ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಮೈಸೂರಿನ 4 ಸೇರಿ ರಾಜ್ಯದಲ್ಲಿ 110 ಮೆಡಿಕಲ್ಸ್ ಶಾಪ್ ಅಮಾನತು
ಮೈಸೂರು

ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಮೈಸೂರಿನ 4 ಸೇರಿ ರಾಜ್ಯದಲ್ಲಿ 110 ಮೆಡಿಕಲ್ಸ್ ಶಾಪ್ ಅಮಾನತು

July 7, 2020

ಮೈಸೂರು, ಜು.6(ಎಸ್‍ಬಿಡಿ)- ಕೋವಿಡ್ ಸಂಬಂಧ ಆರೋಗ್ಯ ಇಲಾಖೆಯ ಸೂಚನೆ ಪಾಲಿಸದ ಮೈಸೂರಿನ 4 ಮೆಡಿ ಕಲ್ಸ್ ಸೇರಿದಂತೆ ರಾಜ್ಯದಲ್ಲಿ 110 ಔಷಧಿ ಅಂಗಡಿಗಳ ಪರವಾನಗಿಯನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲಾಗಿದೆ.

ಕೊರೊನಾ ಪ್ರಾಥಮಿಕ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರ ಸಮಸ್ಯೆ ಗಳಿಗೆ ಔಷಧಿ ಖರೀದಿಸುವವರ ವಿವರ ವನ್ನು `ಫಾರ್ಮ ಪೋರ್ಟ್’ ವೆಬ್‍ಸೈಟ್ ನಲ್ಲಿ ದಾಖಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಇದರಿಂದ ಐಎಲ್‍ಐ ಹಾಗೂ ಸರಿ ಪ್ರಕರಣಗಳ ಪತ್ತೆಗೆ ಸಹಾಯವಾಗು ತ್ತದೆ ಎಂದು ಎಲ್ಲಾ ಔಷಧ ಮಾರಾಟ ಗಾರರೂ ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು, ರಾಜ್ಯದ ಎಲ್ಲಾ ಔಷಧಿ ಅಂಗಡಿಗಳಿಗೂ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೀಡಿ, ಮಾರ್ಗದರ್ಶನ ನೀಡಿ ದ್ದರು. ಆದರೆ ಔಷಧ ನಿಯಂತ್ರಣ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ನಿಯಮ ಪಾಲಿಸದ ಔಷಧಿ ಅಂಗಡಿ ಗಳನ್ನು ಪತ್ತೆ ಹಚ್ಚಿದ್ದಾರೆ. ಜ್ವರ, ನೆಗಡಿ, ಕೆಮ್ಮು ಇನ್ನಿತರ ಸಮಸ್ಯೆಗಳಿಗೆ ಔಷಧಿ ಕೊಂಡುಕೊಂಡವರ ಹೆಸರು ಹಾಗೂ ಮೊಬೈಲ್ ನಂಬರ್ ಅನ್ನು ವೆಬ್ ಅಪ್ಲಿಕೇಷನ್ ನಲ್ಲಿ ದಾಖಲಿಸಿ ಮೈಸೂರಿನ 4, ಕಲಬುರಗಿ ಜಿಲ್ಲೆಯ 70, ಬೀದರ್‍ನ 4, ಬಿಜಾಪುರದ 15, ರಾಯಚೂರಿನ 9, ಬಾಗಲಕೋಟೆ 5 ಸೇರಿ ದಂತೆ ಒಟ್ಟು 110 ಮೆಡಿಕಲ್ಸ್‍ಗಳ ಪರವಾನಗಿ ಯನ್ನು ನಿರ್ದಿಷ್ಟ ಅವಧಿವರೆಗೆ ಅಮಾನತುಗೊಳಿಸ ಲಾಗಿದೆ ಎಂದು ಅಪರ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »