ಮೈಸೂರಲ್ಲಿ ಮತ್ತೆ 10 ಮಂದಿ ಕೊರೊನಾದಿಂದ ಸಾವು
ಮೈಸೂರು

ಮೈಸೂರಲ್ಲಿ ಮತ್ತೆ 10 ಮಂದಿ ಕೊರೊನಾದಿಂದ ಸಾವು

August 3, 2020

ಮೈಸೂರು, ಆ.2(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ 238 ಹೊಸ ಪ್ರಕರಣ ಸೇರಿದಂತೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ತಲುಪಿದೆ. ಇದರೊಂದಿಗೆ ರಾಜ್ಯದಲ್ಲಿ ಭಾನುವಾರ 5,532 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಹೊಸ 238 ಪ್ರಕರಣಗಳಲ್ಲಿ ಸೋಂಕಿ ತರ ಸಂಪರ್ಕಿತರು 96, ಟ್ರಾವಲ್ ಹಿಸ್ಟರಿ ಇರುವವರು 44, ವಿಷಮ ಶೀತ ಜ್ವರ(ಐಎಲ್‍ಐ) ಇರುವವರು 58, ಉಸಿರಾಟ ಸಮಸ್ಯೆ(ಸಾರಿ) ಇರುವವರು 17 ಹಾಗೂ ಯಾವುದೇ ರೋಗ ಲಕ್ಷಣಗಳಿಲ್ಲದವರು 23 ಮಂದಿ ಇದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿ ತರ ಸಂಖ್ಯೆ 4,820ಕ್ಕೆ ಏರಿಕೆಯಾಗಿದೆ. ವಾರದಿಂದ ನಿರಂತರವಾಗಿ ದಿನಕ್ಕೆ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದು, ನಾಳೆ (ಸೋಮವಾರ) ಒಟ್ಟು ಸೋಂಕಿತರ ಸಂಖ್ಯೆ ಐದು ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

10 ಸೋಂಕಿತರ ಸಾವು: ಮತ್ತೆ ಮೈಸೂರು ಜಿಲ್ಲೆಯಲ್ಲಿ ಮಹಿಳೆ ಸೇರಿದಂತೆ 10 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 161ಕ್ಕೆ ಏರಿಕೆಯಾಗಿದೆ. 52, 60 ಹಾಗೂ 69 ವರ್ಷದ ವೃದ್ಧರು ಜು.31ರಂದು, 67 ವರ್ಷದ ಇಬ್ಬರು ಸೇರಿ 51, 58, 70, 80 ವರ್ಷದ ವೃದ್ಧರು ಹಾಗೂ 78 ವರ್ಷದ ವೃದ್ಧೆ ಆ.1ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಉಸಿರಾಟ ಸಮಸ್ಯೆ(ಸಾರಿ)ಗೆ ಒಳಗಾಗಿದ್ದರು ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ತಿಳಿಸಿದೆ. ಇನ್ನು ಮೈಸೂರಿನಲ್ಲಿ 10 ಮಂದಿ ಸೇರಿ ರಾಜ್ಯ ದಲ್ಲಿಂದು 84 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 2,496ಕ್ಕೆ ಏರಿಕೆಯಾಗಿದೆ.

3 ಸಾವಿರ ಗಡಿಗೆ ಸಕ್ರಿಯ ಪ್ರಕರಣ: ಮೈಸೂರಿನಲ್ಲಿ ಭಾನುವಾರ 101 ಮಂದಿ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಈವರೆಗೆ ಒಟ್ಟು 1,692 ಜನ ಗುಣಮುಖರಾಗಿ, ಸೋಂಕು ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3 ಸಾವಿರ ಗಡಿ(2,967) ತಲುಪಿದೆ. ಇವರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 231, ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ಸ್‍ಗಳಲ್ಲಿ 85, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 694, ಖಾಸಗಿ ಆಸ್ಪತ್ರೆಗಳಲ್ಲಿ 226, ಖಾಸಗಿ ಕೋವಿಡ್ ಕೇರ್ ಸೆಂಟರ್‍ನಲ್ಲಿ 74 ಹಾಗೂ ಹೋಂ ಐಸೋಲೇಷನ್‍ನಲ್ಲಿ 1,657 ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಭಾನುವಾರ ದಾಖಲೆಯ 4077 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 57,725 ಸೋಂಕಿತರು ಗುಣಮುಖರಾಗಿದ್ದು, 74,590 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ವಿವರ: ಮೈಸೂರಲ್ಲಿ 238 ಸೇರಿದಂತೆ ಭಾನುವಾರ ಹಾಸನ 142, ಮಂಡ್ಯ 97, ಚಾಮರಾಜನಗರ 31, ಕೊಡಗು 16, ಬೆಂಗಳೂರು 2,105, ಬಳ್ಳಾರಿ 377, ಕಲಬುರಗಿ 238, ರಾಯಚೂರು 212, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದಕ್ಷಿಣಕನ್ನಡ 163, ಹಾವೇರಿ 146, ಬೀದರ್ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂಗಳೂರು ಗ್ರಾಮಾಂತರ 38, ತುಮಕೂರು 35 ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದೆ

ಮೈಸೂರಲ್ಲಿ ಮತ್ತೋರ್ವ ಕೊರೊನಾ ವಾರಿಯರ್ ಸಾವು
ನಿವೃತ್ತಿಗೆ 5 ದಿನ ಇರುವಾಗ ಸೋಂಕು ದೃಢÀ; ನಿವೃತ್ತಿಯಾದ ಎರಡೇ ದಿನದಲ್ಲಿ ಸಾವು
ಮೈಸೂರು,ಆ.2(ಎಂಟಿವೈ)-ಕೊರೊನಾ ಹೋರಾಟದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದ ಆಯುರ್ವೇದ ವೈದ್ಯರೊಬ್ಬರು ಸರ್ಕಾರಿ ಸೇವೆ ಯಿಂದ ನಿವೃತ್ತಿಯಾಗಿ 2 ದಿನ ಕಳೆಯುವುದರಲ್ಲಿ ಸಾವನ್ನಪ್ಪಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಯಾಗಿ ಸೇವೆ ಸಲ್ಲಿಸಿ, ಜು.31ರಂದು ನಿವೃತ್ತಿಯಾದ ಮೈಸೂರಿನ ಉದಯಗಿರಿ ನಿವಾಸಿ, ಆಯುರ್ವೇದ ತಜ್ಞರಾಗಿದ್ದ 60 ವರ್ಷದ ವೈದ್ಯ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜು.21ರಂದು ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕು ಇರುವುದು ಜು.26ರಂದು ದೃಢಪಟ್ಟಿತ್ತು.

ಬಳಿಕ ಅವರನ್ನು ನಗರದ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೃತ್ತಿಯ ಕೊನೆ ದಿನ(ಜು.31)ವನ್ನೂ ಆಸ್ಪತ್ರೆಯಲ್ಲೇ ಕಳೆದಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮರುದಿನ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ ಚಾಮರಾಜನಗರಕ್ಕೆ ನಿತ್ಯ ಬಸ್‍ನಲ್ಲಿ ಹೋಗಿ ಬರುತ್ತಿದ್ದರು. ಕಳೆದ ನಾಲ್ಕು ತಿಂಗಳಿಂದ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಸೇವೆಯಲ್ಲಿ ತೊಡಗಿದ್ದರು. ಅಲ್ಲದೆ ಆಯುರ್ವೇದ ಔಷಧ ಸೇವೆನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಅವಿಭಕ್ತ ಕುಟುಂಬಕ್ಕೆ ಕೊರೊನಾ ಕಂಟಕ
ಮೈಸೂರು, ಆ.2- ಮೈಸೂರಿನ ಚಾಮರಾಜ ಪುರಂನಲ್ಲಿರುವ ಅವಿಭಕ್ತ ಕುಟುಂಬಕ್ಕೆ ಕೊರೊನಾ ಆಘಾತ ನೀಡಿದೆ. 14 ಸದಸ್ಯರಿರುವ ಈ ಕುಟುಂಬ ದಲ್ಲಿ 12 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮನೆಯ ಯಜಮಾನ ಇಂದು ಮೃತಪಟ್ಟಿದ್ದು, 11 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಸೋಂಕು ದೃಢಪಡದ ಉಳಿದಿಬ್ಬರು ಹೋಮ್ ಕ್ವಾರಂಟೇನ್‍ನಲ್ಲಿದ್ದಾರೆ. ಹೀಗೆಯೇ ಎನ್.ಆರ್.ಮೊಹಲ್ಲಾದಲ್ಲಿ ಒಂದೇ ಮನೆಯ 10 ಸದಸ್ಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕಾಣೆಯಾಗಿದ್ದ ಸೋಂಕಿತ ವೃದ್ಧ ಪತ್ತೆ
ಮೈಸೂರು, ಆ.2- ಮೈಸೂರು ನಗ ರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಯಿಂದ ನಾಪತ್ತೆಯಾ ಗಿದ್ದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ.

ನಗರದ ಲಷ್ಕರ್ ಮೊಹಲ್ಲಾ ಗರಡಿ ಕೇರಿ ನಿವಾಸಿ 76 ವರ್ಷದ ವೃದ್ಧ ಜು. 23ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿ ದ್ದರು. ಈ ಸಂಬಂಧ ಆಸ್ಪತ್ರೆಯ ಅಧೀ ಕ್ಷಕರು ಮೇಟಗಳ್ಳಿ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಪತ್ತೆ ಯಾಗಿದ್ದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಅವರಿಗೆ ಮರೆವಿನ ಸಮಸ್ಯೆ ಇರುವು ದಾಗಿ ತಿಳಿದಿತ್ತು. ಇದೀಗ ಅವರು ಬನ್ನೂ ರಿನಲ್ಲಿ ಪತ್ತೆಯಾಗಿದ್ದು, ಅವರನ್ನು ಮತ್ತೆ ಕೋವಿಡ್ ಆಸ್ಪತ್ರೆಗೆ ಕರೆತಂದು, ನಿಗಾ ವಹಿಸಲಾಗಿದೆ. ಸದ್ಯ ಸೋಂಕಿತ ವೃದ್ಧ ಪತ್ತೆಯಾಗಿದ್ದರಿಂದ ಅವರ ಕುಟುಂಬ ದವರು ನಿರಾಳರಾಗಿದ್ದಾರೆ. ಅಲ್ಲದೆ ಸೋಂಕು ಹರಡುವುದೂ ತಪ್ಪಿದಂತಾಗಿದೆ.

Translate »