ಎಸ್ಸೆಸ್ಸೆಲ್ಸಿ, ಐಟಿಐ ಪಾಸಾದವರಿಗೆ ನೈರುತ್ಯ ರೈಲ್ವೆಯಲ್ಲಿ 1004 ನೌಕರಿ
ಮೈಸೂರು

ಎಸ್ಸೆಸ್ಸೆಲ್ಸಿ, ಐಟಿಐ ಪಾಸಾದವರಿಗೆ ನೈರುತ್ಯ ರೈಲ್ವೆಯಲ್ಲಿ 1004 ನೌಕರಿ

December 18, 2020
  • ರೈಲ್ವೆ-ಮೈಸೂರಲ್ಲಿ 177, ಮೈಸೂರು ವರ್ಕ್‍ಷಾಪ್‍ನಲ್ಲಿ 43 ಹುದ್ದೆ
  • ಆನ್‍ಲೈನ್‍ನಲ್ಲಿ ಅರ್ಜಿ ಕಡ್ಡಾಯ- ಅರ್ಜಿ ಸಲ್ಲಿಕೆಗೆ ಜ.9 ಕಡೆ ದಿನ

ಬೆಂಗಳೂರು,ಡಿ.17-ಭಾರತೀಯ ರೈಲ್ವೆಯ ನೈರುತ್ಯ ವಿಭಾಗದಲ್ಲಿ ಖಾಲಿ ಇರುವ 1004 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಸ್ಟ್, ಪ್ಲಂಬರ್, ಪೇಂಟರ್, ಕೊಪರ್ ಹುದ್ದೆಗಳ ನೇಮಕವಾಗಲಿದೆ.

ಮೈಸೂರಲ್ಲಿ 177, ಮೈಸೂರು ವರ್ಕ್‍ಶಾಪ್ 43, ಬೆಂಗಳೂರು 280, ಹುಬ್ಬಳ್ಳಿ 287, ಹುಬ್ಬಳ್ಳಿ ವರ್ಕ್‍ಶಾಪ್‍ನಲ್ಲಿ 217 ಸೇರಿದಂತೆ ಒಟ್ಟು 1004 ಹುದ್ದೆಗಳಿಗೆ ನೇಮಕ ನಡೆಯಲಿದೆ. ಎಸ್‍ಎಸ್‍ಎಲ್‍ಸಿ ಹಾಗೂ ಐಟಿಐ (ಫಿಟ್ಟರ್, ಮೆಕ್ಯಾನಿಕಲ್, ಎಲೆಕ್ಟ್ರಿಷಿ ಯನ್, ಟರ್ನರ್, ಕಾರ್ಪೆಂಟರ್, ಮೆಕ್ಯಾನಿಸ್ಟ್, ವೆಲ್ಡರ್) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಅಂಕಗಳ ಆಧಾರ ಮೆರಿಟ್ ಲಿಸ್ಟ್ ತಯಾರಿಸಿ ನೇರ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಕೇಂದ್ರ ಸರ್ಕಾರದ ನಿಯಮಗಳನ್ವಯ ತರಬೇತಿ ಭತ್ಯೆ ಇರುತ್ತದೆ. ಮಾಸಿಕ 8,000 ರೂ.ನಿಂದ 16,000 ರೂ. ನೀಡಲಾಗುತ್ತದೆ. 2021ರ ಜ.9ಕ್ಕೆ ಕನಿಷ್ಠ 15, ಗರಿಷ್ಠ 24 ವರ್ಷವಾಗಿರಬೇಕು. ವಯೋಮಿತಿಯಲ್ಲಿ ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಅಂಗವಿಕಲ ರಿಗೆ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ರೈಲ್ವೆಯ ಅಧಿಕೃತ ವೆಬ್‍ಸೈಟ್‍ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸುವ ವಿಧಾನ ತಿಳಿಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕøತವಾಗಲಿವೆ. ಅರ್ಜಿ ಸಲ್ಲಿಸಲು 2021ರ ಜನವರಿ 9 ಕಡೆದಿನ.

 

Translate »