ತುಳಸೀದಾಸ್ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ವ್ಯವಸ್ಥೆ
ಮೈಸೂರು

ತುಳಸೀದಾಸ್ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ವ್ಯವಸ್ಥೆ

April 27, 2021

ಮೈಸೂರು,ಏ.26(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಗಳು ಹೆಚ್ಚಾಗುತ್ತಿರುವುದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು 100 ಆಕ್ಸಿಜನ್ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿದೆ.

ಮೈಸೂರಿನ ನಂಜುಮಳಿಗೆ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆಯಲ್ಲಿರುವ ತುಳಸೀದಾಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, 100 ಆಕ್ಸಿ ಜನ್ ಬೆಡ್‍ಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.

ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್ ಇತರ ರೊಂದಿಗೆ ಸೋಮವಾರ ಬೆಳಗ್ಗೆ ತುಳಸೀ ದಾಸ್ ಆಸ್ಪತ್ರೆಗೆ ತೆರಳಿ ಸಿದ್ಧತೆ ಪರಿಶೀಲಿ ಸಿದ ರಾಜೀವ್, ಮೈಸೂರಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹರಡು ತ್ತಿರುವುದರಿಂದ ಸೋಂಕಿತರು ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಬೆಡ್‍ಗಳು ಸಿಗದೇ ಪರ ದಾಡುತ್ತಿರುವುದರಿಂದ ತುಳಸೀದಾಸ್ ಆಸ್ಪತ್ರೆ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಅಲ್ಲಿ ಆಕ್ಸಿ ಜನ್ ಸೌಲಭ್ಯವುಳ್ಳ 100 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾವೇರಿ ಆಸ್ಪತ್ರೆಯವರು ವೈದ್ಯರು, ನರ್ಸ್ ಹಾಗೂ ಹೌಸ್ ಕೀಪಿಂಗ್ ಸೌಲಭ್ಯ ಒದಗಿಸುತ್ತಾರೆ. ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡ ಲಾಗುತ್ತದೆ. ಉಳಿದಂತೆ ಹಾಸಿಗೆ, ಮಂಚ, ಆಕ್ಸಿಜನ್ ಸಿಲಿಂಡರ್, ಎಲೆಕ್ಟ್ರಿಕ್ ಸೌಲಭ್ಯ ಮತ್ತಿತರ ವ್ಯವಸ್ಥೆಗಳನ್ನು ಮುಡಾ ಭರಿಸ ಲಿದೆ ಎಂದು ರಾಜೀವ್ ನುಡಿದರು.

ಇಂದು ಇಡೀ ಕಟ್ಟಡವನ್ನು ಸ್ವಚ್ಛಗೊಳಿಸಿ ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಂ ಅಳವಡಿಸ ಲಾಗುತ್ತಿದ್ದು, ಇನ್ನೊಂದು ವಾರದೊಳ ಗಾಗಿ ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಆರಂಭಿಸ ಲಾಗುವುದು.ಜಿಲ್ಲಾಡಳಿತದ ಪೋರ್ಟಲ್ ನಲ್ಲಿ ನೋಂದಣಿಯಾದ ರೋಗಿಗಳಿಗೆ ತುಳಸೀದಾಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಒದಗಿಸಲಾಗುವುದು ಎಂದರು.

ಕೇವಲ ಆಕ್ಸಿಜನ್ ಅಗತ್ಯವಿರುವ ಕೊರೊನಾ ಸೋಂಕಿತರಿಗೆ ಮಾತ್ರ ಇಲ್ಲಿ ಚಿಕಿತ್ಸೆಗೆ ಅವ ಕಾಶವಿದ್ದು, ರೋಗಲಕ್ಷಣಗಳಿಲ್ಲದ ಸೋಂಕಿ ತರು ಸಾಧ್ಯವಾದಷ್ಟು ಮನೆಗಳಲ್ಲೇ ಪ್ರತ್ಯೇಕ ವಾಗಿದ್ದು, ವೈದ್ಯರ ಸಲಹೆಯಂತೆ ಇರು ವುದು ಒಳಿತು ಎಂದು ರಾಜೀವ್ ತಿಳಿಸಿದರು.
ಈಗ ಸದ್ಯಕ್ಕೆ 100 ಹಾಸಿಗೆಗಳ ಸೌಲಭ್ಯ ಒದಗಿಸಿ ಒಂದು ವೇಳೆ ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾದಲ್ಲಿ ಹಾಸಿಗೆಗಳ ಸಂಖ್ಯೆ ಇನ್ನು ಹೆಚ್ಚಿಸಲು ಜಿಲ್ಲಾಡಳಿತದಿಂದ ನೆರವು ಪಡೆದು ಚಿಕಿತ್ಸೆಗೆ ಅವಕಾಶ ನೀಡಲಾಗು ವುದು ಎಂದರು. ಲಕ್ಷ್ಮಿಪುರಂ ಠಾಣೆ ಪೊಲೀ ಸರು ದಿನದ 24 ಗಂಟೆಯೂ ಭದ್ರತೆ ಒದಗಿಸುತ್ತಾರೆ. ಪೌರಕಾಮಿಕರು ನಿತ್ಯ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಪಾಲಿಕೆ ಆರೋಗ್ಯ ಶಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆ ಕಟ್ಟಡದ ಸ್ಯಾನಿಟೈಸ್ ಮಾಡಲು ಸಮ್ಮತಿಸಿದ್ದಾರೆ ಎಂದರು.

Translate »