ಕೊರೊನಾ ಸಂದರ್ಭ ದುರ್ಬಳಕೆ: ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುವಂಥ ಕಾಯ್ದೆಗಳ ಜಾರಿ
ಮೈಸೂರು

ಕೊರೊನಾ ಸಂದರ್ಭ ದುರ್ಬಳಕೆ: ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುವಂಥ ಕಾಯ್ದೆಗಳ ಜಾರಿ

September 6, 2020

ಮೈಸೂರು, ಸೆ.5(ಆರ್‍ಕೆಬಿ)- ಇಂದು ಕೊರೊನಾದಂತಹ ಭೀಕರ ವಾತಾವರಣ ದಲ್ಲಿ ಜನರು ದನಿ ಎತ್ತಲಾಗದಂತಾಗಿದ್ದು, ಇಂಥ ಕಷ್ಟಕರ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು ದೇಶವನ್ನು ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯು ವಂತಹ ಕಾಯ್ದೆಗಳನ್ನು ಜಾರಿಗೆ ತರಲಾಗು ತ್ತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ಜಂಟಿ ಯಾಗಿ ಮೈಸೂರಿನ ಸಿದ್ದಾರ್ಥನಗರದಲ್ಲಿ ರುವ ಕನಕ ಸಮುದಾಯ ಭವನದಲ್ಲಿ ಆಯೋ ಜಿಸಿದ್ದ `ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣ ನೀತಿಗಳು, ಪರಿಣಾಮ ಮತ್ತು ಸವಾಲುಗಳು’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾ ರದ ಪ್ರಗತಿಪರವಾದ 2013ರ ಭೂಸ್ವಾಧೀನ ಕಾಯ್ದೆಗೆ ಬಿಜೆಪಿ ನೇತೃತ್ವದ ಎನ್‍ಡಿಎ 2015 ರಲ್ಲಿ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವ ಣಿಸಿತ್ತು. 1894ರ ಬ್ರಿಟಿಷ್ ಆಳ್ವಿಕೆ ಕಾಯ್ದೆ ಯಲ್ಲಿ ಭೂಮಿಯ ಮಾಲೀಕರು ಆಕ್ಷೇಪ ಎತ್ತುವ ಅವಕಾಶ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜನರ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊಂಡಿದೆ. ಸುಗ್ರೀವಾಜ್ಞೆ ವಿರುದ್ಧ ಆಕ್ರೋಶ ಭುಗಿಲೆ ದ್ದರೂ ಅದಕ್ಕೆ ಈ ಸರ್ಕಾರ ಸೊಪ್ಪು ಹಾಕ ಲಿಲ್ಲ. ಇದು ಮುಂದಿನ ದಿನಗಳಲ್ಲಿ ರೈತ ಸಂಕುಲಕ್ಕಿರುವ ಅಪಾಯದ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು.

ದೇವರಾಜ ಅರಸು ಅವರ 1974ರ ಕಾಯ್ದೆ ಯನ್ನು ಕತ್ತರಿಸಿ ತೆಗೆದು ಹಾಕಲಾಗಿದೆ. ಅಪಾಯಕಾರಿಯಾದ ಇಂಥ ತಿದ್ದುಪಡಿ ಕಾಯ್ದೆಗಳ ವಿರುದ್ಧ ಜನ ಜಾಗೃತರಾಗ ಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಒತ್ತಿ ಹೇಳಿದರು.

ಸಂಘಟಿತ ಹೋರಾಟ: ಇವೆಲ್ಲದರ ವಿರುದ್ಧ ಜನ ಬೀದಿಗಿಳಿದು ತೀವ್ರ ತರಹದ ಹೋರಾಟ ನಡೆಸುವುದು ಅಗತ್ಯ. ಆದರೆ ಬಿಡಿ ಬಿಡಿ ಹೋರಾಟದ ಮೂಲಕ ಏನನ್ನೂ ಸಾಧಿಸಲಾಗದು. ಎಲ್ಲಾ ಸಮಾನ ಮನಸ್ಕರು, ಸಂಘಟನೆಗಳು, ಸಂಸ್ಥೆಗಳು ಒಗ್ಗಟ್ಟಿನಿಂದ ಒಟ್ಟಾಗಿ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ನಂತರ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬಡ ಗಲಪುರ ನಾಗೇಂದ್ರ, ಇಂದು ರೈತರು, ಕಾರ್ಮಿಕರು ದನಿ ಎತ್ತದಂತೆ ಮಾಡಲಾಗು ತ್ತಿದೆ. ವ್ಯಾಪಾರೀಕರಣದ ರಾಜಕಾರಣ, ಖಾಸಗೀಕರಣವನ್ನೇ ಹೆಚ್ಚು ಆಸಕ್ತಿಯಿಂದ ಮಾಡಲಾಗುತ್ತಿದೆ. ಸರ್ಕಾರಿ ಸ್ವತ್ತುಗಳು, ಸಾರ್ವ ಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸ ಲಾಗುತ್ತಿದೆ ಎಂದು ತೀವ್ರ ಆತಂಕ ವ್ಯಕ್ತಪಡಿ ಸಿದರು. ಇದು ಮುಂದುವರಿದರೆ ಅನ್ನ ನೀಡುವ ಕೈ ಭಿಕ್ಷೆ ಎತ್ತಬೇಕಾದ ಸ್ಥಿತಿ ಬಂದು, ಇಡೀ ಸಮಾಜ ದಾಸ್ಯದತ್ತ ಹೋಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ರೈತರ ಭೂಮಿ ಕಸಿಯುತ್ತಿದೆ. ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾ ಗಿದೆ. ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ ನಾಶದ ಉದ್ದೇಶವನ್ನು ಬಿಜೆಪಿ ಹೊಂದಿದೆ. ದೇಶದಲ್ಲಿ ಮಾರ್ವಾಡಿ, ಬಂಡವಾಳಶಾಹಿ ರಾಜಕಾರಣ ಸ್ಥಾಪಿಸುವ ಹುನ್ನಾರ ನಡೆದಿದೆ. ಇದರ ವಿರುದ್ಧ ಭಾರೀ ಹೋರಾಟ ಅಗತ್ಯ. ಸುಗ್ರೀವಾಜ್ಞೆ ವಾಪಸ್ ಪಡೆಯುವವರೆಗೂ ನಿಲ್ಲದ ಹೋರಾಟ ಇದಾಗಬೇಕು. ಆಗಲೇ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯ ಎಂದರು. ರಾಜ್ಯ ರೈತ ಸಂಘದÀ ಗೌರವಾಧ್ಯP್ಷÀ ಚಾಮರಸ ಮಾಲೀ ಪಾಟೀಲ್, ಉಪಾಧ್ಯP್ಷÀ ರಾದ ರಾಮು ಚನ್ನಪಟ್ಟಣ, ರಾಮಸ್ವಾಮಿ, ರಾಮಕೃಷ್ಣಯ್ಯ, ಕಾರ್ಯಾಧ್ಯP್ಷÀ ಜೆ.ಎಂ. ವೀರಸಂಗಯ್ಯ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಮುಖಂಡರಾದ ಎನ್. ಮುನಿಸ್ವಾಮಿ, ಆರ್.ಎಸ್.ದೊಡ್ಡಣ್ಣ, ವಿ.ನಾಗ ರಾಜ್, ಅಭಿರುಚಿ ಗಣೇಶ್, ಪುನೀತ್, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

 

Translate »