11 ಶ್ರೇಷ್ಠ ವಿದ್ಯಾರ್ಥಿಗಳಿಗೆ 10 ಚಿನ್ನದ ಪದಕ, 14 ನಗದು ಬಹುಮಾನ
ಮೈಸೂರು

11 ಶ್ರೇಷ್ಠ ವಿದ್ಯಾರ್ಥಿಗಳಿಗೆ 10 ಚಿನ್ನದ ಪದಕ, 14 ನಗದು ಬಹುಮಾನ

March 5, 2021

ಮೈಸೂರು,ಮಾ.4(ಆರ್‍ಕೆಬಿ)- ಮೈಸೂ ರಿನ ಶಿವರಾತ್ರೀಶ್ವರನಗರದ ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದ ಅವರಣ ದಲ್ಲಿ ಶುಕ್ರವಾರ (ಮಾ.5) ಸಂಜೆ 4.30 ಗಂಟೆಗೆ ಪದವೀಧರ ದಿನಾಚರಣೆ ಆಯೋ ಜಿಸಿದ್ದು, ಈ ಬಾರಿ 11 ಶ್ರೇಷ್ಠ ವಿದ್ಯಾರ್ಥಿ ಗಳು 10 ಚಿನ್ನದ ಪದಕಗಳು ಮತ್ತು 14 ನಗದು ಬಹುಮಾನಗಳನ್ನು ಹಂಚಿಕೊಳ್ಳು ತ್ತಿದ್ದಾರೆ. ಈ ಪೈಕಿ ಡಾ.ರುದ್ರ ರೂಪೇಶ್‍ರೆಡ್ಡಿ 3 ಚಿನ್ನದ ಪದಕ ಮತ್ತು 3 ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಜೆಎಸ್‍ಎಸ್ ವೈದ್ಯಕೀಯ ಕಾಲೇ ಜಿನ ಪ್ರಾಂಶುಪಾಲ ಡಾ.ಹೆಚ್. ಬಸವನ ಗೌಡಪ್ಪ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಪದವೀಧರ ದಿನಾಚರಣೆ ಕುರಿತ ಮಾಹಿತಿ ನೀಡಿದ ಅವರು, ಈ ಬಾರಿ 217 ಪದವೀಧರರು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಿದ್ದು, ಪ್ರತಿ ಭಾನ್ವಿತರಿಗೆ ಚಿನ್ನದ ಪದಕ, ನಗದು ಬಹು ಮಾನ, ಮೆರಿಟ್ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಎಲ್ಲಾ ಯುವ ಪದವೀ ಧರರು, ಹಿಪೊಕ್ರಟಿಕ್ ಪ್ರಮಾಣ ವಚನ ಸ್ವೀಕ ರಿಸಲಿದ್ದು, ಇದೇ ಸಂದರ್ಭದಲ್ಲಿ ಅತ್ಯು ತ್ತಮ ಶಿಕ್ಷಕರು ಮತ್ತು 2020ರ ಅತ್ಯುತ್ತಮ ಸಂಶೋಧಕರಿಗೆ ಮೆಚ್ಚುಗೆ ಪ್ರಮಾಣಪತ್ರ ಗಳನ್ನು ವಿತರಿಸಲಾಗುವುದು ಎಂದರು.

ಸಂಜೆ 4.30 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿ ಯಾಗಿರುವ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಮಹಾ ವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸುವರು. ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ ಅಧ್ಯಕ್ಷತೆ ವಹಿಸುವರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮ ಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರಿಂದರ್ ಸಿಂಗ್ ಅತಿಥಿಗಳಾಗಿ ಭಾಗ ವಹಿಸುವರು ಎಂದರು.

ಸಂಶೋಧನೆಯಲ್ಲಿಯೂ ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯವು ಮಹತ್ತರ ಪ್ರಗತಿ ಸಾಧಿಸಿದ್ದು, 2020ರಲ್ಲಿ 460ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದೆ. ಪ್ರಸ್ತುತ ಸಂಸ್ಥೆಯು ಜೆಎಸ್‍ಎಸ್‍ಎಹೆಚ್‍ಎಆರ್, ಐಸಿಎಂಆರ್, ಡಿಬಿಟಿ, ಡಿಎಸ್‍ಟಿ, ವಿಜಿಎಸ್‍ಟಿ, ಐಎಡಿವಿಎಲ್, ಆರ್‍ಎಎನ್‍ಟಿಪಿಸಿ, ಸಿಎಸ್ ಐಆರ್ ಐಐಸಿಬಿ ಸಂಸ್ಥೆಗಳಿಂದ ಅನುದಾನ ಧನಸಹಾಯ ಪಡೆದ 119 ಸಂಶೋಧನಾ ಯೋಜನೆಗಳನ್ನು ಹೊಂದಿದೆ. ನವದೆಹಲಿಯ ದೀರ್ಘಕಾಲದ ಖಾಯಿಲೆ ನಿಯಂತ್ರಣ ಕೇಂದ್ರ ಮತ್ತು ನ್ಯಾಕೋಗಳು 20,65,42,843 ಗಳ ಧನಸಹಾಯವನ್ನು ನೀಡಿದ್ದು, ಇದರಿಂದ ಕ್ಲಿನಿಕಲ್ ಪ್ರಯೋಗಗಳನ್ನು ವಿವಿಧ ಕ್ಲಿನಿಕಲ್ ವಿಭಾಗಗಳಲ್ಲಿ ನಿಯಮಿತವಾಗಿ ನಡೆಸಲಾಗು ತ್ತಿದೆ. ಸಂಸ್ಥೆ ತನ್ನ ಸಂಶೋಧನೆಗಳ ಮೂಲಕ ಡಿಬಿಟಿ ರಾಮಲಿಂಗಸ್ವಾಮಿ ಫೆಲೋಗಳನ್ನು ಆಕರ್ಷಿಸಲು ಇದರಿಂದ ಸಾಧ್ಯವಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ, ಪೋಸ್ಟರ್‍ಗಳನ್ನು ಪ್ರಸ್ತುತ ಪಡಿಸಿ, ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಇದುವರೆಗೂ 5000ಕ್ಕೂ ಹೆಚ್ಚು ಸುಶಿಕ್ಷಿತ ವೈದ್ಯಕೀಯ ಪದವೀಧರರು ಈ ಸಂಸ್ಥೆಯಿಂದ ಯಶಸ್ವಿಯಾಗಿ ಹೊರ ಬಂದಿದ್ದು, ವಿವಿಧ ವಿಶೇಷತೆಗಳನ್ನು ಸುಮಾರು 2000 ಸ್ನಾತಕೋತ್ತರ ಪದ ವೀಧರರು ಹೊರಹೊಮ್ಮಿದ್ದು, ವಿವಿಧ ಸಂಸ್ಥೆ, ದೇಶಗಳಲ್ಲಿ ವೃತ್ತಿಪರ ಕೆಲಸದಿಂದ ಜೆಎಸ್‍ಎಸ್‍ಗೆ ಹೆಮ್ಮೆ ತಂದಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಪ್ರಾಂಶುಪಾಲ ಡಾ.ಜಿ.ವಿ.ಮಂಜುನಾಥ್, ಡಾ. ಎಂ.ಎನ್. ಸುಮಾ, ಆಡಳಿತಾಧಿಕಾರಿ ಡಾ. ಎಸ್.ಆರ್.ಸತೀಶ್‍ಚಂದ್ರ, ಜೆಎಸ್‍ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ದಯಾನಂದ್, ಜೆಎಸ್‍ಎಸ್ ಆಸ್ಪತ್ರೆಯ ಕಂಟ್ರೋಲರ್ ಸುಧೀಂದ್ರಭಟ್ ಉಪಸ್ಥಿತರಿದ್ದರು.

ಕ್ಯೂಎಸ್ 2021ರ ವಿಷಯವಾರು ಜಾಗತಿಕ ವಿವಿಗಳ ರ್ಯಾಂಕಿಂಗ್‍ನಲ್ಲಿ ಜೆಎಸ್‍ಎಸ್‍ಗೆ ಮತ್ತೊಂದು ಗರಿ
ಮೈಸೂರು: ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೊಖ್ರಿಯಾಲ್ ನಿಶಾಂಕ್ ಗುರುವಾರ ವರ್ಚುವಲ್ ಮಾಧ್ಯಮದ ಮೂಲಕ ಬಿಡುಗಡೆ ಮಾಡಿರುವ 2021ರ ಜಾಗತಿಕ ವಿಶ್ವವಿದ್ಯಾನಿಲಯಗಳ ವಿಷಯವಾರು ರ್ಯಾಂಕಿಂಗ್ ಪಟ್ಟಿಯಲ್ಲಿ ಮೈಸೂರಿನ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು 201-205ರ ರ್ಯಾಂಕ್ ಪಟ್ಟಿಯಲ್ಲಿ ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಷಯಗಳಲ್ಲಿ ಶ್ರೇಯಾಂಕಿತವಾಗಿದೆ.

ಇದು ವಿಶ್ವದ 1453 ಶಿಕ್ಷಣ ಸಂಸ್ಥೆಗಳು ಒಟ್ಟು 51 ವಿಷಯಗಳಲ್ಲಿ ಮತ್ತು 5 ವಿಸ್ತøತ ವಿಷಯಗಳನ್ನು ಒಳಗೊಂಡಿದೆ. ಇದರಿಂದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಅಕಾಡೆಮಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಫಾರ್ಮಸಿ ಮತ್ತು ಫಾವರ್iಕಾಲಜಿ ವಿಷಯಗಳಲ್ಲಿ ವಿಷಯವಾರು ರ್ಯಾಂಕ್‍ಗಳಲ್ಲಿ ಕೆಲವು ಮಾನದಂಡಗಳಾದ, ಶೈಕ್ಷಣಿಕ ಮತ್ತು ಉದ್ಯೋಗದಾತರ ಖ್ಯಾತಿ ಮತ್ತು ಪ್ರಕಟಣಾ ಉಲ್ಲೇಖಗಳು ಮತ್ತು ಹೆಚ್ ಇಂಡೆಕ್ಸ್‍ಗಳು ಗುಣಮಟ್ಟದ ಮತ್ತು ಪ್ರಮಾಣೀಕೃತ ಶಿಕ್ಷಣ ಹಾಗೂ ಸಂಶೋಧನೆ ಯನ್ನು ಒಳಗೊಂಡಿದೆ. ಇವುಗಳಿಂದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿಯು ಜಾಗತಿಕವಾಗಿ ಹಾಗೂ ದೇಶೀಯವಾಗಿ ತನ್ನ ಖ್ಯಾತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಸಂಸ್ಥೆಯು ಇತರೆ ವಿಷಯಗಳಾಗ ಜೀವ ವಿಜ್ಞಾನ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿದ್ದು, ಭವಿಷ್ಯದಲ್ಲಿ ಕ್ಯೂ.ಎಸ್ ವಿಷಯವಾರು ರ್ಯಾಂಕಿಂಗ್‍ನಲ್ಲಿ ಮತ್ತಷ್ಟು ಉತ್ತಮ ಸ್ಥಾನ ಗಳಿಸುವಲ್ಲಿ ಹಲವಾರು ತಂತ್ರಗಳನ್ನು ಮತ್ತು ನಿಖರ ನಕ್ಷೆಯನ್ನು ರೂಪಿಸಿಕೊಂಡಿದೆ.

Translate »