ಷಷ್ಠಿ ಹಬ್ಬದಂದು ಹಾವುಗಳ ರಕ್ಷಣೆ
ಮೈಸೂರು

ಷಷ್ಠಿ ಹಬ್ಬದಂದು ಹಾವುಗಳ ರಕ್ಷಣೆ

December 21, 2020

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರಲ್ಲಿ ಷಷ್ಠಿ ಹಬ್ಬದಂದು ಆರೇಳು ಹಾವುಗಳನ್ನು ಸ್ನೇಕ್ ಸೂರ್ಯಕೀರ್ತಿ ಸಂರಕ್ಷಿಸಿದ್ದಾರೆ.

ಬಂಬೂಬಜಾರ್‍ನ ಮನೆಯೊಂದರ ಸಜ್ಜಾ ದಲ್ಲಿದ್ದ ಕಟ್ ಹಾವು, ಶ್ರೀರಾಂಪುರದ ಮನೆ ಯೊಂದರ ಅಡುಗೆ ಮನೆ ಹೊಕ್ಕಿದ್ದ ಕೇರೆ ಹಾವು ಸೇರಿದಂತೆ ಮೈಸೂರಿನ ವಿವಿಧೆಡೆ ಆರೇಳು ಹಾವುಗಳನ್ನು ಸಂರಕ್ಷಿಸಿದ ಸೂರ್ಯ ಕೀರ್ತಿ, ಹಾವುಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಪ್ರಾಣಿ- ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಅವುಗಳಿಗೆ ಹಿರಿಯರು ಪೂಜ್ಯ ಸ್ಥಾನ ನೀಡಿದ್ದಾರೆ. ಅದರಂತೆ ಷಷ್ಠಿ ದಿನದಂದು ಮಾತ್ರವಲ್ಲ ಯಾವಾಗಲೂ ಹಾವುಗಳಿಗೆ ತೊಂದರೆ ಮಾಡಬಾರದು. ರೈತರು ಬೆಳೆಯುವ ಶೇ.40ರಷ್ಟು ಉತ್ಪನ್ನವನ್ನು ಇಲಿ, ಹೆಗ್ಗಣ ಇನ್ನಿತರ ಪ್ರಾಣಿಗಳಿಂದ ನಷ್ಟವಾಗುತ್ತದೆ ಎನ್ನಲಾಗುತ್ತದೆ. ಆದರೆ ಹಾವುಗಳು, ಇಲಿಗಳು, ಹೆಗ್ಗಣಗಳಿಂದ ರೈತರ ಬೆಳೆ ಉಳಿಸುತ್ತವೆ. ಹಾವು ಕಾಣಿಸಿದರೆ ತಕ್ಷಣ ಉರಗ ಸಂರಕ್ಷಕರಿಗೆ ಮಾಹಿತಿ ನೀಡಿ. ಎಲ್ಲರೂ ಒಟ್ಟಾಗಿ ಹಾವುಗಳ ಸಂರಕ್ಷಿಸೋಣ, ಪರಿಸರವನ್ನು ಕಾಪಾಡೋಣ. ಹಾವು ಕಾಣಿಸಿಕೊಂಡರೆ ಮೊ.7022042028ಕ್ಕೆ ಕರೆ ಮಾಡಿದರೆ ಕೂಡಲೇ ಆಗಮಿಸುತ್ತೇವೆಂದು ತಿಳಿಸಿದರು.

Translate »