ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಕುಕ್ಕರಹಳ್ಳಿ ಕೆರೆಯಲ್ಲಿ ಪತ್ತೆ
ಮೈಸೂರು

ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಕುಕ್ಕರಹಳ್ಳಿ ಕೆರೆಯಲ್ಲಿ ಪತ್ತೆ

March 5, 2021

ಮೈಸೂರು, ಮಾ.4(ಆರ್‍ಕೆ)-ಕಳೆದ 15 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಕೊಳೆತ ಮೃತದೇಹ ಕುಕ್ಕರಹಳ್ಳಿ ಕೆರೆಯಲ್ಲಿ ಇಂದು ಪತ್ತೆಯಾಗಿದೆ. ಮೈಸೂರಿನ ಲಕ್ಷ್ಮೀ ಪುರಂ ನಿವಾಸಿ ನಾರಾಯಣಮೂರ್ತಿ (38) ಸಾವನ್ನಪ್ಪಿದವರು. ಕಳೆದ 15 ದಿನಗಳ ಹಿಂದೆ ಕಣ್ಮರೆಯಾಗಿದ್ದವರನ್ನು ಪೊಲೀಸರು ಹಾಗೂ ಸಂಬಂಧಿಕರು ಹುಡುಕುತ್ತಿದ್ದರು.

ಇಂದು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ಧ ದೇಹ ಪತ್ತೆಯಾ ಗಿದ್ದು, ಸ್ಥಳಕ್ಕೆ ತೆರಳಿದ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಮಹಜರು ನಡೆಸಿದಾಗ ವ್ಯಕ್ತಿ ಗುರುತು ಸಿಗಲಿಲ್ಲ. ಲಕ್ಷ್ಮೀಪುರಂ ಠಾಣೆಯಲ್ಲಿ ಕಳೆದ 15 ದಿನಗಳ ಹಿಂದೆ ನಾರಾಯಣಮೂರ್ತಿ ಎಂಬುವರು ಕಣ್ಮರೆ ಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದರಿಂದ ಪರಿಶೀಲಿಸಲಾಗಿ ಈ ಮೃತದೇಹ ನಾರಾ ಯಣಮೂರ್ತಿಯವರದ್ದು ಎಂಬುದನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ.

ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಅವರು, ಅನಾರೋಗ್ಯದಿಂದ ಕೆಲ ದಿನಗಳ ಹಿಂದಷ್ಟೇ ಸಹೋದರ ಸಾವನ್ನಪ್ಪಿದ್ದರಿಂದ ಮನ ನೊಂದಿದ್ದರು. ಮಾನಸಿಕವಾಗಿ ಜರ್ಝರಿತರಾಗಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ದೇಹ ಹಸ್ತಾಂತರಿಸಿದರು

Translate »