ಷಷ್ಠಿ ದಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧ
ಮೈಸೂರು

ಷಷ್ಠಿ ದಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧ

December 18, 2020

ಮೈಸೂರು,ಡಿ.17(ಆರ್‍ಕೆ)- ಕೊರೊನಾ ಹಿನ್ನೆಲೆಯಲ್ಲಿ ಡಿಸೆಂಬರ್ 20ರಂದು ನಡೆಯ ಲಿರುವ ಷಷ್ಠಿಗೆ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಂದು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೈಸೂರು ತಾಲೂಕು ತಹಸೀ ಲ್ದಾರ್ ರಕ್ಷಿತ್ ಅವರು ದೇವಸ್ಥಾನದ ಆವರಣ ದಲ್ಲಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂ ದಿಗೆ ಗುರುವಾರ ಸಭೆ ನಡೆಸಿದರು.

ಶನಿವಾರ ಸಂಜೆಯಿಂದಲೇ ಕಂದಾಯ ಇಲಾಖೆಯ ರೆವಿನ್ಯೂ ಇನ್‍ಸ್ಪೆಕ್ಟರ್, ವಿಲೇಜ್ ಅಕೌಂಟೆಂಟ್, ಪಿಡಿಓಗಳು ದೇವ ಸ್ಥಾನದ ಬಳಿ ಹಾಜರಿದ್ದು, ಸಾರ್ವಜನಿಕರು ದೇವರ ದರ್ಶನಕ್ಕೆ ಪ್ರವೇಶಿಸದಂತೆ ಕ್ರಮ ವಹಿಸಬೇಕು, ಪೊಲೀಸರೂ ಹಾಜರಿದ್ದು, ಸೂಕ್ತ ಬಂದೋಬಸ್ತ್ ಮಾಡಿ ಸಹಕರಿಸ ಬೇಕು ಎಂದು ತಹಸೀಲ್ದಾರ್ ತಿಳಿಸಿದರು.

ದೇವಸ್ಥಾನದ ಸುತ್ತ ಆಜು-ಬಾಜಿನಲ್ಲಿ ಅಂಗಡಿ-ಮುಂಗಟ್ಟುಗಳು ತಲೆ ಎತ್ತದಂತೆ ನೋಡಿಕೊಳ್ಳುವ ಜೊತೆಗೆ ಆ ಮಾರ್ಗ ವಾಹನ ದಟ್ಟಣೆ ಉಂಟಾಗದಂತೆ ಎಚ್ಚರ ವಹಿಸುವಂತೆಯೂ ರಕ್ಷಿತ್ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಮೈಸೂರು ನಗರದಿಂದ ಭಕ್ತಾದಿಗಳು ದೇವರ ದರ್ಶನಕ್ಕೆಂದು ಬಂದರೆ ದೇವಸ್ಥಾನ ಪ್ರವೇ ಶಿಸಲು ಬಿಡಬಾರದು, ಅಧಿಕಾರಿಗಳು ಸ್ಥಳ ದಲ್ಲೇ ಇದ್ದು ಕ್ರಮ ವಹಿಸಬೇಕು ಹಾಗೂ ಯಾರಾದರೂ ಪ್ರಸಾದ ವಿನಿಯೋಗ ಮಾಡಲು ಯತ್ನಿಸಿದರೆ ಅವಕಾಶ ನೀಡಬಾರದೆಂದೂ ತಹಸೀಲ್ದಾರ್ ಸಲಹೆ ನೀಡಿದರು.

ಭಾನುವಾರ(ಡಿ.20) ಮುಂಜಾನೆ 5 ಗಂಟೆಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾ ರ್ಚನೆಯಂತಹ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದಕ್ಕಷ್ಟೇ ಷಷ್ಠಿ ಯನ್ನು ಸೀಮಿತಗೊಳಿಸುತ್ತೇವೆ. ಒಂದು ವೇಳೆ ಎಲ್.ಕಾಡಯ್ಯನವರ ಛತ್ರದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಉತ್ಸವ ಮೂರ್ತಿ ಯನ್ನು ತಂದರೆ ದೇವಸ್ಥಾನದ ಆವರಣ ದಲ್ಲಿ ಪ್ರದಕ್ಷಿಣೆ ಹಾಕಿಸಿ ಪ್ರಾಕಾರೋತ್ಸವ ಮಾಡಿಸುತ್ತೇವೆ ಎಂದು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಈ ವೇಳೆ ತಿಳಿಸಿದರು.

ಸಭೆಯಲ್ಲಿ ಮೇಟಗಳ್ಳಿ ಠಾಣೆ ಇನ್ ಸ್ಪೆಕ್ಟರ್ ಎ.ಮಲ್ಲೇಶ್, ವಿಲೇಜ್ ಅಕೌಂ ಟೆಂಟ್ ಅರ್ಜುನ್ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು. ಯಾವುದೇ ವಿಶೇಷ ಪೂಜಾ ವಿಧಾನಗಳಿಲ್ಲದಿರು ವುದರಿಂದ ದೇವಸ್ಥಾನದ ಗೋಪುರಕ್ಕೆ ಸಾಧಾರಣ ವಿದ್ಯುದಲಂಕಾರ, ತಳಿರು ತೋರಣ ಹಾಕಿಸುವುದಾಗಿಯೂ ಸುಬ್ರ ಹ್ಮಣ್ಯ ತಿಳಿಸಿದರು.

 

Translate »