ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

March 5, 2021

ಮೈಸೂರು, ಮಾ.4-ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರ ಮತ್ತು 66/11 ಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರಗಳÀಲ್ಲಿ ಮಾ. 5ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದೆ. ಈ ಹಿನ್ನೆಲೆಯಲ್ಲಿ 66/11 ಕೆ.ವಿ ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ಪ್ರದೇಶ ಗಳಾದ ಶ್ರೀರಾಂಪುರ 2ನೇ ಹಂತ, ರಮಾಬಾಯಿನಗರ, ಮಹದೇವ ಪುರ, ಜಯನಗರ, ಪರಸಯ್ಯನ ಹುಂಡಿ, ಶಿವಪುರ, ಕುವೆಂಪು ನಗರ ಕೆ ಬ್ಲಾಕ್, ಅಪೆÇೀಲೊ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ ಗಳು. ಗೊರೂರು ಗ್ರಾಮ, ಕಳಲವಾಡಿ, ಕೋಟೆಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯ ರಸ್ತೆಯಿಂದ 6ನೇ ಮುಖ್ಯರಸ್ತೆ, ಭಾಗಶಃ ಕೆ.ಜಿ.ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಹಾಗೂ 66/11 ಕೆ.ವಿ ಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಆರ್.ಕೆ.ನಗರ ಇ ಮತ್ತು ಎಫ್ ಬ್ಲಾಕ್, ಹೆಚ್ ಬ್ಲಾಕ್, ವಿವೇಕಾನಂದ ಸರ್ಕಲ್, ನಿಮಿಷಾಂಬ ಲೇಔಟ್, ಮಧುವನ ಲೇಔಟ್, ಬೆಮೆಲ್ ಲೇಔಟ್, ಶ್ರೀರಾಂಪುರ, ದೇವಯ್ಯನಹುಂಡಿ, ಪ್ರೀತಿ ಲೇಔಟ್, ಸರಸ್ವತಿಪುರಂ, ಗಂಗೋತ್ರಿ, ಕುವೆಂಪುನಗರ, ಜನತಾನಗರ, ಶಾರದಾದೇವಿ ನಗರ. ಅರವಿಂದನಗರ, ಚಿಕ್ಕಹರದನಹಳ್ಳಿ, ಕುವೆಂಪುನಗರ ಕಾಂಪ್ಲೆಕ್ಸ್, ಅಕ್ಷಯಭಂಡಾರ್, ಕೆ.ಜಿ.ಕೊಪ್ಪಲ್, ಡಿ.ವಿ.ಜಿ ಲೇಔಟ್, ಟಿ.ಕೆ. ಲೇಔಟ್, ಗಂಗೋತ್ರಿ ಲೇಔಟ್, ಕೃಷ್ಣಮೂರ್ತಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

Translate »