ನೃತ್ಯ ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ
ಮೈಸೂರು

ನೃತ್ಯ ವಿದ್ಯಾಪೀಠಕ್ಕೆ ಶೇ.100 ಫಲಿತಾಂಶ

September 25, 2018

ಮೈಸೂರು:  ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2018ರ ಮೇ ತಿಂಗಳಿನಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ವಿಜಯ ನಗರ 4ನೇ ಹಂತದಲ್ಲಿರುವ ನೃತ್ಯ ವಿದ್ಯಾಪೀಠಕ್ಕೆ ಶೇ.100ರಷ್ಟು ಫಲಿತಾಂಶ ಬಂದಿದೆ. ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು.ಶ್ರೇಯಾ ಎಸ್.(366/400), ಕು. ರಾಗ ಎಂ.ಆಚಾರ್ (362/400) ಅಂಕಗಳನ್ನು ಪಡೆದು ಮೈಸೂರು ಕೇಂದ್ರಕ್ಕೆ ಕ್ರಮವಾಗಿ 3ನೇ ಹಾಗೂ 6ನೇ ಸ್ಥಾನ ಪಡೆದಿದ್ದಾರೆ. ಜೂನಿಯರ್ ಹಂತ: ಗರಿಷ್ಠ ದರ್ಜೆ: ಐರಾನಿ ಆರ್.ಕೆ. (ಶೇ.80), ಅನನ್ಯ ಸಜ್ಜನರ್ (ಶೇ.87.75), ಭಾರ್ಗವ ಆರ್. (ಶೇ. 87.75), ಲಕ್ಷ್ಮೀರಾಮ್ (ಶೇ.85), ನೇಹ ಡಿ.ಎಸ್.ರೆಡ್ಡಿ (ಶೇ.80.75), ಸಂಜನ ಎಸ್. (ಶೇ. 88.25), ಶೃತಿ ಕ್ಷೀರಸಾಗರ್ (ಶೇ.81). ಪ್ರಥಮ ದರ್ಜೆಯಲ್ಲಿ 15 ವಿದ್ಯಾರ್ಥಿನಿಯರು ತೇರ್ಗಡೆ ಯಾಗಿದ್ದಾರೆ. ಸೀನಿಯರ್ ಹಂತ: ಗರಿಷ್ಠ ದರ್ಜೆ: ಮೇಘ ಎಸ್.ಗೌಡ (ಶೇ.83), ಸಿಮ್ರಾನ್ ಕುಲಕರ್ಣಿ (ಶೇ.81.16), ಅಬೋರಾ ಬಾಗೀಶ್ (ಶೇ.80), ಪ್ರಥಮ ದರ್ಜೆ: 3 ವಿದ್ಯಾರ್ಥಿನಿಯರು. ವಿದ್ವತ್ ಪೂರ್ವ ಹಂತ: ಗರಿಷ್ಠ ದರ್ಜೆ: ಅಮೃತ ಎಂ.ಎಸ್ (ಶೇ.81.4), ಬೃಂದ ಎನ್. (ಶೇ.81.4) ಹಾಗೂ ಪ್ರಥಮ ದರ್ಜೆ : 2 ವಿದ್ಯಾರ್ಥಿ ನಿಯರು. ನಿಶ್ಚಿತಕೃಷ್ಣ, ಕೀರ್ತನ ಎನ್., ದ್ವಿತೀಯ ದರ್ಜೆ: ವಂದಿತಾ ಕೃಷ್ಣ.

Translate »