ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಮೈಸೂರು

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

December 21, 2020

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ರೋಟರಿ ರೋಟರಾಕ್ಟ್, ರೋಟರಿ ಐವರಿ ಸಿಟಿ, ರಕ್ತದಾನ್ ಮಹಾದಾನ್ ಗೋಭಕ್ತ್ ಸಂಘ್ತಾನ್ ಟ್ರಸ್ಟ್ ಹಾಗೂ ತೇರಾಪಂಥ್ ಯುವಕ್ ಪರಿಷದ್ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಜಯದೇವ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ ಉದ್ಘಾಟಿಸಿ, ಬಡರೋಗಿಗಳ ಸೇವೆಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಡಾ.ಸದಾನಂದ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ ಇನ್ನಿತರ ಜಿಲ್ಲೆಗಳಿಂದ ರೋಗಿಗಳು ಜಯದೇವ ಆಸ್ಪತ್ರೆಗೆ ಬರುತ್ತಾರೆ. ರೋಗಿಗಳಿಗೆ ರಕ್ತದ ಅವಶ್ಯಕತೆ ಎದುರಾದಾಗ ಗ್ರಾಮಾಂತರ ಪ್ರದೇಶದ ಜನ ದಿಕ್ಕು ತೋಚದಂತಾಗಿ ಅಲೆದಾಡುವ ಪರಿಸ್ಥಿತಿ ಇದೆ. ಅಂತಹ ಬಡ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಕ್ತದಾನ್ ಮಹಾದಾನ್ ಗೋಭಕ್ತ್ ಸಂಘ್ತಾನ್ ಟ್ರಸ್ಟ್‍ನ ಅಧ್ಯಕ್ಷ ದೇವೇಂದ್ರ ಕುಮಾರ್, ತೇರಾಪಂಥ್ ಯುವಕ್ ಪರಿಷದ್‍ನ ಆನಂದ್, ರೋಟರಿ ಐವರಿ ಸಿಟಿಯ ನಂದೀಶ್, ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧೀಕ್ಷಕ ಹರೀಶ್ ಕುಮಾರ್, ಡಾ. ರಶ್ಮಿ, ಪ್ರಜ್ವಲ್, ವಾಣಿ, ಸೈಯದ್, ಶರತ್ ಪಾಳ್ಯ, ರಮೇಶ್ ಯೋಗಾನಂದ, ಚಿತ್ರ ಕಲಾವಿದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

 

 

 

 

Translate »