ಹಿರಿಯ ಸಾಹಿತಿ ಸಿಪಿಕೆ ನಿವಾಸದಲ್ಲಿ ಪ್ರೊ.ದೇಜಗೌ ಜನ್ಮ ದಿನಾಚರಣೆ
ಮೈಸೂರು

ಹಿರಿಯ ಸಾಹಿತಿ ಸಿಪಿಕೆ ನಿವಾಸದಲ್ಲಿ ಪ್ರೊ.ದೇಜಗೌ ಜನ್ಮ ದಿನಾಚರಣೆ

July 7, 2020

ಮೈಸೂರು, ಜು.6(ಎಸ್‍ಪಿಎನ್)- ಹಲವು ವರ್ಷಗಳ ಹಿಂದೆ ಹಿರಿಯ ಸಾಹಿತಿ ಪ್ರೊ.ದೇಜಗೌ ಬರೆದಿದ್ದ `ಕನ್ನಡಿಗರೇ ಎಚ್ಚರಗೊಳ್ಳಿ’ ಪುಸ್ತಕಕ್ಕೆ ಕುವೆಂಪು ಅವರೇ ಆಕರ್ಷಕ ಮುನ್ನುಡಿ ಬರೆದಿದ್ದರು. ಆ ನುಡಿಗಳನ್ನು ಇಂದಿಗೂ ಬಹುತೇಕ ಕನ್ನಡಿಗರು ನೆನಪಿಸಿಕೊಳ್ಳುತ್ತಾರೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಡಾ.ಸಿಪಿಕೆ ನಿವಾಸದಲ್ಲಿ ಕರ್ನಾಟಕ ರತ್ನ ಪ್ರೊ.ದೇಜಗೌ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿ ಸಿದ್ದ ಸರಳ ಸಮಾರಂಭದಲ್ಲಿ ಮಾತನಾ ಡಿದ ಅವರು, ಕುವೆಂಪು ಬರೆದ ಮುನ್ನುಡಿ ಹೀಗಿದೆ. `ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’. `ಕನ್ನಡಕ್ಕಾಗಿ ಕೊರ ಳೆತ್ತು ಪಾಂಚಜನ್ಯ ಮೊಳಗುತ್ತದೆ’… ಎಂದು ಬರೆದಿದ್ದಾರೆ. ಈ ಮುನ್ನುಡಿ ಸಾಕಷ್ಟು ಜನರ ಗಮನ ಸೆಳೆದಿದೆ. ಆದರೆ, ಇತ್ತೀಚೆಗೆ ಈ ಮುನ್ನುಡಿ ವಾಕ್ಯವನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ. ಆದರೆ, ಯಾವ ಪುಸ್ತಕದಲ್ಲಿ ಬರೆದಿದ್ದಾರೆ ಎಂಬುದು ತಿಳಿದಿಲ್ಲ ಎಂದರು.

1957ರಲ್ಲಿ ಬಿಎ ಪದವಿಗೆ ಸೇರಲು ಮೈಸೂರಿಗೆ ಆಗಮಿಸಿದೆ. ಅಂದಿನಿಂದ ಇಂದಿ ನವರೆಗೂ ನನ್ನ ಬೆಳವಣಿಗೆಗೆ ದೇಜಗೌ ಸಹಕಾರ ನನ್ನ ಮೇಲಿದೆ. ಇಂದು ಏನಾ ಗಿದ್ದೇನೋ ಅದಕ್ಕೆಲ್ಲಾ ದೇಜಗೌ ಕಾರಣ. ನಾನು ಏನಾಗಿಲ್ಲವೋ ಅದಕ್ಕೆ ನಾನೇ ಕಾರಣ ಎಂದ ಅವರು, ಕೊರೊನಾ ಇಲ್ಲದಿದ್ದರೆ, ಅದ್ದೂರಿಯಾಗಿಯೇ ನುಡಿ ನಮನ ಆಯೋ ಜಿಸಲು ಸಂಘಟಕರು ತೀರ್ಮಾನಿಸಿದ್ದರು. ಆದರೆ, ಕೊರೊನಾದಿಂದಾಗಿ ಪ್ರೊ.ದೇಜಗೌ ಅವರ ಜನ್ಮ ದಿನಾಚರಣೆ ನಮ್ಮ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದು ಸಂತೋಷಕರ ವಿಷಯ ಎಂದರು.

ಮೈಸೂರು ವಿವಿ ಅಭಿವೃದ್ಧಿ ಜೊತೆಗೆ ಇತರೆ ವಿವಿಗಳ ಸ್ಥಾಪನೆಯಲ್ಲೂ ಪ್ರೊ. ದೇಜಗೌ ಅವರ ಪಾತ್ರ ದೊಡ್ಡದಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸೇರಿದಂತೆ ಇತರೆ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಇದರ ಜೊತೆಗೆ ಕನ್ನಡ ಕೃಷಿಯಲ್ಲೂ ತೊಡಗಿ ದ್ದರು. ಅವರ ಜೀವಿತಾವಧಿಯಲ್ಲಿ ಅನೇಕ ಯುವ ಲೇಖಕರ ಬೆಳವಣಿಗೆಗೂ ಪ್ರೋತ್ಸಾ ಹಿಸಿದ್ದಾರೆ ಎಂದರು. ಈ ವೇಳೆ ಡಾ. ಎಂ.ಜಿ.ಆರ್.ಅರಸ್, ಪ್ರೊ.ಕೆ.ಭೈರವ ಮೂರ್ತಿ, ಜಯಪ್ಪ ಹೊನ್ನಾಳಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಚಂದ್ರ ಶೇಖರ್ ಹಾಗೂ ಯುವ ಬರಹಗಾರ ಸತೀಶ್ ಜವರೇಗೌಡ ಇದ್ದರು

Translate »