ಭರವಸೆ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಮತ
ಮೈಸೂರು

ಭರವಸೆ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಮತ

March 5, 2021

ಮೈಸೂರು, ಮಾ.4ಆರ್‍ಕೆಬಿ)- ಎಲ್ಲರಲ್ಲೂ ಒಂದಿಲ್ಲೊಂದು ರೀತಿಯ ವೈಫಲ್ಯ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಭರವಸೆ ಬಹಳ ಮುಖ್ಯ. ಭರವಸೆ ಇಲ್ಲದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಾಬು ಜಗ ಜೀವನರಾಂ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸುಂದರ್‍ರಾಜ್ ಸ್ನೇಹ ಕಲಾನಿಕೇತನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಎ.ಸುಂದರ್‍ರಾಜ್ ಬರೆದ `ಬಳ್ಳಿಯೊಡಲ ಹೂಗಳು’ ಕವನ ಸಂಕಲನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭರವಸೆ ಇದ್ದರೆ ನೀವು ಏನನ್ನೂ ಸಾಧಿಸಬಹುದು ಎಂಬುದನ್ನು ಈ ಕವನ ಸಂಕಲನ ಸಾಬೀತುಪಡಿಸುತ್ತದೆ. ಅವರು ಕಷ್ಟಪಟ್ಟು ಸಂಗೀತ ಕಲಿತು ಸಾಧಿಸುತ್ತಿದ್ದಾರೆ. ಸಂಗೀತದ ಮೇಲಿನ ಪ್ರೀತಿಗಾಗಿ ಅವರು ಸರ್ಕಾರಿ ಕೆಲಸವನ್ನು ತ್ಯಜಿಸಿದರು. ಜೀವನವನ್ನು ಪ್ರೀತಿಸಿದರೆ ನಾವು ಉತ್ತಮವಾಗಿ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಅವರು ಸ್ಪಷ್ಟ ನಿದರ್ಶನವಾಗಿ ದ್ದಾರೆ ಎಂದರು. ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನರಾಮ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಕೆ.ಸದಾಶಿವ, ಪ್ರಾಧ್ಯಾಪಕ ಸಿ.ರಾಮಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಹಿರಿಯ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ ಇನ್ನಿತರರು ಉಪಸ್ಥಿತರಿದ್ದರು.

 

Translate »