ಅಂತರಂಗದ ಅನುಸಂಧಾನದ ಮೂಲಕ ಶರಣರು ಆಧ್ಯಾತ್ಮಿಕ ಕ್ಷೇತ್ರದ ಮಹತ್ವ ಹೆಚ್ಚಿಸಿದರು
ಮೈಸೂರು

ಅಂತರಂಗದ ಅನುಸಂಧಾನದ ಮೂಲಕ ಶರಣರು ಆಧ್ಯಾತ್ಮಿಕ ಕ್ಷೇತ್ರದ ಮಹತ್ವ ಹೆಚ್ಚಿಸಿದರು

April 27, 2021

ಮೈಸೂರು,ಏ.26-ಅಂತರಂಗದ ಅನುಸಂಧಾನದ ಮೂಲಕ ಶರಣರು ಆಧ್ಯಾತ್ಮಿಕ ಕ್ಷೇತ್ರದ ಮಹತ್ವವನ್ನು ಹೆಚ್ಚಿಸಿದರು ಎಂದು ಆದಿಚುಂಚನಗಿರಿ ವಿಶ್ವವಿದ್ಯಾ ನಿಲಯದ ಡೀನ್ ಡಾ.ಬಿ.ರಮೇಶ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಇಪ್ಪತ್ತೊಂಭತ್ತನೆಯ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿ.ಶ ಆರನೇ ಶತಮಾನದಲ್ಲಿ ಮಹಾ ವೀರ ಪಂಚಾಣುವ್ರತಗಳಾದ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮ ಚರ್ಯ ಮತ್ತು ಅಪರಿಗ್ರಹಗಳ ಬಗ್ಗೆ ತಿಳಿಸಿದರೆ ಬಸವಣ್ಣನವರು 12ನೇ ಶತಮಾನದಲ್ಲಿ ಕಳಬೇಡ, ಕೊಲಬೇಡ ಎಂಬ ವಚನದ ಮೂಲಕ ಸಪ್ತಸೂತ್ರಗಳನ್ನು ನೀಡಿದರು.

ಈ ವಚನ ಎಲ್ಲಾ ಧರ್ಮಗಳ ಸಾರವಾಗಿದೆ. ವೈರಾಗ್ಯ ಮತ್ತು ತ್ಯಾಗ ಎಂದರೆ ಅಂತರಂಗದ ಅನುಸಂಧಾನ, ತನ್ನನ್ನು ತಾನು ಅರಿಯುವುದು. ಪ್ರಸ್ತುತ ನಾವು ವೈರಸ್ ಸುತ್ತಾ ಸುತ್ತುತ್ತಿದ್ದು, ಸಾವುಗಳು ಸಹಜವಾಗಿರುವ ಇತ್ತೀಚಿನ ದಿನಗಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಹಂಚಿಕೊಂಡು ಧೀರಯೋಧರಂತೆ ಬಂದುದ್ದನ್ನು ಸ್ವೀಕರಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದ ಇತಿಹಾಸ ದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದಲ್ಲಿ ಎಲ್ಲಾ ವರ್ಗ ಮತ್ತು ವರ್ಣಗಳ ಸಮುದಾಯದ ಸೃಷ್ಟಿಯಾಗಿ ರುವ ವಚನಗಳು ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ. ವಚನಗಳು ಪ್ರತಿಜ್ಞೆ ಮತ್ತು ಆತ್ಮಸಾಕ್ಷಿಯ ನುಡಿಗಳಾಗಿವೆ ಎಂದರು. ನಂತರ ನಡೆದ ಶರಣರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು, ಕರಸ್ಥಲದ ಮಲ್ಲಿಕಾರ್ಜುನದೇವ, ಕೀಲಾರದ ಭೀಮಣ್ಣ, ಕರುಳ ಕೇತಯ್ಯ, ಕಲಕೇತಯ್ಯ, ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ, ಕೊಂಡೆಮಂಚಣ್ಣ ಗಳ ಪುಣ್ಯಸ್ತ್ರೀ ಲಕ್ಷ್ಮಮ್ಮರವರ ವಚನಗಳನ್ನು ವಿದ್ಯಾ ಸೋಮ ಶೇಖರ್, ಸರಸ್ವತಿ ರಾಮಣ್ಣ, ಇಂದಿರಾ ಬಸವರಾಜು, ಪ್ರಭು ಸ್ವಾಮಿ, ಸಿ.ಕೆವಚನ, ವೈ.ಟಿ.ಮಹೇಶ್ ಗಾಯನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತೆ ಜಯದೇವಿತಾಯಿ, ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಬೆಂಗಳೂರು ಜಿಲ್ಲಾಧ್ಯಕ್ಷ ಕಣ್ಣೂರು ಕುಮಾರಸ್ವಾಮಿ, ಕಾಂiÀರ್i ದರ್ಶಿ ಅನಿತಾ ನಾಗರಾಜ್, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಉಮಾಪತಿ, ಸೋಮಶೇಖರ ಬಸವರಾಜ ಮಗದುಮ್ಮ, ಎಸ್.ಎಸ್.ಪಾಟೀಲ್, ಉಪಸ್ಥಿತರಿದ್ದರು.

Translate »