರತದಲ್ಲಿ ಶೇ.15ರಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುತ್ತಿದ್ದು, ವಿದ್ಯಾರ್ಥಿಗಳು ಕಾರ್ಬೊಹೈಡ್ರೇಟ್, ಲಿಪಿಡ್, ಪ್ರೋಟೀನ್, ವಿಟಮಿನ್, ಖನಿಜ ಮತ್ತು ನಾರು ಪದಾರ್ಥ ಗಳನ್ನು ಒಳಗೊಂಡ ಆಹಾರ ಪದಾರ್ಥ ಸೇವಿಸುವುದರ ಮುಖಾಂತರ ಅಪೌಷ್ಟಿಕತೆ ಹೋಗಲಾಡಿಸಬಹುದು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಪುಟ್ಟಸ್ವಾಮಿ, ಅನುದಾನಿತ ಪ್ರೌಢಶಾಲೆಯ ಆರ್.ಐಶ್ವರ್ಯ, ವಿನಾಯಕನಗರ ಸರ್ಕಾರಿ ಪ್ರೌಢಶಾಲೆಯ ಆರ್.ನಾಗರತ್ನ ಮತ್ತು ಹೆಬ್ಬಾಳಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೈದೇಶ್‍ಕುಮಾರ್ ಅವರಿಗೆ ಪ್ರಮಾಣಪತ್ರ ಮತ್ತು ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಣ್ಣ, ಕಾರ್ಯದರ್ಶಿ ಲೋಹಿತೇಶ್, ಕೆ.ಪುಟ್ಟಸ್ವಾಮಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್ ಮತ್ತು ಶಿಕ್ಷಕ ಗಿರೀಶ್ ಉಪಸ್ಥಿತರಿದ್ದರು.

 

 

Translate »