ಕ್ರಿಸ್‍ಮಸ್ ಹಿನ್ನೆಲೆ ನೃತ್ಯ, ನಾಟಕ ಪ್ರದರ್ಶನ
ಮೈಸೂರು

ಕ್ರಿಸ್‍ಮಸ್ ಹಿನ್ನೆಲೆ ನೃತ್ಯ, ನಾಟಕ ಪ್ರದರ್ಶನ

December 21, 2020

ಮೈಸೂರು, ಡಿ.20(ಎಂಕೆ)- ನಗರದ ಮೇದಾರ್ ಬ್ಲಾಕ್‍ನಲ್ಲಿರುವ ಯುನೈಟೆಡ್ ಚರ್ಚ್ ಆಫ್ ಗಾಡ್ ಸಭಾಂಗಣದಲ್ಲಿ ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಗಾಯನ, ನೃತ್ಯ ಮತ್ತು ನಾಟಕ ಪ್ರದರ್ಶನ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕ್ರೈಸ್ತ ಧರ್ಮಗುರುಗಳಾದ ವೆಲ್‍ಫಾರ್ಡ್, ನ್ಯೂಮನ್ ಸ್ಟೀಫನ್ ಅವರು ಯೇಸುವಿನ ಕುರಿ ತಾದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬಣ್ಣ ಬಣ್ಣದ ಉಡುಗೆ ತೊಟ್ಟ ಪುಟಾಣಿಗಳು ಕುಣಿದು ಕುಪ್ಪಳಿಸಿದರೆ, ಸಾಂತಾಕ್ಲಾಸ್‍ನ ವೇಷತೊಟ್ಟ ಪುಟಾಣಿ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಿಸಿದ. ಯೇಸು ಜೀವನ ಕುರಿತ ನಾಟಕದ ಪ್ರದರ್ಶನ ನೀಡಿದ ಚಿಣ್ಣರು, ಆರೋಗ್ಯ ಮತ್ತು ಜ್ಞಾನ ಹೆಚ್ಚಿಸುವಂತೆ ಯೇಸುವಿನಲ್ಲಿ ಪಾರ್ಥಿಸಿದರು. ಪೋಷ ಕರೂ ಭಾಗವಹಿಸಿ ಸಂಭ್ರಮಿಸಿದರು.

 

Translate »