ಮೈಸೂರು, ಸೆ. 5(ಆರ್‍ಕೆ)- ಪರಿಸರ ಸ್ನೇಹಿ ಸಂಚಾರವನ್ನು ಪ್ರೋತ್ಸಾಹಿಸಲು ಮೈಸೂರಿನ ಪ್ರಮುಖ ವಿಶಾಲ ರಸ್ತೆಗಳಲ್ಲಿ 11 ಕಿ.ಮೀ ಉದ್ದದ ಸೈಕಲ್ ಪಾತ್ ಮಾಡಲು ಯೋಜಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯು ಪೈಲೆಟ್ ಪ್ರಾಜೆಕ್ಟ್ ಆಗಿ ಈ ಸೈಕಲ್ ಲೇನ್ ಯೋಜನೆ ಅನುಷ್ಠಾನ ಮಾಡಲು ಮುಂದಾ ಗಿದ್ದು, ಮೈಸೂರು ನಗರ ಸಂಚಾರ ವಿಭಾ ಗದ ಪೊಲೀಸರು ಸಲಹೆ, ಮಾಹಿತಿ, ವಿನ್ಯಾಸದೊಂದಿಗೆ ಸಮಗ್ರ ವರದಿಯನ್ನು ಶುಕ್ರವಾರ ಪಾಲಿಕೆಗೆ ಸಲ್ಲಿಸಿದೆ.
ಆರೋಗ್ಯ ವೃದ್ಧಿಗೊಳಿಸುವುದು, ಶಬ್ದ ಮಾಲಿನ್ಯ, ವಾಯುಮಾಲಿನ್ಯ ನಿಯಂ ತ್ರಣ ಮಾಡುವುದು ಹಾಗೂ ಜನರಲ್ಲಿ ದೈಹಿಕ ಶ್ರಮದ ಬಗ್ಗೆ ಅರಿವು ಮೂಡಿ ಸುವ ಸಲುವಾಗಿ ಸೈಕಲ್ ಪಾತ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗಿದೆ.
ರಸ್ತೆಯ ಒಂದು ಬದಿಯಲ್ಲಿ 1.5 ಮೀಟರ್ ಅಗಲದ ವಿಸ್ತಾರಕ್ಕೆ ಸೈಕಲ್ ಲೇನ್ ನಿರ್ಮಿಸಲಿದ್ದು, ಈ ಮಾರ್ಗದ ಎರಡೂ ಕಡೆಯಲ್ಲಿ ಫೈಬರ್ ಕಂಬಗಳು ಹಾಗೂ ರೇಲಿಂಗ್ ಅಳವಡಿಸಲು ಮೈಸೂರು ಮಹಾನಗರ ಪಾಲಿಕೆ ಇಂಜಿನಿಯರಿಂಗ್ ವಿಭಾಗದವರು ಸಿದ್ಧತೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಹಿತಕರ ವಾತಾ ವರಣದಲ್ಲಿ ಟ್ರ್ಯಾಕ್‍ಸೂಟ್ ಧರಿಸಿ ಸೈಕಲ್ ತುಳಿಯುವ ಮೂಲಕ ವ್ಯಾಯಾಮ ಮಾಡು ವವರಿಗೆ ಈ ಪಾತ್ ಅನುಕೂಲವಾಗುವು ದಲ್ಲದೆ, ಸೈಕಲ್ ಸವಾರರಿಗೂ ಯಾವುದೇ ಅಡಚಣೆ ಇಲ್ಲದೆ ಸಾಗಲು ಸಹಕಾರಿ ಯಾಗಲಿದೆ. ವಿದೇಶದಲ್ಲಿ ಸೈಕಲ್ ಲೇನ್ ಗಳು ವಾಹನಗಳು ಸಾಗುವ ರಸ್ತೆಯಂ ತೆಯೇ ಪ್ರಧಾನವಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಲ್ಲೂ ಸೈಕಲ್ ಸವಾರಿಯನ್ನು ಉತ್ತೇಜಿಸಲಾಗುತ್ತಿದೆ. ಈ ಪಾತ್‍ನಲ್ಲಿ ಸೈಕಲ್ ಸವಾರರನ್ನು ಹೊರತುಪಡಿಸಿ ಇನ್ನಾ ವುದೇ ಮೋಟಾರ್ ವಾಹನಗಳಿಗೆ ಅವ ಕಾಶವಿರುವುದಿಲ್ಲ. ಇದೀಗ ಸಮಗ್ರ ವರದಿ ತಯಾರಿಸುತ್ತಿರುವ ಪಾಲಿಕೆ ಇಂಜಿನಿ ಯರ್‍ಗಳು, ಮುಂದಿನ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆಗೆ ಅಂಗೀಕಾರ ಪಡೆದು ಯೋಜನೆ ಅನುಷ್ಠಾನಗೊಳಿಸಲು ಸಕಲ ರೀತಿಯ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಲಲಿತ ಮಹಲ್ ರಸ್ತೆಯ ಆಡಳಿತ ತರ ಬೇತಿ ಸಂಸ್ಥೆ ಬಳಿ ಸೈಕಲ್ ಲೇನ್ ಬಳಕೆ ಯಾಗುತ್ತಿದ್ದು, ಮೌಂಟೆಡ್ ಪೊಲೀಸ್ ಘಟಕವು ಕುದುರೆಗಳನ್ನು ವಾಕ್ ಮಾಡಿ ಸಲು ಉಪಯೋಗಿಸಿಕೊಳ್ಳುತ್ತಿದೆ.
ಮೈಸೂರು ಮಹಾನಗರ ಪಾಲಿಕೆಯು ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಂ (PBSS) ಅನ್ನು ಪ್ರೋತ್ಸಾಹಿಸಲು ಮೂರು ವರ್ಷಗಳ ಹಿಂದೆ ಟ್ರಿಣ್ ಟ್ರಿಣ್ ಬೈಸಿಕಲ್ ಡಾಕ್‍ಗಳನ್ನು ಮೈಸೂರಿನಲ್ಲಿ ಪರಿಚಯಿಸಿದೆ. ಡೈರೆಕ್ಟ್ ರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‍ಪೋರ್ಟ್ (DULT) ಸಹಯೋಗದೊಂದಿಗೆ ಜಾರಿಗೆ ತಂದಿರುವ ಈ ಯೋಜನೆಗೆ 2017ರ ಜೂನ್ 4ರಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದರು.
52 ಡಾಕಿಂಗ್ ಸ್ಟೇಷನ್‍ಗಳಲ್ಲಿ 30 ಗೇರ್ ಸೈಕಲ್ ಸೇರಿದಂತೆ ಒಟ್ಟು 450 ಬೈಸಿ ಕಲ್‍ಗಳನ್ನು ಪೂರೈಸಿದ್ದು, ಮೈಸೂರು ನಗರ ದಾದ್ಯಂತ 14,000ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿ ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಉಪಯೋಗಿಸುತ್ತಿದ್ದಾರೆ. ಒಂದು ವೇಳೆ ಸೈಕಲ್ ಲೇನ್ ವ್ಯವಸ್ಥೆ ಅನುಷ್ಠಾನಗೊಂಡಲ್ಲಿ ಇನ್ನಷ್ಟು ಮಂದಿ ದ್ವಿಚಕ್ರ ವಾಹನಗಳ ಬದಲು ಸೈಕಲ್ ಬಳಸಲು ಮುಂದೆ ಬರುವ ನಿರೀಕ್ಷೆ ಇದೆ.