ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆ; ಜಿಟಿಡಿ ಸೋದರ ಯದುವರ ಅಭ್ಯರ್ಥಿ
ಮೈಸೂರು

ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆ; ಜಿಟಿಡಿ ಸೋದರ ಯದುವರ ಅಭ್ಯರ್ಥಿ

December 18, 2020

ಮೈಸೂರು, ಡಿ.17- ಗ್ರಾಮ ಪಂಚಾಯಿತಿ ಚುನಾ ವಣಾ ಪ್ರಚಾರ ಗರಿಗೆದರಿದ್ದು, ಗ್ರಾಮೀಣ ಭಾಗದಲ್ಲಿ ರಿಯಲ್ ಫೈಟ್‍ಗೆ ವೇದಿಕೆ ಸಿದ್ಧಗೊಂಡಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಗ್ರಾಲ್ ಛತ್ರದ ಗ್ರಾಪಂ ಚುನಾವಣೆ ರಂಗೇರಿದ್ದು, ಹೆಚ್ಚು ಮಂದಿ ಹೊಸಬರೇ ಅಖಾಡದಲ್ಲಿದ್ದಾರೆ. ಶಾಸಕ ಜಿ.ಟಿ.ದೇವೇ ಗೌಡರ ಸಹೋದರ ಜಿ.ಟಿ.ಯದುವರ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕುತೂಹಲ ಹೆಚ್ಚಿಸಿದೆ.

ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆಯಲ್ಲಿ ಜಿ.ಟಿ.ಯದು ವರ ಮತ್ತು ಅವರ ಬೆಂಬಲಿತರೇ ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಯುವ ಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಏನಾದರೂ ಮ್ಯಾಜಿಕ್ ಮಾಡುತ್ತಾರಾ ನೋಡಬೇಕು ಎಂದು ಗ್ರಾಮದ ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಗ್ರಾಪಂ ಚುನಾವಣೆ ಘೋಷಣೆ ನಂತರ ಗ್ರಾಮೀಣ ಭಾಗದಲ್ಲಿ ಕಾವು ಜೋರಾಗಿದೆ. ಅವನು ಚುನಾವಣೆಗೆ ನಿಲ್ತಾನಂತೆ, ಇವನು ನಿಲ್ತಾನಂತೆ. ಇವನು ನಿಂತ್ರೆ ಗ್ಯಾರಂಟಿ ಗೆಲ್ತಾನೆ. ಈತ ಎಷ್ಟು ಹಣವನ್ನಾದರೂ ಖರ್ಚು ಮಾಡಲು ತಯಾರಿದ್ದಾನೆ’ ಎಂಬ ಮಾತು ಕೇಳಿಬರು ತ್ತವೆ ಎಂದು ಹೆಸರೇಳಲಿಚ್ಚಿಸದ ಗ್ರಾಮಸ್ಥರೊಬ್ಬರು `ಮೈಸೂರು ಮಿತ್ರ’ನಿಗೆ ಗುರುವಾರ ತಿಳಿಸಿದರು.

ಕಳೆದ ಮೂರು ಗ್ರಾಪಂ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಗ್ರಾಮದ ಶಿವಣ್ಣ ಎಂಬವರು ಪ್ರತಿಕ್ರಿಯಿಸಿ, ನಾನು 3 ಬಾರಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿಯೂ ಸೋಲು ಅನುಭವಿಸಿದೆ. ಚುನಾವಣೆಗಾಗಿ 15 ಗುಂಟೆ ಜಮೀನು ಮಾರಿದೆ. ಈ ಬಾರಿಯೂ ನಿಲ್ಲಬೇಕೆಂಬ ಆಸೆ ಇತ್ತು. ಗ್ರಾಮದ ಆಪ್ತರೊಬ್ಬರಲ್ಲಿ ಪ್ರಸ್ತಾಪಿಸಿದಾಗ `ಇನ್ನೂ 15 ಗುಂಟೆ ಜಮೀನು ಮಾರಬೇಕೆಂದಿದ್ದೀಯಾ? ಏನೂ ಬ್ಯಾಡ ಹೋಗು. ಜಮೀನಲ್ಲಿ ಕ್ಯಾಮೆಗೀಮೆ ಮಾಡು’ ಅಂತ ಬುದ್ಧಿ ಹೇಳಿದ್ರು. ಹಾಗಾಗಿ ಆಕಡೆ ಮನಸ್ಸು ಬಿಟ್ಟೆ ಎಂದರು.

`ನಾನು ಸ್ಪರ್ಧಿಸಿದಾಗ ಚುನಾವಣಾ ಖರ್ಚಿಗೆಂದು ಗ್ರಾಮಸ್ಥರು, ಸಂಬಂಧಿಕರು, ಸ್ನೇಹಿತರೆಲ್ಲರೂ 1 ಲಕ್ಷ ರೂ. ಒಟ್ಟುಗೂಡಿಸಿ ನೀಡಿದ್ದರು. ಎದುರಾಳಿ ಅಭ್ಯರ್ಥಿಯೊಬ್ಬ `ಹಣ ಕೊಡುತ್ತೇನೆ, ನಾಮಪತ್ರ ವಾಪಸ್ ಪಡೆ’ ಎಂದು ಹೇಳಿದ್ದ. ಅದಕ್ಕೆ `ನಾನೇ ಹಣ ನೀಡುತ್ತೇನೆ ನೀನೇ ನಾಮ ಪತ್ರ ವಾಪಸ್ ಪಡೆ’ ಎಂದು ಹೇಳಿದ್ದೆ ಎಂದು ಗ್ರಾಪಂ ಚುನಾವಣಾ ಸನ್ನಿವೇಶಗಳನ್ನು ನೆನಪಿಸಿಕೊಂಡರು.

ಉಮೇದುವಾರಿಕೆ ವಿವರ: ಗುಂಗ್ರಾಲ್‍ಛತ್ರದ ಗ್ರಾಪಂ ವ್ಯಾಪ್ತಿಗೆ ಸೇರುವ ಹೊಸಕೋಟೆಯ 3 ಸ್ಥಾನಕ್ಕೆ 15 ಮಂದಿ ನಾಮಪತ್ರ ಸಲ್ಲಿಸಿದ್ದು, 5 ನಾಮಪತ್ರಗಳು ಅಸಿಂಧು ವಾಗಿವೆ. ಯಲಚಹಳ್ಳಿಯ 2 ಸ್ಥಾನಕ್ಕೆ 7 ಮಂದಿ ನಾಮ ಪತ್ರ ಸಲ್ಲಿಸಿದ್ದು, 1 ತಿರಸ್ಕøತಗೊಂಡಿದೆ.

ರಟ್ಟನಹಳ್ಳಿ 4 ಸ್ಥಾನಕ್ಕೆ 13 ಮಂದಿ ನಾಮಪತ್ರ ಸಲ್ಲಿಸಿ ದ್ದಾರೆ. ಯಾಚೇಗೌಡನಹಳ್ಳಿ 2 ಸ್ಥಾನಕ್ಕೆ 14 ನಾಮಪತ್ರ ಸಲ್ಲಿಕೆಯಾಗಿದ್ದು, 4 ಅಸಿಂಧುವಾಗಿವೆ. ಎಸ್.ಹೆಮ್ಮನಹಳ್ಳಿ 1 ಸ್ಥಾನಕ್ಕೆ 6 ನಾಮಪತ್ರ ಸಲ್ಲಿಕೆಯಾಗಿದ್ದು, 2 ತಿರಸ್ಕøತ ಗೊಂಡಿವೆ. ಗುಂಗ್ರಾಲ್‍ಛತ್ರ 4 ಸ್ಥಾನಕ್ಕೆ 23 ಮಂದಿ ನಾಮ ಪತ್ರ ಸಲ್ಲಿಸಿದ್ದು, 3 ತಿರಸ್ಕøತಗೊಂಡಿವೆ. ದೊಡ್ಡೇಕೊಪ್ಪಲು 1 ಸ್ಥಾನಕ್ಕೆ 3 ನಾಮಪತ್ರ ಸಲ್ಲಿಕೆಯಾಗಿದ್ದು, 1 ಅಸಿಂಧು ವಾಗಿದೆ. ಅಮಚವಾಡಿ 3 ಸ್ಥಾನಕ್ಕೆ 14 ನಾಮಪತ್ರ ಸಲ್ಲಿಕೆ ಯಾಗಿದ್ದು, 2 ತಿರಸ್ಕøತ ಹಾಗೂ ಅಮಚವಾಡಿ 4 ಸ್ಥಾನಕ್ಕೆ 6 ನಾಮಪತ್ರ ಸಲ್ಲಿಕೆಯಾಗಿವೆ. ದಡದಕಲ್ಲಹಳ್ಳಿ 4 ಸ್ಥಾನಕ್ಕೆ 13 ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 114 ನಾಮಪತ್ರ ಗಳು ಸಲ್ಲಿಕೆಯಾಗಿ, 19 ನಾಮಪತ್ರಗಳು ತಿರಸ್ಕøತವಾಗಿವೆ.

ಮತದಾರರ ಸಂಖ್ಯೆ: ಗುಂಗ್ರಾಲ್ ಛತ್ರ-ಪುರುಷರು-558, ಮಹಿಳೆಯರು-578 ಮತದಾರರಿದ್ದಾರೆ. ದೊಡ್ಡೇ ಗೌಡನಕೊಪ್ಪಲು 528, ದಡದಕಲ್ಲಹಳ್ಳಿ 698, ದಡದಕಲ್ಲ ಹಳ್ಳಿ-ಕೃಷ್ಣಾಪುರ 701, ಎಸ್.ಹೆಮ್ಮನಹಳ್ಳಿ 459, ಹೊಸ ಕೋಟೆ 819, ರಟ್ಟನಹಳ್ಳಿ 1264, ಯಾಚೇಗೌಡನಹಳ್ಳಿ 811, ಯಲಚಹಳ್ಳಿ 554, ಅಮಚವಾಡಿ(1) 864, ಅಮಚವಾಡಿ(2) 582 ಮತಗಳಿವೆ. ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 8,416 ಮತದಾರರಿದ್ದಾರೆ.

ವೈ.ಡಿ.ಶೇಖರ್

ಗ್ರಾಪಂ ಚುನಾವಣೆ ಹಿನ್ನೆಲೆ: 89 ತಹಶೀಲ್ದಾರ್‍ಗಳ ವರ್ಗಾವರ್ಗಿ
ಮೈಸೂರು, ಡಿ.17(ಎಸ್‍ಬಿಡಿ)- ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ 89 ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ, ಸರ್ಕಾರ ಆದೇಶಿಸಿದೆ.

ಹಾಸನ ತಾಲೂಕು ತಹಶೀಲ್ದಾರ್ ಆರ್.ವಿ.ಶಿವ ಶಂಕ ರಪ್ಪ ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂ ಕಿಗೆ ಹಾಗೂ ಆ ಸ್ಥಾನದಲ್ಲಿದ್ದ ಜಿ.ಹೆಚ್.ಸತ್ಯನಾರಾಯಣ ಅವರನ್ನು ಹಾಸನ ತಾಲೂಕಿಗೆ ವರ್ಗಾವರ್ಗಿ ಮಾಡ ಲಾಗಿದೆ. ಕೊಡಗು ಜಿಲ್ಲೆ, ಮಡಿಕೇರಿ ತಾಲೂಕಿನ ತಹಶೀ ಲ್ದಾರ್ (ಗ್ರೇಡ್-2) ಪಿ.ಎಸ್.ಮಹೇಶ್ ಅವರನ್ನು ಚಾಮ ರಾಜನಗರ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇವರನ್ನು ಹೊರತುಪಡಿಸಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ತಹಶೀಲ್ದಾರ್‍ಗಳ ವರ್ಗಾ ವಣೆ ನಡೆದಿಲ್ಲ. ವರ್ಗಾವಣೆಯಾಗಿರುವ ಅಧಿಕಾರಿ ಗಳನ್ನು ತಕ್ಷಣವೇ ಆ ಸ್ಥಾನಗಳಿಂದ ಬಿಡುಗಡೆಗೊಳಿಸ ಲಾಗಿದ್ದು ಸೇರಿಕೆ ಕಾಲವನ್ನು ಬಳಸಿಕೊಳ್ಳದೆ ಮರು ದಿನವೇ ನಿಯೋಜಿತ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾಗ ಬೇಕು. ಗ್ರಾಪಂ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಹಿಂದಿನ ಹುದ್ದೆಗೆ ಹಾಜರಾಗತಕ್ಕದ್ದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ) ಎಂ.ಎಸ್.ರಶ್ಮಿ ಅಧಿಸೂಚನೆಯಲ್ಲಿ ಸೂಚಿಸಿದ್ದಾರೆ.

Translate »