ಮೈಸೂರು, ಜು.6-ಹಡಪದ ಅಪ್ಪಣ್ಣ ಲೌಕಿಕವಾಗಿ ಮಾತ್ರ ವಲ್ಲದೇ ಪಾರಮಾರ್ಥಿಕವಾಗಿ ಹಿರಿಮೆ ಹೊಂದಿ ನಿಜಸುಖಿ ಎನಿಸಿಕೊಂಡರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾ ವಣೆಯ ಶರಣು ವಿಶ್ವವಚನ ಫೌಂಡೇಷನ್ ಕಚೇರಿಯಲ್ಲಿ ಹಡಪದ ಅಪ್ಪಣ್ಣ ನವರ 886ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ಜನನ, ಬೆಳ ವಣಿಗೆ ಹಾಗೂ ಕಲ್ಯಾಣಕ್ಕೆ ಯಾವಾಗ ಬಂದರು ಎಂಬುದರ ಬಗ್ಗೆ ಯಾವುದೇ ಕಾವ್ಯ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿಲ್ಲ. ಇತ್ತೀಚೆಗೆ ದೇವದುರ್ಗದ ದೊಡ್ಡಪ್ಪ ತಾತ ಇವರಲ್ಲಿ ದೊರೆತಿರುವ ಕಾಗದ ಪ್ರತಿಯಲ್ಲಿನ ಮಾಹಿತಿ ಪ್ರಕಾರ ಜೀವಣ್ಣ ಎಂಬ ಜನ್ಮನಾಮ ದಿಂದ ಅಪ್ಪಣ್ಣನು ಚೆನ್ನವೀರಪ್ಪ ಮತ್ತು ದೇವಮ್ಮರವರ ಪ್ರಥಮ ಏಕೈಕ ಪುತ್ರನಾಗಿ ಜನಿಸಿದ. ಆ ಪುಣ್ಯದಂಪತಿಗಳು ಕರ್ನಾಟಕ ರಾಜ್ಯ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನಲ್ಲಿ ಮಸಬಿನಾಳ ಎಂಬ ಗ್ರಾಮದ ನಿವಾಸಿಗಳು ಎಂದರು.
ಬಳಿಕ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ, ಅಪ್ಪಣ್ಣನವರು ಹಡಪದ ಕಾಯ ಕದ ಜೊತೆಗೆ ಬಸವಣ್ಣನವರ ಆಪ್ತ ಸಹಾಯಕರಾಗಿ ಮಹಾಮನೆ ಮತ್ತು ಅನುಭವಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಮಿಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಅಲ್ಲಮ ಪ್ರಭು ಕಲ್ಯಾಣಕ್ಕೆ ಬಂದಾಗ ಸೂಕ್ಷ್ಮವಾದ ರೀತಿಯಲ್ಲಿ ದೌತ್ಯ ನಡೆಸಿ ಕಲ್ಯಾಣದ ಕೀರ್ತಿಗೆ ಕಾರಣರಾಗುತ್ತಾರೆ. ಬಸವಣ್ಣನವರ ಜೀವನದ ಕೊನೆ ಕ್ಷಣದವರೆಗೂ ಅವರ ಪ್ರೀತಿಗೆ ಪಾತ್ರರಾದ ಏಕಮಾತ್ರ ವ್ಯಕ್ತಿ ಎಂದರೆ ಅದು ಹಡಪದ ಅಪ್ಪಣ್ಣನವರು. ಬಸವಣ್ಣ ನವರು ಇಹಲೋಕದ ಕರ್ತವ್ಯ ಮುಗಿಸಿ ಕೂಡಲಸಂಗಮದಲ್ಲಿ ಐಕ್ಯರಾಗಲು ಹೊರಡುವಾಗ ಯಾವುದೇ ಶರಣರನ್ನು ಜೊತೆ ಯಲ್ಲಿ ಕರೆದುಕೊಂಡು ಹೋಗದೆ ನೆಚ್ಚಿನ ಹಡಪದ ಅಪ್ಪಣ್ಣನವ ರನ್ನು ಮಾತ್ರ ತಮ್ಮ ಸಂಗಡ ಕರೆದುಕೊಂಡು ಹೋದುದನ್ನು ಗಮನಿಸಿದರೆ ಹಡಪದ ಅಪ್ಪಣ್ಣನವರಿಗೆ ಯಾವ ಸ್ಥಾನ ನೀಡಿ ದ್ದರು ಎಂಬುದು ಅರ್ಥವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಗೌರವಾಧ್ಯಕ್ಷ ಚನ್ನಬಸಪ್ಪ, ಗಿರಿಜೇಶ್, ಆದರ್ಶ್ ಮತ್ತು ವಚನ ಉಪಸ್ಥಿತರಿದ್ದರು.