ಮೀಸಲು ಹೋರಾಟವನ್ನು ಸಂಸದ ಶ್ರೀನಿವಾಸ ಪ್ರಸಾದ್ ಬೆಂಬಲಿಸಲಿ
ಮೈಸೂರು

ಮೀಸಲು ಹೋರಾಟವನ್ನು ಸಂಸದ ಶ್ರೀನಿವಾಸ ಪ್ರಸಾದ್ ಬೆಂಬಲಿಸಲಿ

March 5, 2021

ಮೈಸೂರು, ಮಾ.4(ಎಂಟಿವೈ)- ಬುಡಕಟ್ಟು ಸಂಸ್ಕøತಿ ಹಾಗೂ ಆಚರಣೆಗಳಿರುವ ಕುರುಬ ಸಮು ದಾಯವನ್ನು 1950ರ ಗೆಜೆಟ್‍ನಲ್ಲಿ ಪರಿಶಿಷ್ಟ ಪ್ರವರ್ಗಕ್ಕೆ ಸೇರಿಸಲಾಗಿದೆ. ಹೊಸದಾಗಿಯೇನೂ ಮೀಸಲಾತಿ ಕೇಳುತ್ತಿಲ್ಲ. ಈ ವಿಚಾರದಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಬೆಂಬಲ ನೀಡಬೇಕು ಎಂದು ಹಾಲುಮತ ಮಹಾಸಭಾ ಮನವಿ ಮಾಡಿದೆ.

ಮೈಸೂರಲ್ಲಿ ಕನಕ ಮಠದ ಆವರಣದಲ್ಲಿ ಗುರು ವಾರ ಸುದ್ದಿಗಾರರ ಜತೆ ಮಾತನಾಡಿದ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹಾಗೂ ರಾಜ್ಯ ಸಂಚಾಲಕ ರಾಜು ಮೌರ್ಯ ದಾವಣಗೆರೆ, ಕುರುಬ ಸಮಾಜವು ಮುಗ್ಧ ನಡೆ, ಸಂಕೋಚ ಸ್ವಭಾವ ಹಾಗೂ ಬುಡಕಟ್ಟು ಸಂಸ್ಕøತಿ, ಆಚರಣೆಗಳನ್ನು ಹೊಂದಿದೆ. 1950ರ ಗೆಜೆಟ್‍ನಲ್ಲಿ ಪ್ರಕಟವಾದ 6 ಜಾತಿಗಳಲ್ಲಿ ಜೇನು ಕುರುಬ, ಕಾಡು ಕುರುಬ ಜಾತಿಗಳೂ ಸೇರಿವೆ. ನಂತರ 1977ರಲ್ಲಿ ಕುರುಬ ಜಾತಿಗೆ ಸೇರಿದ ಗೊಂಡ, ರಾಜಗೊಂಡ, ಕುರುಮನ್ಸ್, ಕಾಟ್ಟು ನಾಯಕನ್, ಕುರುಬ ಎಂಬ ಜಾತಿಗಳು ಸೇರಿ ಒಟ್ಟು 6 ಜಾತಿಗಳು ಪರಿಶಿಷ್ಟ ಪಂಗಡ (ಎಸ್‍ಟಿ) ಪಟ್ಟಿಯಲ್ಲಿವೆ. ಕುರುಬರು ಹೊಸದಾಗಿ ಎಸ್‍ಟಿ ಮೀಸಲಾತಿ ನೀಡಿ ಎಂದು ಬೇಡಿಕೆ ಸಲ್ಲಿಸಿ ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆಯೇ ಎಸ್‍ಟಿ ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕುರುಬರು ಪಾದಯಾತ್ರೆ ಮೂಲಕ ಸಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜಾಗೃತಿ ಸಭೆ ನಡೆಸಿದರು. ಕಂದಾಯ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಯನ್ನೂ ಸಲ್ಲಿಸಿದರು. 1991ರಲ್ಲಿ ವಾಲ್ಮೀಕಿ ಸಮಾಜದವರಿಗೆ ಬೇರೆ ರಾಜ್ಯದಲ್ಲಿರುವ ಸಮಾನಾರ್ಥಕ ಪದದ ಅನ್ವಯ ಎಸ್‍ಟಿ ಮೀಸಲಾತಿಯಲ್ಲಿ ಸೇರಿಸಲಾಗಿದೆ. ಅದೇ ರೀತಿ ಕುರುಬ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ರಾಜ್ಯದಲ್ಲಿರುವ ಸಮಾನಾರ್ಥಕ ಪದದ ನ್ವಯ ಎಸ್‍ಟಿ ಮೀಸಲಾತಿ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ ಎಂದರು. ಮಾಜಿ ಸಚಿವ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಅನ್ಯಾಯಕ್ಕೊಳಗಾಗಿರುವ ಕುರುಬ ಸಮಾಜದ ಪರ ಧ್ವನಿಯಾಗಬೇಕು. ಕುರುಬ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನರು ಸ್ಥಿತಿವಂತರಿರಬಹುದು. ಇಡೀ ಕುರುಬ ಸಮಾಜದಲ್ಲಿ ರಾಜ್ಯಮಟ್ಟದ ರಾಜಕಾರಣಿ ಗಳಿರುವುದೇ ಬೆರಳೆಣಿಕೆಯಷ್ಟು ಮಂದಿ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಮೇಲೆ ಸಿಟ್ಟಾದರೆ ಹೇಗೆ? ಯಾರೋ ಒಬ್ಬರು ಹೆಲಿಕಾಪ್ಟರ್‍ನಲ್ಲಿ ಓಡಾಡಿದ ಮಾತ್ರಕ್ಕೆ ಸಮಾಜವೇ ಹೀಗಿದೆ ಎಂದು ಹೇಳಲು ಸಾಧ್ಯವೇ? ಕುರುಬ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಇಂದಿಗೂ ಬಡತನದಲ್ಲಿದೆ. ಕುರುಬರು ತುಳಿತಕ್ಕೆ ಒಳ ಪಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
.

Translate »